ಪಾಕ್ನಿಂದ ಬಂದ ಸಮ್ಝೋತಾ ಎಕ್ಸ್ಪ್ರೆಸ್ ಖಾಲಿ ಖಾಲಿ !
Team Udayavani, Feb 26, 2019, 5:35 AM IST
ಹೊಸದಿಲ್ಲಿ : ಪುಲ್ವಾಮಾ ಉಗ್ರ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ಥಾನ-ಭಾರತ ನಡುವಿನ ದಿಲ್ಲಿ – ಲಾಹೋರ್ ಸಮ್ಝೋತಾ ಎಕ್ಸ್ಪ್ರೆಸ್ ಅಥವಾ ದಿಲ್ಲಿ-ಅಠಾರಿ ಎಕ್ಸ್ಪ್ರೆಸ್ ರೈಲಿನ ಮೂಲಕ ನಿನ್ನೆ ಸೋಮವಾರ ಪಾಕ್ನಿಂದ ಭಾರತಕ್ಕೆ ಪ್ರಯಾಣಿಸಿದವರ ಸಂಖ್ಯೆ ನೂರಕ್ಕೂ ಕಡಿಮೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಮ್ಝೋತಾ ಎಕ್ಸ್ಪ್ರೆಸ್ ಆರು ಸ್ಲಿಪರ್ ಕೋಚ್ ಮತ್ತು ಒಂದು ಎಸಿ -3ಟೈರ್ ಕೋಚ್ ಹೊಂದಿದೆ. ನಿನ್ನೆ ಸೋಮವಾರ ಈ ರೈಲು ಭಾರತದ ಅಂತಾರಾಷ್ಟ್ರೀಯ ಗಡಿಯಲ್ಲಿನ ಪಂಜಾಬ್ ನ ಅಠಾರಿ ರೈಲು ನಿಲ್ದಾಣಕ್ಕೆ ಬಂದಾಗ ಹೆಚ್ಚಿನ ಸ್ಲಿಪರ್ ಕೋಚ್ಗಳು ಬಹುತೇಕ ಖಾಲಿಯಾಗಿದ್ದವು ಮತ್ತು ಬೆರಳೆಣಿಕೆಯ ಪ್ರಯಾಣಿಕರು ಇದ್ದರು ಎಂದು ತಿಳಿದು ಬಂದಿದೆ.
ಸಮ್ಝೋತಾ ಎಕ್ಸ್ಪ್ರೆಸ್ ರೈಲು ಪ್ರತೀ ಬುಧವಾರ ಮತ್ತು ಭಾನುವಾರ ಬೆಳಗ್ಗೆ 11.10ಕ್ಕೆ ಹಳೇ ದಿಲ್ಲಿ ರೈಲು ನಿಲ್ದಾಣದಿಂದ ಲಾಹೋರ್ ಗೆ ನಿರ್ಗಮಿಸುತ್ತದೆ. ಮರಳಿ ಬರುವ ಪ್ರಯಾಣದಲ್ಲಿ ರೈಲು ಲಾಹೋರ್ ನಿಂದ ಹೊರಟು ಸೋಮವಾರ ಮತ್ತು ಗುರುವಾರ ಭಾರತಕ್ಕೆ ಆಗಮಿಸುತ್ತದೆ.