ಅಯೋಧ್ಯೆ ಪ್ರಕರಣ-ಬಾಬ್ರಿ ಮಸೀದಿ ಪರ ಹಿರಿಯ ವಕೀಲ ಧವನ್ ವಜಾ, ಇಜಾಝ್ ನೇಮಕ!

Team Udayavani, Dec 3, 2019, 11:35 AM IST

ನವದೆಹಲಿ: ಅಯೋಧ್ಯೆ-ಬಾಬ್ರಿ ಮಸೀದಿ ಭೂ ವಿವಾದ ಪ್ರಕರಣದಲ್ಲಿ ಮುಸ್ಲಿಂ ಪರ ಹಿರಿಯ ವಕೀಲ ರಾಜೀವ್ ಧವನ್ ಅವರನ್ನು ಪ್ರಕರಣದಿಂದ ವಜಾಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ. ಇನ್ಮುಂದೆ ಜಾಮಿಯತ್ ಪರ ವಕೀಲರಾಗಿ ಮಕ್ಬೂಲ್ ವಾದ ಮಂಡಿಸಲಿದ್ದಾರೆ.

ಬಾಬ್ರಿ ಪ್ರಕರಣದಲ್ಲಿ ವಕೀಲರಾಗಿದ್ದ ಧವನ್ ಅವರನ್ನು ವಜಾಗೊಳಿಸಿದ್ದು, ಇಜಾಝ್ ಮಕ್ಬೂಲ್ ಅವರು ಜಾಮಿಯತ್ ಪರ ವಕೀಲರಾಗಿ ವಾದ ಮಂಡಿಸಲಿದ್ದಾರೆ. ಯಾವುದೇ ಪೂರ್ವ ಮಾಹಿತಿ ನೀಡದೆ ನನ್ನ ವಜಾಗೊಳಿಸಿದ್ದಾರೆ. ಪುನರ್ ಪರಿಶೀಲನಾ ಅರ್ಜಿಯ ವಾದ ಮಂಡನೆಯಲ್ಲಿ ಅಥವಾ ಪ್ರಕರಣದಲ್ಲಿ ನಾನಿನ್ನು ಭಾಗಿಯಾಗಲ್ಲ ಎಂದು ಧವನ್ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

ನಾನು ಅನಾರೋಗ್ಯದಿಂದ ಇರುವುದರಿಂದ ಬಾಬ್ರಿ ಪ್ರಕರಣದಲ್ಲಿ ವಕೀಲರಾಗಿ ಮುಂದುವರಿಸಲ್ಲ ಎಂದು ಮದನಿ ತನಗೆ ಮಾಹಿತಿ ನೀಡಿದ್ದರು. ಇದು ನಿಜಕ್ಕೂ ಮೂರ್ಖತನ. ಪ್ರಕರಣದಲ್ಲಿ ಯಾರು ವಾದಿಸಬೇಕೆಂದು ವಕೀಲರ ನೇಮಕ ಮಾಡುವ ಹಕ್ಕು ಅವರಿಗೆ ಇದೆ. ಆದರೆ ಇಜಾಝ್  ನನ್ನವಜಾಗೊಳಿಸಲು ನೀಡಿರುವ ಕಾರಣ ದ್ವೇಷದ ಮತ್ತು ಸುಳ್ಳಿನದ್ದಾಗಿದೆ ಎಂದು ಧವನ್ ಪ್ರತಿಕ್ರಿಯೆ ನೀಡಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ