ಶೇರು ಮಾರುಕಟ್ಟೆಗೆ ಕೊರೊನಾ ದಾಳಿ: 5 ನಿಮಿಷದಲ್ಲಿ 5 ಲಕ್ಷ ಕೋಟಿ ನಷ್ಟ
Team Udayavani, Feb 28, 2020, 11:26 AM IST
ಮುಂಬೈ: ಚೀನಾದಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡಿರುವ ಕೊರೊನಾ ವೈರಸ್ ಈಗ ಭಾರತೀಯ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದೆ. ಇಂದು ಮಾರುಕಟ್ಟೆ ಆರಂಭವಾಗುತ್ತಿದ್ದಂತೆ ಸೆನ್ಸೆಕ್ಸ್ ಕುಸಿತವಾಗಿದ್ದು, ಕೇವಲ ಐದು ನಿಮಿಷಗಳ ಅಂತರದಲ್ಲಿ ಹೂಡಿಕೆದಾರರು 5 ಲಕ್ಷ ಕೋಟಿ ರೂ ನಷ್ಟವಾಗಿದೆ.
ಇಂದಿನ ವಹಿವಾಟು ಆರಂಭವಾಗುತ್ತಿದ್ದಂತೆಯೇ ಮುಂಬೈ ಶೇರುಪೇಟೆ ಸೆನ್ಸೆಕ್ಸ್ 1100 ಅಂಕಗಳನ್ನು ಕಳೆದುಕೊಂಡಿದೆ. ಹೀಗಾಗಿ ಸೆನ್ಸೆಕ್ಸ್ 38,661.81 ಅಂಕಗಳಿಗೆ ಸೆನ್ಸೆಕ್ಸ್ ಕುಸಿತವಾಗಿದೆ.
ಟೆಕ್ ಮಹೀಂದ್ರಾ, ಇನ್ಫೋಸಿಸ್, ಮಹೀಂದ್ರಾ ಆಂಡ್ ಮಹಿಂದ್ರಾ, ಟಾಟಾ ಸ್ಟೀಲ್, ರಿಲಯನ್ಸ್ ಇಂಡಸ್ಟ್ರೀಸ್, ಬಜಾಜ್ ಫೈನಾನ್ಸ್ ಸಂಸ್ಥೆಗಳ ಶೇರುಗಳ ಮೌಲ್ಯದಲ್ಲಿ ಕುಸಿತವಾಗಿದ್ದು, ಇಂದಿನ ವಹಿವಾಟಿನಲ್ಲಿ ನಷ್ಟ ಅನುಭವಿಸಿದೆ.
ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಕೊರೊನಾ ವೈರಸ್ ನ ಪರಿಣಾಮದಿಂದ ಉತ್ಪಾದನ ವಲಯದಲ್ಲಿ ಗಂಭೀರ ಪ್ರಮಾಣದ ಪ್ರಭಾವ ಬೀರಿದೆ ಎನ್ನಲಾಗಿದೆ. ಇದು 2008ರ ನಂತರ ನಡೆದ ಅತೀ ದೊಡ್ಡ ಪತನ ದಾಖಲೆಯಾಗಿದೆ.