ಶಬರಿಮಲೆ ವಿವಾದ: ಪ್ರವೇಶಕ್ಕೆ ಅನುಮತಿ ಇಲ್ಲ

Team Udayavani, Dec 13, 2019, 7:57 PM IST

ನವದೆಹಲಿ: ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಪ್ರವೇಶಕ್ಕೆ ಅವಕಾಶ ಮತ್ತು ರಕ್ಷಣೆ ನೀಡಬೇಕು ಎಂದು ಸಲ್ಲಿಸಲಾಗಿರುವ ಅರ್ಜಿಗಳ ಬಗ್ಗೆ ತಕ್ಷಣವೇ ಆದೇಶ ನೀಡಲು ಸುಪ್ರೀಂಕೋರ್ಟ್‌ ಶುಕ್ರವಾರ ನಿರಾಕರಿಸಿದೆ. ಹೋರಾಟಗಾರ್ತಿಯರಾಗಿರುವ ಬಿಂದು ಅಮ್ಮಿಣಿ ಮತ್ತು ಎಸ್‌.ಫಾತಿಮಾ ಎಂಬುವರು ಈ ಅರ್ಜಿ ಸಲ್ಲಿಕೆ ಮಾಡಿದ್ದರು.

ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೋಬೆx ನೇತೃತ್ವದ ಪೀಠ “ಇದೊಂದು ಅತ್ಯಂತ ಭಾವನಾತ್ಮಕ ವಿಚಾರ. ಹೀಗಾಗಿ ತಕ್ಷಣದಲ್ಲಿಯೇ ಆದೇಶ ನೀಡಲು ಸಾಧ್ಯವಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ವಿಚಾರ ಈಗ ವಿಸ್ತೃತ ಪೀಠಕ್ಕೆ ವರ್ಗಾವಣೆಯಾಗಿದೆ. ವಿಸ್ತೃತ ಪೀಠ ಇನ್ನಷ್ಟೇ ರಚನೆಯಾಗಬೇಕಿದೆ. ಅಲ್ಲಿ ತನಕ ಮಹಿಳೆಯರ ಪ್ರವೇಶ ನಿಟ್ಟಿನಲ್ಲಿ ಯಾವುದೇ ಆದೇಶ ನೀಡಲು ಸಾಧ್ಯವಾಗದು’ ಎಂದು ಸ್ಪಷ್ಟಪಡಿಸಿತು. ಈ ಪೀಠದಲ್ಲಿ ನ್ಯಾಯಮೂರ್ತಿ ಬಿ ಆರ್‌ ಗವಾಯ್‌ ಹಾಗೂ ನ್ಯಾ. ಸೂರ್ಯಕಾಂತ್‌ ಇದ್ದಾರೆ.
ಯಾವುದನ್ನಾದರೂ ಖಚಿತಪಡಿಸಿ ಎಂದು ವಕೀಲೆ ಇಂದಿರಾ ಜೈಸಿಂಗ್‌ ಆಗ್ರಹಕ್ಕೂ ಮಣಿಯದ ನ್ಯಾಯಪೀಠ, ” ಈ ದೇಶದಲ್ಲಿ ಕೆಲವೊಂದು ಆಚರಣೆಗಳು ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಅದು ಭಾವನಾತ್ಮಕವಾಗಿದೆ. ಅದರಲ್ಲಿ ಇದೂ ಒಂದು. ದೇಶದಲ್ಲಿ ಹಿಂಸೆಗೆ ನಾವು ಅವಕಾಶ ಕೊಡುವುದಿಲ್ಲ ಎಂದು ಹೇಳಿತು. ಹೀಗಾಗಿ, ಯಾವುದೇ ಆದೇಶ ನೀಡಲು ಸಾಧ್ಯವಾಗದು ಎಂದು ಎಂದು ಹೇಳಿತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ