SBI ಬಡ್ಡಿ ದರ ಇಳಿಕೆ
Team Udayavani, Jan 2, 2018, 10:00 AM IST
ಮುಂಬಯಿ: ಭಾರತೀಯ ಸ್ಟೇಟ್ ಬ್ಯಾಂಕ್ ಸೋಮವಾರ ಬಡ್ಡಿ ದರವನ್ನು ಶೇ 0.30 ಇಳಿಕೆ ಮಾಡಿದ್ದು, ಇದರಿಂದ ಸುಮಾರು 80 ಲಕ್ಷ ಗ್ರಾಹಕರಿಗೆ ಅನುಕೂಲವಾಗಲಿದೆ. ಬಡ್ಡಿ ದರ ಇಳಿಕೆಯಿಂದಾಗಿ ಬೇಸ್ ರೇಟ್ ಶೇ. 8.95 ರಿಂದ ಶೇ. 8.65ಕ್ಕೆ ಇಳಿದಿದ್ದರೆ, ಬಿಪಿಎಲ್ಆರ್ ಶೇ. 13.70 ರಿಂದ ಶೇ. 13.40ಕ್ಕೆ ಇಳಿಕೆಯಾಗಿದೆ. ಆದರೆ ಎಂಸಿಎಲ್ಆರ್ ದರವನ್ನು ಬ್ಯಾಂಕ್ ಇಳಿಕೆ ಮಾಡಿಲ್ಲ. ಹೀಗಾಗಿ ಈ ಹಿಂದಿನ ಬಡ್ಡಿ ದರ ವ್ಯವಸ್ಥೆಯಲ್ಲೇ ಇರುವ ಸಾಲ ಹಾಗೂ ಠೇವಣಿ ಮೇಲಿನ ಬಡ್ಡಿ ದರಗಳು ಮಾತ್ರ ಇಳಿಕೆಯಾಗಲಿವೆ.