ಆಮ್ರಪಾಲಿ ನೋಂದಣಿ ರದ್ದು
Team Udayavani, Jul 24, 2019, 5:00 AM IST
ಹೊಸದಿಲ್ಲಿ: ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಜತೆ ರಿಯಲ್ ಎಸ್ಟೇಟ್ ಕಂಪೆನಿ ಆಮ್ರಪಾಲಿ ಮಾಡಿಕೊಂಡಿದ್ದ ನೋಂದಣಿಯನ್ನು ಸುಪ್ರೀಂಕೋರ್ಟ್ ಮಂಗಳವಾರ ರದ್ದು ಮಾಡಿದೆ. ಜತೆಗೆ ಆ ಸಂಸ್ಥೆ ಕೈಗೆತ್ತಿಕೊಂಡಿರುವ ಎಲ್ಲ ಕಟ್ಟಡ ನಿರ್ಮಾಣ ಯೋಜನೆಗಳ ಉಸ್ತುವಾರಿ ವಹಿಸಿ ಪೂರ್ತಿಗೊಳಿಸುವಂತೆ ರಾಷ್ಟ್ರೀಯ ಕಟ್ಟಡ ನಿರ್ಮಾಣ ಸಂಸ್ಥೆ (ಎನ್‌ಬಿಸಿಸಿ)ಗೆ ಆದೇಶ ನೀಡಿದೆ.
ನ್ಯಾಯಮೂರ್ತಿ ಅರುಣ್ ಮಿಶ್ರಾ ಮತ್ತು ನ್ಯಾಯಮೂರ್ತಿ ಯು.ಯು.ಲಲಿತ್ ಅವರನ್ನೊಳಗೊಂಡ ನ್ಯಾಯಪೀಠ ಈ ಆದೇಶ ನೀಡಿದೆ. ಇದರ ಜತೆಗೆ ನೋಯ್ಡಾ ಮತ್ತು ಗ್ರೇಟರ್ ನೋಯ್ಡಾ ಪ್ರಾಧಿಕಾರ ನೀಡಿರುವ ಲೀಸ್ ಅನುಮತಿ ರದ್ದು ಮಾಡಿದೆ.