ಮೇಘಾಲಯದಲ್ಲಿ ಸಂಗ್ಮಾ ಆಡಳಿತ ಶುರು
Team Udayavani, Mar 7, 2018, 9:35 AM IST
ಶಿಲ್ಲಾಂಗ್: ಮೇಘಾಲಯದ ನೂತನ ಮುಖ್ಯ ಮಂತ್ರಿಯಾಗಿ ನ್ಯಾಶನಲ್ ಪೀಪಲ್ಸ್ ಪಾರ್ಟಿ (ಎನ್ಪಿಪಿ) ಅಧ್ಯಕ್ಷ ಕೊನ್ರಾಡ್ ಸಂಗ್ಮಾ (40) ಅವರು ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರ ಜತೆಗೆ 11 ಮಂದಿ ಸಂಪುಟ ಸಚಿವರಿಗೂ ರಾಜ್ಯಪಾಲ ಗಂಗಾಪ್ರಸಾದ್ ಪ್ರಮಾಣ ವಚನ ಬೋಧಿಸಿದ್ದಾರೆ.
ಸಂಗ್ಮಾರ ಸಹೋದರ ಜೇಮ್ಸ್ ಪಿ.ಕೆ. ಸಂಗ್ಮಾ ಸಹಿತ ಎನ್ಪಿಪಿಯ ನಾಲ್ವರು, ಯುಡಿಪಿಯ ಮೂವರು, ಪಿಡಿಎಫ್ನ ಇಬ್ಬರು, ಎಚ್ಎಸ್ಪಿಡಿಪಿ ಮತ್ತು ಬಿಜೆಪಿಯ ತಲಾ ಒಬ್ಬರಿಗೆ ಕೊನ್ರಾಡ್ ಸಂಪುಟದಲ್ಲಿ ಸಚಿವ ಸ್ಥಾನ ನೀಡಲಾಗಿದೆ. ಪ್ರಧಾನಿ ಮೋದಿ ಅವರು ಟ್ವೀಟ್ ಮೂಲಕ ಸಂಗ್ಮಾರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
9ರಂದು ಬಿಪ್ಲಬ್ ಪ್ರಮಾಣ: ತ್ರಿಪುರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಪ್ಲಬ್ ದೇಬ್ ಅವರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಲಾಗಿದ್ದು, ಶುಕ್ರವಾರ ಸಿಎಂ ಆಗಿ ಪ್ರಮಾಣ ಸ್ವೀಕರಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್ ಗೆ ಸುಪ್ರೀಂ
Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ