ದಿನಕ್ಕೆ ಕೇವಲ 20 ಸಾವಿರ ರೂ. ಡ್ರಾ!
Team Udayavani, Oct 2, 2018, 6:00 AM IST
ಮುಂಬಯಿ: ಭಾರೀ ಹಣ ಡ್ರಾ ಮಾಡಿಕೊಳ್ಳಬಹುದು ಎಂದು ಎಸ್ಬಿಐ ಎಟಿಎಂಗೆ ಹೋದರೆ ನಿರಾಸೆ ಖಂಡಿತ. ಎಟಿಎಂನಿಂದ ಹಣ ಡ್ರಾ ಮಾಡಿಕೊಳ್ಳುವ ಮಿತಿಯನ್ನು ಅರ್ಧಕ್ಕೆ ಇಳಿಸಿದ್ದು, ಇನ್ನು ಮುಂದೆ ದಿನಕ್ಕೆ ಕೇವಲ 20 ಸಾವಿರ ರೂ.ಗಳನ್ನಷ್ಟೇ ತೆಗೆಯಬಹುದಾಗಿದೆ. ಅ. 31ರಿಂದಲೇ ಹೊಸ ನಿಯಮ ಜಾರಿಯಾಗಲಿದೆ.
ಹಬ್ಬದ ಋತು ಆರಂಭವಾದ ಹೊತ್ತಲ್ಲೇ ಬ್ಯಾಂಕ್ ಈ ನಿರ್ಧಾರ ಕೈಗೊಂಡಿದೆ. ಇದು ವರೆಗೆ ದಿನಕ್ಕೆ 40 ಸಾವಿರ ರೂ.ಗಳನ್ನು ಪ್ರತಿ ಎಟಿಎಂ ಕಾರ್ಡ್ನಿಂದ ತೆಗೆಯಬಹುದಿತ್ತು. ಸದ್ಯಕ್ಕೆ ಇದು ಬ್ಯಾಂಕಿನ ಕ್ಲಾಸಿಕ್ ಮತ್ತು ಮೆಸ್ಟ್ರೋ ಕಾರ್ಡ್ಗಳಿಗೆ ಅನ್ವಯವಾಗುತ್ತದೆ.
“ಇತ್ತೀಚಿನ ದಿನಗಳಲ್ಲಿ ಎಟಿಎಂ ವಿತ್ಡ್ರಾ ವೇಳೆ ಆಗುತ್ತಿರುವ ವಂಚನೆ ಸಂಬಂಧಿತ ದೂರುಗಳು ಹೆಚ್ಚಾದ ಹಿನ್ನೆಲೆಯಲ್ಲಿ ಮತ್ತು ಡಿಜಿಟಲ್ ಬ್ಯಾಂಕಿಂಗ್ಗೆ ಪ್ರೋತ್ಸಾಹ ನೀಡುವ ಸಲುವಾಗಿ ವಿತ್ಡ್ರಾ ಮಿತಿಯನ್ನು 20 ಸಾವಿರ ರೂ.ಗಳಿಗೆ ಇಳಿಕೆ ಮಾಡಿದ್ದೇವೆ’ ಎಂದು ಬ್ಯಾಂಕ್ ಹೇಳಿಕೆ ನೀಡಿದೆ. ಬ್ಯಾಂಕಿನ ನಿಯಮಾವಳಿಗಳಂತೆ ಈ ನಿರ್ಧಾರಕ್ಕೆ ಬಂದಿ ದ್ದೇವೆ ಎಂದು ಎಲ್ಲ ಗ್ರಾಹಕರಿಗೆ ಮಾಹಿತಿ ನೀಡುವಂತೆ ಬ್ರ್ಯಾಂಚ್ಗಳಿಗೆ ಸೂಚಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು