ಡ್ರೋನ್ ನಿಯಂತ್ರಣಕ್ಕೆ ಜಿಸ್ಯಾಟ್ 7ಎ
Team Udayavani, Sep 23, 2018, 6:00 AM IST
ನವದೆಹಲಿ: ಡ್ರೋನ್ಗಳನ್ನು ನಿಯಂತ್ರಿಸುವ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯನ್ನು ನಿರೀಕ್ಷಿಸಲಾಗಿದ್ದು, ನವೆಂಬರಲ್ಲಿ ಇಸ್ರೋ ಉಡಾವಣೆ ಮಾಡಲಿರುವ ಜಿಸ್ಯಾಟ್ 7ಎ ಈ ನಿಟ್ಟಿನಲ್ಲಿ ಮಹತ್ವದ ಅಂಶವಾಗಿರಲಿದೆ. ಸದ್ಯ ಡ್ರೋನ್ಗಳನ್ನು ಆ್ಯಂಟೆನಾಗಳ ಮೂಲಕ ನಿಯಂತ್ರಿಸಲಾಗುತ್ತಿದ್ದು, ಜಿಸ್ಯಾಟ್ 7ಎ ನಭಕ್ಕೇರಿದ ನಂತರ ಡ್ರೋನ್ಗಳನ್ನು ಸ್ಯಾಟಲೈಟ್ನಿಂದಲೇ ನಿಯಂತ್ರಿಸಬಹುದಾಗಿದೆ. ಇದು ಭಾರತೀಯ ಸೇನೆಗೆ ಅತ್ಯಂತ ಅನುಕೂಲಕರವಾಗಿರಲಿದೆ. 700-800 ಕೋಟಿ ರೂ. ವೆಚ್ಚದಲ್ಲಿ ಈ ಸ್ಯಾಟಲೈಟ್ ಅಭಿವೃದ್ಧಿಪಡಿಸಲಾಗಿದೆ.
ಭಾರತವು ಅಮೆರಿಕದ ಪ್ರಿಡೇಟರ್ ಡ್ರೋನ್ಗಳನ್ನು ಖರೀದಿಸುವ ಮಾತುಕತೆಯಲ್ಲಿ ತೊಡಗಿದ್ದು, ಈ ಡ್ರೋನ್ಗಳು ಭಾರತಕ್ಕೆ ಲಭ್ಯವಾದ ನಂತರದಲ್ಲಿ ಇವುಗಳ ನಿಯಂತ್ರಣಕ್ಕೆ ಈ ವ್ಯವಸ್ಥೆ ನೆರವಾಗಲಿದೆ. ಪ್ರಿಡೇಟರ್ ಡ್ರೋನ್ಗಳನ್ನು ಅಫ್ಘಾನಿಸ್ತಾನ, ಪಾಕ್ ಗಡಿಯಲ್ಲಿ ತಾಲಿಬಾನ್ ಉಗ್ರರನ್ನು ಹೊಡೆದು ರುಳಿಸಲು ಅಮೆರಿಕ ಬಳಸಿತ್ತು. ಸದ್ಯ ಭಾರತವು ಹೆರಾನ್ ಮತ್ತು ಸರ್ಚರ್ ಡ್ರೋನ್ಗಳನ್ನು ಬಳಸುತ್ತಿದ್ದು, ಗ್ರೌಂಡ್ ಹಾಗೂ ಹಡಗು ಆಧರಿತ ಸ್ಟೇಷನ್ಗಳಿಂದ ನಿಯಂತ್ರಿಸಲಾಗುತ್ತಿದೆ. ಇದರಿಂದ ಡ್ರೋನ್ಗಳ ಹಾರಾಟ ಮಿತಿಯಲ್ಲಿರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bullet train ಮೊದಲ ಬಾರಿಗೆ ಬ್ಯಾಲೆಸ್ಟ್ಲೆಸ್ ಟ್ರ್ಯಾಕ್: ರೈಲ್ವೇ ಸಚಿವ ವೈಷ್ಣವ್
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
MUST WATCH
ಹೊಸ ಸೇರ್ಪಡೆ
Bullet train ಮೊದಲ ಬಾರಿಗೆ ಬ್ಯಾಲೆಸ್ಟ್ಲೆಸ್ ಟ್ರ್ಯಾಕ್: ರೈಲ್ವೇ ಸಚಿವ ವೈಷ್ಣವ್
Mumbai Indians: ಸೂರ್ಯಕುಮಾರ್ ಶೀಘ್ರ ಚೇತರಿಕೆ ಸಾಧ್ಯತೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್