ಮಣಿಪುರದಲ್ಲಿ ಕುಕಿ ರೆವಲ್ಯೂಶನರಿ ಆರ್ಮಿಯ ಹಿರಿಯ ನಾಯಕನ ಹತ್ಯೆ
Team Udayavani, Dec 14, 2018, 12:09 PM IST
ಇಂಪಾಲ : ಕುಕಿ ರೆವಲ್ಯೂಶನರಿ ಆರ್ಮಿ (ಕೆಆರ್ಎ) ಇದರ ಹಿರಿಯ ನಾಯಕ, 48ರ ಹರೆಯದ ಹೇಮ್ಖೊತಾಂಗ್ ಮಿಶಾವೋ ಅವರನ್ನು ಅಪರಿಚಿತ ವ್ಯಕ್ತಿಗಳು ಮಣಿಪುರದ ಕೊಂಗೋಕ್ಪೀ ಜಿಲ್ಲೆಯಲ್ಲಿ ಗುಂಡಿಕ್ಕಿ ಕೊಂದಿರುವುದಾಗಿ ಪೊಲೀಸರು ಇಂದು ಶುಕ್ರವಾರ ತಿಳಿಸಿದ್ದಾರೆ.
ಹೇಮ್ಖೊತಾಂಗ್ ಅವರು ಕೆಆರ್ಎ ಉಗ್ರ ಸಂಘಟನೆಯೆ ಮುಖ್ಯ ಹಣಕಾಸು ಕಾರ್ಯದರ್ಶಿಯಾಗಿದ್ದರು.
ನಿನ್ನೆ ಗುರುವಾರ ಸಂಜೆ ಕೊಂಗೋಕ್ಪೀ ಜಿಲ್ಲೆಯ ಸೈಕುಲ್ ಬಜಾರ್ ನಲ್ಲಿನ ಹೊಟೇಲೊಂದರ ಸಮೀಪ ಶಸ್ತ್ರಸಜ್ಜಿತ ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಂದರು.
ಕೆಆರ್ಎ ನಾಯಕನ ಹತ್ಯೆಗೆ ಈ ತನಕ ಯಾವುದೇ ವ್ಯಕ್ತಿ ಅಥವಾ ಸಂಘಟನೆ ಹೊಣೆ ಹೊತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಅಂತೆಯೇ ಈ ತನಕ ಯಾರನ್ನೂ ಬಂಧಿಸಿಲ್ಲ; ಸೈಕುಲ್ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿ ತನಿಖೆ ನಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ
ಬಿಲ್ ಗೇಟ್ಸ್ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ
Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು
Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !
Banda; ಗ್ಯಾಂಗ್ಸ್ಟರ್ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ