“ಹೇಮಂತ್‌ ಕರ್ಕರೆ ಸಾವಿಗೆ ನನ್ನ ಶಾಪ ಕಾರಣ’

Team Udayavani, Apr 20, 2019, 6:00 AM IST

ಭೋಪಾಲ್‌: ಮಾಲೇಗಾಂವ್‌ ಸ್ಫೋಟದ ಆರೋಪಿ, ಭೋಪಾಲ್‌ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕೂರ್‌ ಗುರುವಾರದ ಸುದ್ದಿಗೋಷ್ಠಿ ವೇಳೆ ನೀಡಿದ ಹೇಳಿಕೆಯೊಂದು ಭಾರೀ ವಿವಾದ ಸೃಷ್ಟಿಸಿದೆ. 26/11ರ ಮುಂಬಯಿ ಉಗ್ರರ ದಾಳಿಯ ಹೀರೋ, ಅಶೋಕ ಚಕ್ರ ಪುರಸ್ಕೃತ ಹೇಮಂತ್‌ ಕರ್ಕರೆ ಅವರ ಸಾವಿಗೆ ತಾವು ಹಾಕಿದ್ದ ಶಾಪವೇ ಕಾರಣ ಎಂದು ಪ್ರಜ್ಞಾ ಹೇಳಿದ್ದು, ಇದೀಗ ವ್ಯಾಪಕ ಆಕ್ರೋ ಶಕ್ಕೆ ಕಾರಣವಾಗಿದೆ. ಇದು ವಿವಾದದ ಸ್ವರೂಪ ತಳೆಯುತ್ತಿದ್ದಂತೆ ಪ್ರತಿಕ್ರಿಯಿಸಿದ ಸಾಧ್ವಿ ಪ್ರಜ್ಞಾ , ನನ್ನ ಹೇಳಿಕೆಯನ್ನು ವಾಪಸ್‌ ಪಡೆಯುತ್ತೇನೆ ಮತ್ತು ಕ್ಷಮೆ ಕೋರುತ್ತೇನೆ ಎಂದಿದ್ದಾರೆ.

ಗುರುವಾರ ರಾತ್ರಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ಸಾಧ್ವಿ ಪ್ರಜ್ಞಾ, “ಉಗ್ರ ನಿಗ್ರಹ ದಳದ ಮುಖ್ಯಸ್ಥರಾಗಿದ್ದ ಹೇಮಂತ್‌ ಕರ್ಕರೆ ನನಗೆ ಜೈಲಿನಲ್ಲಿ ಸಹಿಸಿಕೊಳ್ಳಲಾಗದಷ್ಟು ಹಿಂಸೆ ನೀಡಿದ್ದರು. ನಾನು ಮುಂಬಯಿ ಜೈಲಿನಲ್ಲಿದ್ದಾಗ, ತನಿಖಾ ಸಮಿತಿಯ ಸದಸ್ಯ ರೊಬ್ಬರು ಕರ್ಕರೆ ಅವರನ್ನು ಮುಂಬಯಿಗೆ ಕರೆಸಿ ಕೊಂಡಿದ್ದರು. ಸಾಧ್ವಿ ವಿರುದ್ಧ ಸಾಕ್ಷ್ಯ ಸಿಗದಿದ್ದರೆ ಅವರನ್ನು ಬಿಡುಗಡೆ ಮಾಡಿ ಎಂದು ಹೇಳಿದ್ದರು. ಆದರೆ, ಅದಕ್ಕೆ ಒಪ್ಪದ ಕರ್ಕರೆ, ಅವರ ವಿರುದ್ಧ ಸಾಕ್ಷ್ಯವನ್ನು ನಾನು ಸಂಗ್ರಹಿಸುತ್ತೇನೆಯೇ ಹೊರತು ಬಿಡುಗಡೆ ಮಾಡುವು ದಿಲ್ಲ ಎಂದಿದ್ದರು. ಅವತ್ತೇ ನಾನು “ನೀನು ಸರ್ವನಾಶ ಆಗುತ್ತಿ’ ಎಂದು ಶಾಪ ಹಾಕಿದ್ದೆ. ಅದಾದ 2 ತಿಂಗಳೊ ಳಗಾಗಿ, 26/11ರ ದಾಳಿಯಲ್ಲಿ ಕರ್ಕರೆ ಕೊಲೆಯಾದರು. ಅವತ್ತಿಗೆ ಸೂತಕವೂ ಮುಗಿಯಿತು’ ಎಂದು ಹೇಳಿದ್ದರು.

ವ್ಯಾಪಕ ಆಕ್ರೋಶ: ಸಾಧ್ವಿ ಹೇಳಿಕೆ ವಿಡಿಯೋ ಬಹಿರಂಗ ವಾಗುತ್ತಿದ್ದಂತೆ, ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸ್ವತಃ ಬಿಜೆಪಿ ನಾಯಕ ಶಹನವಾಜ್‌ ಹುಸೇನ್‌ ಕೂಡ ಅಸ ಮಾಧಾನ ವ್ಯಕ್ತಪಡಿಸಿದ್ದು, ದೇಶಕ್ಕಾಗಿ ಮಡಿದ ಹುತಾತ್ಮರ ಬಗ್ಗೆ ಪ್ರಶ್ನೆ ಮಾಡುವುದು ಸರಿಯಲ್ಲ ಎಂದಿದ್ದಾರೆ. ಭೋಪಾಲ್‌ ಕಾಂಗ್ರೆಸ್‌ ಅಭ್ಯರ್ಥಿ ದಿಗ್ವಿಜಯ್‌ ಸಿಂಗ್‌, “ಕರ್ಕರೆ ಒಬ್ಬ ಬದ್ಧತೆಯುಳ್ಳ ಅಧಿಕಾರಿ. ದೇಶಕ್ಕಾಗಿ ತಮ್ಮ ಪ್ರಾಣ ಅರ್ಪಿಸಿದವರು. ನಾವೆಲ್ಲರೂ ಅವರ ಬಗ್ಗೆ ಹೆಮ್ಮೆ ಪಡಬೇಕು. ಅವರ ವಿರುದ್ಧ ಹೇಳಿಕೆ ನೀಡುವುದು ಸರಿಯಲ್ಲ’ ಎಂದು ಹೇಳಿದ್ದಾರೆ. ಇದೇ ವೇಳೆ, ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ ಅವರೂ ಸಾಧ್ವಿ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದು, “ಬಿಜೆಪಿಯ ನಿಜ ಬಣ್ಣ ಬಯ ಲಾಯಿತು’ ಎಂದಿದ್ದಾರೆ. ಇನ್ನೊಂದೆಡೆ, ಸಾಧ್ವಿ ಹೇಳಿಕೆ ಕುರಿತು ದೂರು ದಾಖಲಾಗಿದ್ದು, ಅದರ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಮಧ್ಯಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿ ಹೇಳಿದ್ದಾರೆ.

ಐಎಎಸ್‌ ಅಧಿಕಾರಿಗಳ ಸಂಘ ಖಂಡನೆ: ಸಾಧ್ವಿಯ ಹೇಳಿಕೆಯನ್ನು ಐಪಿಎಸ್‌ ಅಧಿಕಾರಿಗಳ ಸಂಘವೂ ಖಂಡಿ ಸಿದೆ. “ಅಶೋಕ ಚಕ್ರ ಪುರಸ್ಕೃತ ಐಪಿಎಸ್‌ ಅಧಿಕಾರಿ ಹೇಮಂತ ಭಯೋತ್ಪಾದಕರ ವಿರುದ್ಧ ಹೋರಾಡಿ ಪ್ರಾಣವನ್ನೇ ತ್ಯಾಗ ಮಾಡಿದವರು. ಅವರ ಬಗ್ಗೆ ಅವಹೇಳ ನಕಾರಿ ಹೇಳಿಕೆಯನ್ನು ನಾವು ಖಂಡಿಸುತ್ತೇವೆ ಮತ್ತು ನಮ್ಮೆಲ್ಲ ಹುತಾತ್ಮರ ತ್ಯಾಗ ಗೌರವಿಸಬೇಕು ಎಂದು ಕೋರುತ್ತೇವೆ’ ಎಂದು ಸಂಘ ಟ್ವೀಟ್‌ ಮಾಡಿದೆ.

ಹೇಮಂತ್‌ ಕರ್ಕರೆ ಮೃತಪಟ್ಟಿದ್ದು ಹೇಗೆ?
ಮುಂಬಯಿ ದಾಳಿ ನಡೆದ 2008ರ ನವೆಂಬರ್‌ 26ರಂದು ರಾತ್ರಿ 9.45ಕ್ಕೆ ಮನೆಯಲ್ಲಿ ಆಹಾರ ಸೇವಿಸುತ್ತಿದ್ದ ಹೇಮಂತ್‌ ಕರ್ಕರೆ ಅವರಿಗೆ ದೂರವಾಣಿ ಕರೆಯೊಂದು ಬರುತ್ತದೆ. ಕರೆ ಮಾಡಿದವರು, ತಾಜ್‌ ಹೋಟೆಲ್‌ ಮತ್ತು ಸಿಎಸ್‌ಟಿ ರೈಲು ನಿಲ್ದಾಣದ ಮೇಲೆ ಉಗ್ರರು ದಾಳಿ ಮಾಡಿರುವುದಾಗಿ ಮಾಹಿತಿ ನೀಡುತ್ತಾರೆ. ಕೂಡಲೇ ಮನೆಯಿಂದ ಹೊರಡುವ ಕರ್ಕರೆ, ನೇರವಾಗಿ ಸಿಎಸ್‌ಟಿಗೆ ತೆರಳುತ್ತಾರೆ. ಆದರೆ, ಅಲ್ಲಿ ಯಾರೂ ಇರುವುದಿಲ್ಲ. ಅಷ್ಟರಲ್ಲಿ ಅವರಿಗೆ ಮತ್ತೂಂದು ಕರೆ ಬರುತ್ತದೆ. ಉಗ್ರರು ಕಾಮಾ ಮತ್ತು ಅಲೆºಸ್‌ ಆಸ್ಪತ್ರೆಯತ್ತ ಹೋಗಿದ್ದು, ಆ ಕಡೆ ತೆರಳುವಂತೆ ಸೂಚನೆ ಬರುತ್ತದೆ. ತತ್‌ಕ್ಷಣ ಎಟಿಎಸ್‌ ಮುಖ್ಯಸ್ಥ ಕರ್ಕರೆ, ಎಸಿಪಿ ಅಶೋಕ್‌ ಕಾಮ್ಟೆ, ಹಿರಿಯ ಪೊಲೀಸ್‌ ಅಧಿಕಾರಿ ವಿಜಯ ಸಾಲಸ್ಕರ್‌ ಹಾಗೂ ಇತರೆ ಕೆಲವು ಕಾನ್‌ಸ್ಟೆಬಲ್‌ಗ‌ಳು ಕ್ವಾಲಿಸ್‌ ಜೀಪಿನಲ್ಲಿ ಕಾಮಾ ಆಸ್ಪತ್ರೆಯತ್ತ ತೆರಳುತ್ತಾರೆ. ಆಸ್ಪತ್ರೆ ಬಳಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಅಧಿಕಾರಿಗಳೂ ಸಾವಿಗೀಡಾಗುತ್ತಾರೆ. ಕರ್ಕರೆ ಅವರ ಎದೆಗೆ ಮೂರು ಗುಂಡುಗಳು ತಗುಲುವ ಕಾರಣ ಅವರು ಸ್ಥಳದಲ್ಲೇ ಅಸುನೀಗುತ್ತಾರೆ.

ಭಯೋತ್ಪಾದಕರ ವಿರುದ್ಧ ಹೋರಾಡುತ್ತಾ ಕರ್ಕರೆ ಹುತಾತ್ಮರಾಗಿದ್ದಾರೆ ಎಂದೇ ಬಿಜೆಪಿ ನಂಬುತ್ತದೆ. ನಾವು ಯಾವತ್ತೂ ಅವರನ್ನು ಹುತಾತ್ಮ ಎಂದೇ ಪರಿಗಣಿಸುತ್ತೇವೆ. ಸಾಧ್ವಿಯವರದ್ದು ಅವರ ವೈಯಕ್ತಿಕ ಹೇಳಿಕೆ.
ಬಿಜೆಪಿ

26/11ರ ಹುತಾತ್ಮ ಕರ್ಕರೆ ಅವರನ್ನು ದೇಶ ದ್ರೋಹಿ ಎಂದು ಘೋಷಿಸು ವಂಥ ಅಪರಾಧ ವನ್ನು ಬಿಜೆಪಿ ಮಾತ್ರವೇ ಮಾಡಲು ಸಾಧ್ಯ. ಸಾಧ್ವಿ ವಿರುದ್ಧ ಬಿಜೆಪಿ ಕೂಡಲೇ ಕ್ರಮ ಕೈಗೊಳ್ಳಬೇಕು. ಪ್ರಧಾನಿ ಮೋದಿ ದೇಶದ ಕ್ಷಮೆ ಕೇಳಬೇಕು.
ಕಾಂಗ್ರೆಸ್‌

ನಾವು ಮೌಡ್ಯ ವಿರೋಧಿ ವಿಧೇಯಕದ ಮೂಲಕ ಮೂಢನಂಬಿಕೆಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿ ಸಲು ಯತ್ನಿಸುತ್ತಿದ್ದೇವೆ. ಆದರೆ ಬಿಜೆಪಿ ಅಭ್ಯರ್ಥಿಯು ಎಟಿಎಸ್‌ ಮುಖ್ಯಸ್ಥರ ಜೀವಕ್ಕೆ ಹಾನಿಯುಂಟುಮಾಡಲು ಅತೀಂದ್ರಿಯ ಶಕ್ತಿಯನ್ನು ಬಳಸಿದ್ದೇವೆ ಎಂದು ಹೇಳುತ್ತಿದ್ದಾರೆ. ನೆನಪಿಡಿ, ನೀವು ಬಿಜೆಪಿಗೆ ಮತ ಹಾಕಿದರೆ, ಮೂರ್ಖರಾಗುತ್ತೀರಿ.
ಸಿದ್ದರಾಮಯ್ಯ, ಮಾಜಿ ಮುಖ್ಯ ಮಂತ್ರಿ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಕಡೂರು: ತಾಲೂಕಿಗೆ ಕೃಷ್ಣಾ ಕೊಳ್ಳದಿಂದ ಮಂಜೂರಾಗಿರುವ 1.45 ಟಿಎಂಸಿ ನೀರಿನ ಸದುಪಯೋಗ ಸಂಪೂರ್ಣವಾಗಿ ತಾಲೂಕಿಗೆ ಲಭಿಸಲಿ ಎಂದು ಮಾಜಿ ಶಾಸಕ ವೈ.ಎಸ್‌.ವಿ ದತ್ತ ಹೇಳಿದರು. ಸುದ್ದಿಗೋಷ್ಠಿಯಲ್ಲಿ...

  • ಚಿತ್ರದುರ್ಗ: ಕಳೆದೊಂದು ವಾರದಿಂದ ಜೋಗಿಮಟ್ಟಿ ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟಿದ್ದ ಒಂಟಿ ಸಲಗವನ್ನು ಕಡೆಗೂ ಸೆರೆ ಹಿಡಿಯಲಾಗಿದೆ. ದಸರಾ ಆನೆ ಅಭಿಮನ್ಯು ನೇತೃತ್ವದ...

  • ರಾಮನಗರ: ತಾಲೂಕಿನ ಕೈಲಾಂಚ ಹೋಬಳಿ ವಿಭೂತಿಕೆರೆ ಗ್ರಾಮದ ಮಾವಿನ ತೋಟವೊಂದರಲ್ಲಿ ಶನಿವಾರ ರಾತ್ರಿ ನಡೆಯುತ್ತಿದ್ದ ಅಕ್ರಮ ರೇವ್‌ ಪಾರ್ಟಿಯ ಮೇಲೆ ಗ್ರಾಮಾಂತರ...

  • ತಿರುವನಂತಪುರಂ:  ಭಾರತ ಟಿ20 ತಂಡದಲ್ಲಿ ಸ್ಥಾನ ಪಡೆದಿರುವ ಕೇರಳದ ವಿಕೆಟ್‌ ಕೀಪರ್‌, ಬ್ಯಾಟ್ಸ್‌ಮನ್‌ ಸಂಜು ಸ್ಯಾಮ್ಸನ್‌, ತಿರುವನಂತಪುರಂಗೆ ಭಾರತ ತಂಡದೊಂದಿಗೆ...

  • ಹರಪನಹಳ್ಳಿ: ಮುಂದಿನ ದಿನಗಳಲ್ಲಿ ಉಪನ್ಯಾಸಕರ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದರೆ ದ್ವಿತೀಯ ಪಿಯುಸಿ ಪರೀಕ್ಷೆಯ ಮೌಲ್ಯಮಾಪನ ಬಹಿಷ್ಕಾರಕ್ಕೆ ಉಪನ್ಯಾಸಕರು...