ಶಿವಸೇನೆ ಸೇರಿದ ಸಲ್ಮಾನ್ ಖಾನ್ ಬಾಡಿಗಾರ್ಡ್: ಯಾರು ಗೊತ್ತಾ ಈ ಶೇರಾ

Team Udayavani, Oct 19, 2019, 9:13 AM IST

ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಂತೆ, ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ಅಂಗರಕ್ಷಕ ‘ಶೇರಾ’ ಶುಕ್ರವಾರ ಶಿವಸೇನಾ ಪಕ್ಷಕ್ಕೆ ಸೇರಿದರು.

ಶುಕ್ರವಾರ ಮುಂಬೈಯ ಠಾಕ್ರೆ ನಿವಾಸ ಮಾತೋಶ್ರೀಯಲ್ಲಿ ಶಿವಸೇನಾ ಮುಖಂಡ ಉದ್ಧವ್ ಠಾಕ್ರೆ ಮತ್ತು ಯುವ ಸೇನಾ ಮುಖಂಡ ಆದಿತ್ಯ ಠಾಕ್ರೆ ಸಮ್ಮುಖದಲ್ಲಿ ಶೇರಾ ತಮ್ಮ ರಾಜಕೀಯ ಜೀವನ ಆರಂಭಿಸಿದರು.

ಶಿವಸೇನಾ ಅಧಿಕೃತ ಟ್ವಿಟರ್ ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಲಾಗಿದೆ. ಶಿವಸೇನಾ  ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದು ಮತ್ತೊಮ್ಮೆ ಗದ್ದುಗೆಗೇರಲು ಪ್ರಯತ್ನ ನಡೆಸುತ್ತಿದೆ.

ಯಾರು ಈ ಶೇರಾ?

ಸೂಪರ್ ಸ್ಟಾರ್ ಸಲ್ಲು ನಂಬಿಕಸ್ಥ ಬಾಡಿಗಾರ್ಡ್ ಶೇರಾ ನಿಜವಾದ ಹೆಸರು ಗುರ್ಮೀತ್ ಸಿಂಗ್. ಸಲ್ಲು ಜೊತೆ ಕಳೆದ 20ಕ್ಕೂ ಹೆಚ್ಚು ವರ್ಷಗಳಿಂದ ಕೆಲಸ ಮಾಡಿಕೊಂಡಿರುವ ಶೇರಾ, ಸಲ್ಮಾನ್ ಖಾನ್ ನ ನಂಬಿಕಸ್ಥ.

ಮುಂಬೈನ ಅಂಧೇರಿಯ ಸಿಖ್ ಕುಟುಂಬದ ಗುರ್ಮೀತ್ ಸಿಂಗ್ ತಂದೆ ಆಟೋಮೊಬೈಲ್ ವರ್ಕ್ ಶಾಪ್ ನಡೆಸುತ್ತಿದ್ದರು. ತನ್ನ ದೇಹವನ್ನು ಹುರಿಗೊಳಿಸಿದ್ದ ಗುರ್ಮೀತ್ ಮಿಸ್ಟರ್ ಮುಂಬೈ, ಮಿಸ್ಟರ್ ಮಹಾರಾಷ್ಟ್ರ ಮುಂತಾದ ಸ್ಪರ್ಧೆಗಳಲ್ಲಿ ಮಿಂಚಿದ್ದರು.

ಸೆಕ್ಯುರಿಟಿ ಕಂಪೆನಿಯೊಂದಕ್ಕೆ ಕೆಲಸಕ್ಕೆ ಸೇರಿದ ಗುರ್ಮೀತ್ 1995ರಲ್ಲಿ ಮೊದಲ ಬಾರಿಗೆ ಸಲ್ಮಾನ್ ಖಾನ್ ಜೊತೆ ಸೇರಿದರು. ಸಲ್ಮಾನ್ ಸಹೋದರ ಸೊಹೈಲ್ ಖಾನ್ ಭೇಟಿಯಾಗಿ ”ನೀನು ನನ್ನ ಸಹೋದರನ ಜೊತೆ ಎಂದಿಗೂ ಇರುತ್ತೀಯ” ಎಂದು ಕೇಳಿದಾಗ ಗುರ್ಮೀತ್ ಹೌದು ಎಂದಿದ್ದರಂತೆ. ಹೀಗೆ ಸಲ್ಮಾನ್ ಜೊತೆ ಸೇರಿದ ಗುರ್ಮೀತ್ ‘’ಶೇರಾ’’ ಎಂದೇ ಪ್ರಸಿದ್ದಿಯಾಗಿದ್ದಾರೆ.

2011ರಲ್ಲಿ ತೆರೆಕಂಡಿದ್ದ ಬಾಡಿಗಾರ್ಡ್ ಸಿನಿಮಾವನ್ನು ಸಲ್ಮಾನ್ ಶೇರಾಗೆ ಅರ್ಪಿಸಿದ್ದರು. ಶೇರಾ ಮಗ ಟೈಗರ್ ನನ್ನು ಬಾಲಿವುಡ್ ಗೆ ಪರಿಚಯಿಸಲು ಸಲ್ಮಾನ್ ಸಿದ್ದರಾಗಿದ್ದಾರೆ ಎಂಬ ಮಾಹಿತಿಯೂ ಬಾಲಿವುಡ್ ವಲಯದಲ್ಲಿ ಕೇಳಿ ಬರುತ್ತಿದೆ.

ಎಷ್ಟು ಗೊತ್ತಾ ಸಂಬಳ

20ಕ್ಕೂ ಹೆಚ್ಚು ವರ್ಷಗಳಿಂದ ಸಲ್ಮಾನ್ ಖಾನ್ ಜೊತರೆಗಿರುವ ಶೇರಾ ಸಂಬಳ ಇಷ್ಟು ಇದೆ ಎಂಬ ಕುತೂಹಲ ಹಲವರಿಗಿದೆ. ಸಲ್ಮಾನ್ ತನ್ನ ಬಾಡಿಗಾರ್ಡ್ ಶೇರಾಗೆ ತಿಂಗಳಿಗೆ 15 ಲಕ್ಷ ವೇತನ ನೀಡುತ್ತಾರೆ ಎಂಬ ಮಾತುಗಳಿವೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ