ಪಂಜಾಬ್‌ ಎನ್‌ಡಿಎ ಸೀಟು ಹಂಚಿಕೆ :13ರ ಪೈಕಿ 3 ರಲ್ಲಿ ಬಿಜೆಪಿ ಸ್ಪರ್ಧೆ

Team Udayavani, Feb 28, 2019, 1:34 PM IST

ಅಮೃತಸರ: ಲೋಕಸಭಾ ಚುನಾವಣೆಗೆ ಪಂಜಾಬ್‌ನಲ್ಲಿ ಎನ್‌ಡಿಎ ಸೀಟು ಹಂಚಿಕೆ ಮಾಡಿಕೊಂಡಿದ್ದು, 13 ಕ್ಷೇತ್ರಗಳ ಪೈಕಿ 3 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸಲಿದ್ದು, ಶಿರೋಮಣಿ ಅಕಾಲಿದಳ 10 ಕ್ಷೇತ್ರಗಳಲ್ಲಿ  ಸ್ಪರ್ಧೆಗಳಿಯಲಿದೆ. 2014 ರಲ್ಲಿ ಹಂಚಿಕೆ ಮಾಡಿದ ರೀತಿಯಲ್ಲೇ ಸೀಟು ಹಂಚಿಕೆ ಮಾಡಿಕೊಳ್ಳಲಾಗಿದೆ. 

ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಗುರುವಾರ ಅಕಾಲಿದಳದ ನಾಯಕರೊಂದಿಗೆ ಮಾತುಕತೆ ನಡೆಸಿ ಸೀಟು ಹಂಚಿಕೆ ಬಗ್ಗೆ ಘೋಷಿಸಿದರು. 

2014 ರಲ್ಲಿ  ದೇಶದೆಲ್ಲೆಡೆ ಮೋದಿ ಅಲೆ ಇದ್ದ ಹೊರತಾಗಿಯೂ ಪಂಜಾಬ್‌ನಲ್ಲಿ ಎನ್‌ಡಿಎ ಮೈತ್ರಿಕೂಟ ಹಿನ್ನಡೆ ಅನುಭವಿಸಿತ್ತು. 13 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ 3 ರಲ್ಲಿ ಜಯ ಸಾಧಿಸಿದ್ದರೆ,ಆಮ್‌ ಆದ್ಮಿ ಪಕ್ಷ 4 ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಸಾಧನೆ ತೋರಿತ್ತು. ಬಿಜೆಪಿ 2 ಮತ್ತು ಅಕಾಲಿ ದಳ 4 ಸ್ಥಾನಗಳನ್ನು ಗೆದ್ದಿತ್ತು. 

ಗುರುದಾಸ್‌ಪುರ್‌ನ ಸಂಸದರಾಗಿದ್ದ ವಿನೋದ್‌ ಖನ್ನಾ  ಅಕಾಲಿಕ ಮರಣ ಹೊಂದಿದ ಕಾರಣ ಎದುರಾದ ಉಪಚುನಾವಣೆಯಲ್ಲಿ ಬಿಜೆಪಿ ಅಘಾತಕಾರಿ ಸೋಲನ್ನಪ್ಪುವ ಮೂಲಕ ಕ್ಷೇತ್ರವನ್ನು ಕಾಂಗ್ರೆಸ್‌‌ಗೆ ಬಿಟ್ಟುಕೊಟ್ಟಿತ್ತು. 

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ