2 ಲಕ್ಷ ರೂ.ನಲ್ಲೇ ಸಮುದ್ರ ವಿಮಾನ ನಿರ್ಮಾಣ
Team Udayavani, Jun 25, 2021, 7:30 AM IST
ಗುವಾಹಾಟಿ: ಅಸ್ಸಾಂನ ನೂರುಲ್ ಹಕ್ ಎಂಬಾತನ ನೆನಪು ನಿಮಗಿರಬಹುದು. ಆತ ಮಾರುತಿ ಸ್ವಿಫ್ಟ್ ಕಾರನ್ನು ಲಾಂಬೊರ್ಗಿನಿ ಕಾರ್ನಂತೆ ಮಾರ್ಪಡಿಸಿದ್ದ. ಇದೀಗ ಜೋರ್ಹಟ್ ಜಿಲ್ಲೆಯ ಕೊರೈಪಾನಿ ಗ್ರಾಮದ ಬಾಬುಲ್ ಸೈಕಿಯಾ ಎಂಬ ಯುವಕ ಸಮುದ್ರ ವಿಮಾನ ಸಿದ್ಧಪಡಿಸಿದ್ದಾರೆ.
ವೃತ್ತಿಯಲ್ಲಿ ಗಾರೆ ಕೆಲಸ ಮಾಡುವ ಸೈಕಿಯಾ ನಿರುಪಯುಕ್ತ ವಸ್ತುಗಳನ್ನು ಬಳಕೆ ಮಾಡಿ ಸಮುದ್ರ ವಿಮಾನ ಸಿದ್ಧಪಡಿಸಿದ್ದಾರೆ. ಅವ ರಿಗೆ ತಾಂತ್ರಿಕ ಶಿಕ್ಷಣದ ಹಿನ್ನೆಲೆ ಇಲ್ಲ ಎನ್ನುವುದು ಗಮನಾರ್ಹ. ಗಗನದಲ್ಲಿ ವಿಮಾನದಲ್ಲಿ ಹಾರಾಡಬೇಕು ಎನ್ನುವುದು ಸೈಕಿಯಾ ಅವರ ಬಾಲ್ಯದ ಕನಸಾಗಿತ್ತಂತೆ.
ಜತೆಗೆ ಸ್ವಂತ ಕಾರು ಹೊಂದಿರುವ ಕನಸಿನಂತೆ ವಿಮಾನ ಹೊಂದಿರಬೇಕು ಎಂಬ ಬಯಕೆ ಅವರಿಗೆ ಇತ್ತು. ಎರಡು ವರ್ಷಗಳ ಕಾಲ ವಿವಿಧ ರೀತಿಯಲ್ಲಿ ಯೋಚನೆ- ಕೆಲಸ ಮಾಡಿ ವಿಮಾನ ಹೊಂದುವ ಕನಸನ್ನು ನನಸಾಗಿಸಿದ್ದಾರೆ. ವಿಮಾನದ ಎಂಜಿನ್ಗಾಗಿ ಬಜಾಜ್ ಪಲ್ಸರ್ 220 ಬೈಕ್ನ ಎಂಜಿನ್ ಅನ್ನು ಬಳಕೆ ಮಾಡಿದ್ದಾರೆ. ಒಟ್ಟು 2 ಲಕ್ಷ ರೂ. ವೆಚ್ಚವೂ ಆಗಿದೆಯಂತೆ. ಕನಸು ಈಡೇರಿಸುವುದರಿಂದ ಬಾಬುಲ್ ಸೈಕಿಯ ಈಗ ಹರ್ಷಚಿತ್ತರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು