ಸಲ್ಮಾನ್‌, ಕೊಹ್ಲಿ ಭಾರತದ ಶ್ರೀಮಂತ ತಾರೆಯರು

Team Udayavani, Dec 6, 2018, 6:00 AM IST

ಹೊಸದಿಲ್ಲಿ: ಫೋರ್ಬ್ಸ್ ಇಂಡಿಯಾದ 100 ಶ್ರೀಮಂತ ತಾರೆಯರ ಪಟ್ಟಿ ಬಿಡುಗಡೆಯಾಗಿದ್ದು, ಭಾರತದ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ, ಹಿಂದಿನ ಗಳಿಕೆಗಳನ್ನೆಲ್ಲ ಕಸದ ಬುಟ್ಟಿಗೆ ತಳ್ಳಿ 2ನೇ ಸ್ಥಾನಕ್ಕೇರಿದ್ದಾರೆ. ಕ್ರೀಡಾಪಟುಗಳ ಶ್ರೀಮಂತಿಕೆಯನ್ನಷ್ಟೇ ಪರಿಗಣಿಸಿದರೆ ಕೊಹ್ಲಿ ದೇಶದಲ್ಲೇ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. ಅವರ ಗಳಿಕೆ 228.09 ಕೋಟಿ ರೂಪಾಯಿ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ದುಪ್ಪಟ್ಟಾಗಿದೆ!

ಸಲ್ಮಾನ್‌ ನಂ.1, ಶಾರುಖ್‌ ನಂ.13
2017 ಅ. 1ರಿಂದ 2018 ಸೆ. 30ರ ವರೆಗೆ ಭಾರತದ ತಾರೆಯರು ಗಳಿಸಿದ ಆದಾಯವನ್ನು ಪರಿಗಣಿಸಿ ಅವರ ಶ್ರೀಮಂತಿಕೆಯನ್ನು ಫೋರ್ಬ್ಸ್ ಲೆಕ್ಕಾಚಾರ ಮಾಡಿದೆ. ಬಾಲಿವುಡ್‌ ದಿಗ್ಗಜ ಸಲ್ಮಾನ್‌ ಖಾನ್‌ ಸತತ 3ನೇ ವರ್ಷವೂ ನಂ.1 ಎನಿಸಿ ಕೊಂಡಿ ದ್ದಾರೆ. ಅವರ ಗಳಿಕೆ 253.25 ಕೋಟಿ ರೂ. ಈ ಕಳೆದ ವರ್ಷ 2ನೇ ಸ್ಥಾನದಲ್ಲಿದ್ದ ಬಾಲಿವುಡ್‌ ಬಾದ್‌ ಶಾ ಶಾರುಖ್‌ ಖಾನ್‌ ಈ ಬಾರಿ 13ನೇ ಸ್ಥಾನಕ್ಕೆ ಕುಸಿದಿದ್ದಾರೆ. ಅವರ ಗಳಿಕೆ 56 ಕೋಟಿ ರೂ.ಗಿಳಿದಿರುವುದಕ್ಕೆ ಕಾರಣ, ಫೋಬ್ಸ್ì ಲೆಕ್ಕಾಚಾರದ ಅವಧಿಯಲ್ಲಿ ಅವರ ಯಾವುದೇ ಸಿನೆಮಾ ಗಳು ಬಿಡುಗಡೆಯಾಗದಿರುವುದು. 

ದೀಪಿಕಾ ಶ್ರೀಮಂತ ತಾರಾ ಮಹಿಳೆ
ನಟಿ ದೀಪಿಕಾ ಪಡುಕೋಣೆ 4ನೇ ಸ್ಥಾನಕ್ಕೇರಿ ಶ್ರೀಮಂತ ನಟಿ ಎನಿಸಿಕೊಂಡಿದ್ದಾರೆ. 112.8 ಕೋಟಿ ರೂ. ಗಳಿ ಸಿರುವ ಅವರು ಅಗ್ರ 10ನೇ ಸ್ಥಾನಕ್ಕೇರಿದ ಮೊದಲ ನಟಿ. 101.77 ಕೋಟಿ ರೂ. ಗಳಿಸಿರುವ ಧೋನಿ 5ನೇ ಸ್ಥಾನದಲ್ಲಿದ್ದಾರೆ. ಸಚಿನ್‌ ತೆಂಡುಲ್ಕರ್‌ 9ನೇ ಶ್ರೀಮಂತ ತಾರೆ. ಅವರ ಗಳಿಕೆ 80 ಕೋಟಿ ರೂ. 

ಕೊಹ್ಲಿ ಗಳಿಕೆಯಲ್ಲಿ ವೇತನ ಸೇರಿಲ್ಲ !
ವಿಶ್ವದ ಅತೀ ಶ್ರೀಮಂತ ಕ್ರಿಕೆಟಿಗನಾಗಿರುವ ವಿರಾಟ್‌ ಕೊಹ್ಲಿ, ವಿಶ್ವದ ಶ್ರೀಮಂತ ಕ್ರೀಡಾಪಟುಗಳ ಸಾಲಿನಲ್ಲೂ ತಮ್ಮ ಸ್ಥಾನವನ್ನು ಏರಿಸಿಕೊಳ್ಳುವ ಹಾದಿಯಲ್ಲಿದ್ದಾರೆ. ಪ್ರಸ್ತುತ ಅತೀ ಹೆಚ್ಚು ಮಾರುಕಟ್ಟೆ ಹೊಂದಿರುವ ಕ್ರೀಡಾಪಟು ಎಂಬ ಹೆಗ್ಗಳಿಕೆಯನ್ನೂ ಹೊಂದಿದ್ದಾರೆ. 17ಕ್ಕೂ ಹೆಚ್ಚು ಬ್ರ್ಯಾಂಡ್‌ಗಳಿಗೆ ಅವರು ಜಾಹೀರಾತು ನೀಡುತ್ತಿದ್ದಾರೆನ್ನಲಾಗಿದೆ. ಅಚ್ಚರಿ ಎಂದರೆ ಕೊಹ್ಲಿ ಗಳಿಕೆಯಲ್ಲಿ ಬಿಸಿಸಿಐ ನೀಡುತ್ತಿರುವ 7 ಕೋಟಿ ರೂ. ವಾರ್ಷಿಕ ವೇತನ, ಐಪಿಎಲ್‌ ತಂಡ ಆರ್‌ಸಿಬಿ ನೀಡುತ್ತಿರುವ 17 ಕೋಟಿ ರೂ. ವೇತನ ಸೇರಿಲ್ಲ.

ಬಾಲಿವುಡ್‌ ದೊರೆ ಸಲ್ಮಾನ್‌ ಆದಾಯ 253 ಕೋಟಿ ರೂ.
ಕ್ರಿಕೆಟಿಗ ವಿರಾಟ್‌ ಕೊಹ್ಲಿ  ಗಳಿಕೆ 228 ಕೋಟಿ ರೂ.
13ನೇ ಸ್ಥಾನಕ್ಕೆ  ಕುಸಿದ ಶಾರುಖ್‌ ಗಳಿಕೆ ಕೇವಲ 56 ಕೋಟಿ ರೂ.
ದೀಪಿಕಾ ಶ್ರೀಮಂತ ಮಹಿಳೆ, ಗಳಿಕೆ 112 ಕೋಟಿ ರೂ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ