ಉಡಾವಣೆ ವೆಚ್ಚದ ಅರ್ಧ ತಾನೇ ಭರಿಸಲಿದೆ ಇಸ್ರೋ
Team Udayavani, Feb 8, 2017, 8:19 AM IST
ಹೊಸದಿಲ್ಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಈಗ ತನ್ನ ಪ್ರಯೋಗಗಳಿಗೆ ತಗಲುವ ಬಹುತೇಕ ವೆಚ್ಚವನ್ನು ತಾನೇ ಭರಿಸಿಕೊಳ್ಳುವ ಸಾಮರ್ಥ್ಯ ಪಡೆದಿದೆ. ಮುಂದಿನ ವಾರ 104 ಉಪಗ್ರಹಗಳನ್ನು ಇಸ್ರೋ ಅಂತರಿಕ್ಷಕ್ಕೆ ಹಾರಿಬಿಡಲಿದ್ದು, ಇದರಲ್ಲಿ ಭಾರತದ ಉಪಗ್ರಹಗಳು ಮೂರು ಮಾತ್ರ. 101 ನ್ಯಾನೋ ಉಪಗ್ರಹಗಳು ಅಮೆರಿಕ ಮತ್ತು ಜರ್ಮನಿ ಸೇರಿ ದಂತೆ ವಿದೇಶಗಳಿಗೆ ಸೇರಿದ್ದು, ಅವು 100 ದಶಲಕ್ಷ ಡಾಲರ್ (ಸುಮಾರು 670 ಕೋಟಿ ರೂ.) ಶುಲ್ಕ ಭರಿಸಲಿವೆ. ಇದರಿಂದ ಭಾರತಕ್ಕೆ ಉಪಗ್ರಹಗಳ ಉಡಾವಣೆಗೆ ತಗಲುವ ವೆಚ್ಚದ ಭಾರ ಅರ್ಧದಷ್ಟು ಕಡಿಮೆಯಾಗಲಿದೆ ಎಂದಿದ್ದಾರೆ ಸಂಸ್ಥೆ ಅಧ್ಯಕ್ಷ ಎ.ಎಸ್.ಕಿರಣ್‌ಕುಮಾರ್. 15ರಂದು 104 ಉಪಗ್ರಹಗಳ ಉಡಾವಣೆ ಶ್ರೀಹರಿಕೋಟಾದಲ್ಲಿ ನಡೆಯಲಿದೆ.