ಶಬರಿಮಲೆ ದೇಗುಲ ಪ್ರವೇಶಕ್ಕೆ ಯತ್ನಿಸಿದ ಬಿಂದುಗೆ ಬೈಗುಳ

Team Udayavani, Apr 26, 2019, 10:15 AM IST

ತಿರುವನಂತಪುರ: ಕಳೆದ ವರ್ಷ ಅಕ್ಟೋಬರ್‌ನಲ್ಲಿ ಶಬರಿಮಲೆ ದೇಗುಲ ಪ್ರವೇಶಿಸಲು ಯತ್ನಿಸಿದ ಕೇರಳ ಶಾಲೆ ಶಿಕ್ಷಕಿ ಬಿಂದು ತಂಕಮ್‌ ಕಲ್ಯಾಣಿಗೆ ಬುಧವಾರ ನಡೆದ ಮತದಾನದ ಚುನಾವಣಾ ಕರ್ತವ್ಯದಲ್ಲಿದ್ದಾಗ ಬೈಗುಳದ ಸುರಿಮಳೆಯಾಗಿದೆ. ಪಟ್ಟಾಂಬಿಯಲ್ಲಿ ಇವರು ಚುನಾವಣೆಗೆ ರಿಸರ್ವ್‌ ಅಧಿಕಾರಿಯಾಗಿ ನಿಯೋಜಿತರಾಗಿದ್ದರು.

‘ಮತಹಾಕಲು ಆಗಮಿಸಿದ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಕಾರ್ಯಕರ್ತರು ಶಬರಿಮಲೆ ದೇಗುಲ ಪ್ರವೇಶಕ್ಕೆ ಯತ್ನಿಸಿದ್ದು ನಾನೇ ಅಲ್ಲವೆ ಎಂದು ಖಚಿತಪಡಿಸಿ ಕೊಳ್ಳಲು ದುರುಗುಟ್ಟಿ ನೋಡಿದರು. ಅನಂತರ ಕರ್ತವ್ಯ ಮುಗಿಸಿ ತೆರಳುತ್ತಿದ್ದಾಗ ಬಂದು ಬೈಯಲು ಆರಂಭಿಸಿದರು’ ಎಂದು ಬಿಂದು ಹೇಳಿದ್ದಾರೆ. ಈ ಪೈಕಿ ಒಬ್ಬನಂತೂ ‘ನೀನು ಯಾಕೆ ಸಾಯಬಾರದು’ ಎಂದೂ ಕೇಳಿದ್ದಾನೆ ಎಂದು ಬಿಂದು ಆರೋಪಿಸಿದ್ದಾರೆ. ಹೀಗಾಗಿ ನಾನು ಸಹಾ ಯಕ ಚುನಾವಣ ಅಧಿಕಾರಿಗೆ ದೂರು ನೀಡಿದ್ದೇನೆ ಎಂದು ಹೇಳಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ