ಲಾಲು ಜಾಮೀನು ಅರ್ಜಿ ಎ.10ರಂದು ಸುಪ್ರೀಂ ವಿಚಾರಣೆ, ಉತ್ತರ ಸಲ್ಲಿಸಲು CBIಗೆ ಸೂಚನೆ
Team Udayavani, Apr 5, 2019, 11:44 AM IST
ಹೊಸದಿಲ್ಲಿ : ಬಹುಕೋಟಿ ಮೇವು ಹಗರಣದ ಮೂರು ಕೇಸುಗಳಲ್ಲಿ ದೋಷಿ ಎಂದು ನ್ಯಾಯಾಲಯದಿಂದ ಪರಿಗಣಿತರಾಗಿರುವ ಹೊರತಾಗಿಯೂ ಆರ್ ಜೆ ಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಸಲ್ಲಿಸಿರುವ ಜಾಮೀನು ಕೋರಿಕೆ ಅರ್ಜಿಯನ್ನು ತಾನು ಎ.10ರಂದು ವಿಚಾರಣೆಗೆ ಎತ್ತಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್ ಇಂದು ಶುಕ್ರವಾರ ಹೇಳಿದೆ.
ಈ ಸಂಬಂಧ ಎ.9ರೊಳಗೆ ಉತ್ತರ ಸಲ್ಲಿಸುವಂತೆ ವರಿಷ್ಠ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಪೀಠವು ಸಿಬಿಐ ಗೆ ಆದೇಶ ನೀಡಿದೆ.
ಆರ್‌ಜೆಡಿ ಮುಖ್ಯಸ್ಥನ ಪರವಾಗಿ ಕೋರ್ಟಿನಲ್ಲಿ ವಾದಿಸುತ್ತಿರುವ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ತನ್ನ ಕಕ್ಷಿದಾರನು ಜಾಮೀನು ಕೋರಿಕೆಯ ತುರ್ತು ವಿಚಾರಣೆಯನ್ನು ಕೋರಿದ್ದು ಈ ಸಂಬಂಧ ನೊಟೀಸ್ ಜಾರಿ ಮಾಡಲಾಗಿದೆ ಎಂದು ಹೇಳಿದರು.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಲಾಲು ಜಾಮೀನು ಕೋರಿಕೆ ಅರ್ಜಿಗೆ ಪ್ರತಿಯಾಗಿ ಉತ್ತರ ಸಲ್ಲಿಸಲಿದೆ ಎಂದು ಹೇಳಿದರು.