ಆಂಧ್ರ ಪ್ರದೇಶದಲ್ಲಿ ಕೋಳಿ ಅಂಕ: ಹೊಸ ಆದೇಶಕ್ಕೆ ಸುಪ್ರೀಂ ನಕಾರ
Team Udayavani, Jan 13, 2017, 11:50 AM IST
ಹೊಸದಿಲ್ಲಿ : ಆಂಧ್ರಪ್ರದೇಶದಲ್ಲಿ ಮಕರ ಸಂಕ್ರಾಂತಿ ಸಂದರ್ಭದಲ್ಲಿ ಅತ್ಯಂತ ಪ್ರಸಿದ್ಧವಾಗಿರುವ, ಕೋಟಿಗಟ್ಟಲೆ ರೂ. ಬೆಟ್ಟಿಂಗ್ ನಡೆಯುವ ಕೋಳಿ ಅಂಕ (ಕುಕ್ಕುಟ ಕದನ/cock fight) ಸಂಬಂಧಿಸಿದಂತೆ ಯಾವುದೇ ಹೊಸ ಆದೇಶ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಆಂಧ್ರ ಪ್ರದೇಶ ಹೈಕೋರ್ಟ್ ಕಾಕ್ ಫೈಟ್ ನಿಷೇಧಿಸಿ ನೀಡಿರುವ ನಿರ್ದೇಶವನ್ನು ರಾಜ್ಯಾಡಳಿತೆಯು ಸರಿಯಾಗಿ ಪಾಲಿಸಲಾಗುತ್ತಿಲ್ಲ ಎಂದು ದೂರಿಕೊಂಡು ಸಲ್ಲಿಸಲಾಗಿದ್ದ ಅರ್ಜಿಯ ಮೇಲೆ ಯಾವುದೇ ಹೊಸ ಆದೇಶ ಹೊರಡಿಸುವುದಕ್ಕೆ ವರಿಷ್ಠ ನ್ಯಾಯಮೂರ್ತಿ ಜೆ ಎಸ್ ಖೇಹರ್ ಮತ್ತು ಜಸ್ಟಿಸ್ ಡಿ ವೈ ಚಂದ್ರಚೂಡ್ ಅವರನ್ನು ಒಳಗೊಂಡ ಪೀಠವು ಇಂದು ನಿರಾಕರಿಸಿತು.
ಸಾಮಾಜಿಕ ಕಾರ್ಯಕರ್ತೆ ಗೌರೀ ಮೌಲೇಖೀ ಅವರು ರಾಜ್ಯದ ಆಡಳಿತೆಯು ಕಾಕ್ ಫೈಟ್ ನಿಷೇಧಿಸಿ ಹೈಕೋರ್ಟ್ ನೀಡಿದ್ದ ಆದೇಶವನ್ನು ಸರಿಯಾಗಿ ಅನುಷ್ಠಾನಿಸಲಾಗುತ್ತಿಲ್ಲ ಎಂದು ದೂರಿ ಈ ಬಗ್ಗೆ ಹೊಸ ಆದೇಶ ಹೊರಡಿಸಲು ಕೋರಿದ್ದರು.
ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಆಂಧ್ರ ಪ್ರದೇಶದಲ್ಲಿ ಕುಕ್ಕುಟ ಕದನ ಅಥವಾ ಕೋಳಿ ಅಂಕ ಅಥವಾ ಕಾಕ್ ಫೈಟ್ ನಡೆಸುವುದು ವಾಡಿಕೆಯಾಗಿದ್ದು ಕೋಟಿಗಟ್ಟಲೆ ರೂ. ಹಣದ ಬೆಟ್ಟಿಂಗ್ ಈ ಸಾಂಪ್ರದಾಯಿಕ ಕ್ರೀಡೆಯಲ್ಲಿ ನಡೆಯುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ
ತಂಗಿ ಮದುವೆಗೆ ಟಿವಿ ಗಿಫ್ಟ್ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ