ಸಲ್ಮಾನ್‌ ಖಾನ್‌ ಗೆ ಜಾಮೀನು : 2 ದಿನಗಳ ಜೈಲು ವಾಸ ಅಂತ್ಯ 

Team Udayavani, Apr 7, 2018, 3:07 PM IST

ಜೋಧ್‌ಪುರ: ಕೃಷ್ಣ ಮೃಗ ಬೇಟೆಪ್ರಕರಣದಲ್ಲಿ 5 ವರ್ಷಗಳ ಶಿಕ್ಷೆಗೊಳಗಾಗಿ  ಜೈಲು ಪಾಲಾಗಿದ್ದ  ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಗೆ ಶನಿವಾರ ಜಾಮೀನು ದೊರಕಿದ್ದು ಜೈಲಿನಿಂದ ಬಿಡುಗಡೆಯಾಗವು ಭಾಗ್ಯ ದೊರಕಿದೆ.

ಜಾಮೀನು ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿಗಳು ಜಾಮೀನು ಮಂಜೂರು ಮಾಡಿದರು. ಜಾಮೀನು ದೊರಕುತ್ತಿದ್ದಂತೆ ಸಲ್ಮಾನ್‌ ಅಭಿಮಾನಿಗಳು ಕೇಕೆ ಹಾಕಿ ಸಂಭ್ರಮಿಸಿದ್ದಾರೆ. 

ಕೋರ್ಟ್‌ ತೀರ್ಪಿನಿಂದಾಗಿ ಅವರ ಚಿತ್ರಗಳಿಗೆ ಹಣ ಹೂಡಿದ್ದ ನಿರ್ಮಾಪಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. 

ಸ್ಥಳೀಯ ನ್ಯಾಯಾಲಯದಲ್ಲಿ ಶುಕ್ರವಾರ ಆರಂಭಗೊಂಡ ವಿಚಾರಣೆ ವೇಳೆ, ಭಾರೀ ವಾದ, ಪ್ರತಿವಾದಗಳು ನಡೆದು ಅಂತಿಮ ನಿರ್ಧಾರಕ್ಕೆ ಅವಕಾಶವಾಗದ ಕಾರಣ, ವಿಚಾರಣೆಯನ್ನು ನ್ಯಾಯಾಧೀಶರು ಶನಿವಾರ ಬೆಳಗ್ಗೆಗೆ ಮುಂದೂಡಿದ್ದರು.

1998ರಲ್ಲಿ ರಾಜಸ್ಥಾನದ ಜೋಧಪುರ ಬಳಿ ಕೃಷ್ಣ ಮೃಗಗಳ ಬೇಟೆ ಪ್ರಕರಣಕ್ಕೆ ಸಂಬಂಧಿಸಿ,  ಜೋಧ್‌ಪುರ ನ್ಯಾಯಾಲಯ, ಗುರುವಾರ ಖಾನ್‌ಗೆ 5 ವರ್ಷಗಳ ಜೈಲು ಹಾಗೂ 10,000 ದಂಡ ವಿಧಿಸಿತ್ತು. ತೀರ್ಪಿನ ಬೆನ್ನಲ್ಲೇ ಅವರನ್ನು ಜೈಲಿಗೆ ರವಾನಿಸಲಾಗಿತ್ತು. ಶುಕ್ರವಾರದ ವಿಚಾರಣೆ ವೇಳೆ, ಸಲ್ಮಾನ್‌ ಪರ ವಕೀಲರು, 1998ರ ಪ್ರಕರಣದಲ್ಲಿಯೂ ಅವರು ಶಸ್ತ್ರಾಸ್ತ್ರ ಬಳಸಿದ್ದಕ್ಕೆ ಯಾವುದೇ ಪುರಾವೆಯಿಲ್ಲ. ತನಿಖೆಯಲ್ಲಿ ಸಾಕಷ್ಟು ಲೋಪಗಳಾಗಿವೆ. ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆಗಳು ನಂಬುವಂತೆ ಇಲ್ಲ ಎಂದು ವಾದಿಸಿದ್ದರು. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಕೋಲಾರ: ಕಂದಾಯ ಮತ್ತು ಸರ್ವೇ ಇಲಾಖೆ ರೈತರ ರಕ್ತ ಹೀರುತ್ತಿದ್ದು, ಇವೆರಡೂ ಇಲಾಖೆ ಸರಿಪಡಿಸಿದರೆ ಮಾತ್ರ ಭ್ರಷ್ಟಾಚಾರ ಎನ್ನುವುದು ಶೇ.5 ಹತೋಟಿಗೆ ಬಂದು ಜನಸಾಮಾನ್ಯರು...

  • ಏಟು ತಿಂದ ಬೋರ್‌ವೆಲ್‌ಮೇಲ್ವಿಚಾರಕ ಮೂಡುಬಿದಿರೆ: ಪುತ್ತಿಗೆ ಗ್ರಾ.ಪಂ. ವ್ಯಾಪ್ತಿಯ ಹಂಡೇಲು ಶಾಲೆಯ ಬಳಿ ಸರಕಾರಿ ಜಾಗದಲ್ಲಿ ಬೋರ್‌ವೆಲ್‌ ಕಾಮಗಾರಿಯ ಮೇಲ್ವಿಚಾರಣೆ...

  • ಪುತ್ತೂರು: ಖ್ಯಾತ ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್‌ ದಂಪತಿ ಸಂಚರಿಸುತ್ತಿದ್ದ ಕ್ವಿಡ್‌ ಕಾರು ಪಲ್ಟಿಯಾದ ಘಟನೆ ತಿಂಗಳಾಡಿ ಬಳಿಯ ತ್ಯಾಗರಾಜ ನಗರದ ತಿರುವಿನಲ್ಲಿ...

  • ಗದಗ: ಬರದಂತಹ ಸಂಕಷ್ಟ ಸ್ಥಿತಿಯಲ್ಲಿ ತಾಲೂಕು ಹಾಗೂ ಗ್ರಾಪಂ ಮಟ್ಟದ ಅಧಿಕಾರಿ, ಸಿಬ್ಬಂದಿ ಹಾಗೂ ಕಂದಾಯ ನಿರೀಕ್ಷಕರು ಪ್ರತಿ ಹಳ್ಳಿ ಹಳ್ಳಿಗೆ ತೆರಳಿ ಜನರ ಸಮಸ್ಯೆಗಳನ್ನು...

  • ಬ್ರಹ್ಮಾವರ: ಉಪ್ಪೂರು ಬಳಿ ರಾ.ಹೆ. 66ರಲ್ಲಿ ಲಾರಿಗೆ ಪಿಕ್‌ಅಪ್‌ ವಾಹನ ಢಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ರವಿವಾರ ಮುಂಜಾನೆ ನಡೆದಿದೆ. ಬಾಗಲಕೋಟೆ...

  • ಕೋಲಾರ: ಮನುಷ್ಯರು ಸೇವಿಸುವ ಸ್ವಾಭಾವಿಕ ಆಹಾರಗಳಲ್ಲಿ ಹಣ್ಣುಗಳು ಅತಿ ಮುಖ್ಯವಾಗಿದ್ದು, ಅವುಗಳನ್ನು ಆಕರ್ಷಿಸಲು ಮತ್ತು ಕೃತಕವಾಗಿ ಹಣ್ಣಾಗಿಸಲು ಕೆಲವು ಮಾರಣಾಂತಿಕ...