100 ಕೋಟಿ ರೂ.ಗಳ ಮಾನಹಾನಿ ಮೊಕದ್ದಮೆಗೆ ಸೀರಮ್‌ ಸಿದ್ಧತೆ

ಲಸಿಕೆ ಅಡ್ಡಪರಿಣಾಮ ಆರೋಪ ಹೊರಿಸಿದ ವ್ಯಕ್ತಿ ವಿರುದ್ಧ ಕ್ರಮ , 5 ಕೋಟಿ ಪರಿಹಾರ ಕೇಳಿದ್ದ ಚೆನ್ನೈನ ವ್ಯಕಿ

Team Udayavani, Nov 30, 2020, 8:03 AM IST

100 ಕೋಟಿ ರೂ.ಗಳ ಮಾನಹಾನಿ ಮೊಕದ್ದಮೆಗೆ ಸೀರಮ್‌ ಸಿದ್ಧತೆ

ಚೆನ್ನೈ:  ಪುಣೆಯ ಸೀರಮ್‌ ಇನ್‌ಸ್ಟಿಟ್ಯೂಟ್‌ ಉತ್ಪಾದಿ ಸುತ್ತಿರುವ ಆಕ್ಸ್‌ಫ‌ರ್ಡ್‌ ವಿವಿ ಮತ್ತು ಅಸ್ಟ್ರಾಜೆನಿಕಾ ಲಸಿಕೆ “ಕೊವಿಶೀಲ್ಡ್‌’, ತಮ್ಮ ಮೇಲೆ ಗಂಭೀರ ಅಡ್ಡಪರಿಣಾಮ ಬೀರಿದೆ ಎಂದು ಆರೋಪಿಸಿ 5 ಕೋಟಿ ರೂ.ಗಳ ಪರಿಹಾರ ಕೋರಿದ ವ್ಯಕ್ತಿಯ ವಿರುದ್ಧ ಸಂಸ್ಥೆ ಕಾನೂನು ಕ್ರಮಕ್ಕೆ ಮುಂದಾಗಿದೆ. ದುರುದ್ದೇಶಪೂರಿತ ಆರೋಪವನ್ನು ಹೊರಿಸಿರುವ ವ್ಯಕ್ತಿಯ ವಿರುದ್ಧ 100 ಕೋಟಿ ರೂ.ಗಳ ಮಾನಹಾನಿ ಮೊಕದ್ದಮೆ ದಾಖಲಿಸಲು ಸಿದ್ಧತೆ ನಡೆಸಿದ್ದೇವೆ ಎಂದು ಸೀರಮ್‌ ಇನ್‌ಸ್ಟಿಟ್ಯೂಟ್‌ ರವಿವಾರ ತಿಳಿಸಿದೆ.

ಚೆನ್ನೈನ 40 ವರ್ಷದ ವ್ಯಕ್ತಿಯು ಅ.1ರಂದು ಸೀರಮ್‌ ಆಯೋಜಿಸಿದ್ದ 3ನೇ ಹಂತದ ಪ್ರಯೋಗದಲ್ಲಿ ಲಸಿಕೆ ಸ್ವೀಕರಿಸಿದ್ದರು. ಕಳೆದ ಕೆಲವು ದಿನಗಳಿಂದ ಮೆದುಳಿನಲ್ಲಿನ ನರಕೋಶಗಳಿಗೆ ಆಘಾತವಾಗಿದ್ದು, ಎನ್ಸ್‌ಫಾಲೋಪಥಿ ಸಮಸ್ಯೆ ಕಾಣಿಸಿಕೊಂಡಿದೆ. ಇದರಿಂದಾಗಿ ನೆನಪಿನ ಶಕ್ತಿ ತೀವ್ರವಾಗಿ ಕುಗ್ಗಿದೆ ಎಂದು ಅವರು ಆರೋಪಿಸಿದ್ದರು. ಅಲ್ಲದೆ, ಸೀರಮ್‌ ಸಂಸ್ಥೆ, ಐಸಿಎಂಆರ್‌ ವಿರುದ್ಧ ವಕೀಲರ ಮೂಲಕ ನೋಟಿಸ್‌ ಜಾರಿಗೊಳಿಸಿ, 5 ಕೋಟಿ ರೂ. ಪರಿಹಾರ ನೀಡುವಂತೆ ಬೇಡಿಕೆ ಇಟ್ಟಿದ್ದರು. ಅಲ್ಲದೆ, ಕೊವಿಶೀಲ್ಡ್‌ ಉತ್ಪಾದನೆ, ಹಂಚಿಕೆ ರದ್ದುಗೊಳಿಸುವಂತೆಯೂ ಒತ್ತಾಯಿಸಿದ್ದರು. ಈ ನಡುವೆ, ಭಾರತೀಯ ಔಷಧ ನಿಯಂತ್ರಣ ಸಂಸ್ಥೆ (ಡಿಸಿಜಿಐ) ಮತ್ತು ಸಾಂಸ್ಥಿಕ ನೈತಿಕ ಸಮಿತಿ ಈ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಲು ಮುಂದಾಗಿದೆ.

ಒಂದು ಲಕ್ಷವ್ಯಾಕ್ಸಿನೇಟರ್‌ಗಳ ಪಟ್ಟಿ ಸಿದ್ಧ :

ಹೊಸದಿಲ್ಲಿ: ದೇಶಾದ್ಯಂತ ಕೋವಿಡ್ ಲಸಿಕೆ ವಿತರಣೆ ಮಾಡಲು ಸುಮಾರು ಒಂದು ಲಕ್ಷಕ್ಕೂ ಅಧಿಕ ಮಂದಿಯ ಪಟ್ಟಿಯನ್ನು ಕೇಂದ್ರ ಸರಕಾರ ಸಿದ್ಧಪಡಿಸುತ್ತಿದೆ. ಸರಕಾರಿ ಆಸ್ಪತ್ರೆಗಳಿಂದ 70 ಸಾವಿರ ವ್ಯಾಕ್ಸಿನೇಟರ್‌ಗಳು ಹಾಗೂ ಖಾಸಗಿ ಯಿಂದ 30 ಸಾವಿರ ವ್ಯಾಕ್ಸಿನೇಟರ್‌ಗಳನ್ನು ಈ ಪ್ರಕ್ರಿಯೆಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

2021ರ ಆರಂಭಿಕ ತಿಂಗಳುಗಳಲ್ಲೇ 30 ಕೋಟಿ ಜನರಿಗೆ ಆದ್ಯತೆಯಲ್ಲಿ ಲಸಿಕೆ ಹಂಚಲು ಸರಕಾರ ಚಿಂತನೆ ನಡೆಸಿದೆ. ಸಾರ್ವತ್ರಿಕ ಲಸಿಕೆ ಯೋಜನೆಯ ಭಾಗವಾಗಿರುವವರನ್ನೇ ಆರಂಭಿಕ ಲಸಿಕೆ ವಿತರಣೆಗೆ ಬಳಸಲಾಗುತ್ತದೆ ಎಂದೂ ಹೇಳಲಾಗಿದೆ.

ಇಂದು 3 ಲಸಿಕೆ ಉತ್ಪಾದನ ಸಂಸ್ಥೆ ಜತೆ ಪ್ರಧಾನಿ ಚರ್ಚೆ : ಇಂದು 3 ಲಸಿಕೆ ಉತ್ಪಾದನ ಸಂಸ್ಥೆ ಜತೆ ಪ್ರಧಾನಿ ಚರ್ಚೆ ಭಾರತದ ಪ್ರತಿಷ್ಠಿತ ವ್ಯಾಕ್ಸಿನ್‌ ಹಬ್‌ಗಳಿಗೆ ಭೇಟಿ ನೀಡಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಮತ್ತೆ 3 ಲಸಿಕೆ ಉತ್ಪಾದನ ಸಂಸ್ಥೆಗಳ ಜತೆಗೆ ವರ್ಚುವಲ್‌ ಸಭೆ ನಡೆಸಲಿದ್ದಾರೆ. “ನ.30ರಂದು ಪ್ರಧಾನಿ ನರೇಂದ್ರ ಮೋದಿ ಲಸಿಕೆ ಅಭಿವೃದ್ಧಿಪಡಿಸುತ್ತಿರುವ 3 ಸಂಸ್ಥೆಗಳ ತಂಡದೊಂದಿಗೆ ವೀಡಿಯೋ ಕಾನ್ಫರೆನ್ಸ್‌ ನಡೆಸಲಿದ್ದಾರೆ. ಜೆನ್ನೋವಾ ಬಯೋಫಾರ್ಮಾ, ಬಯೋಲಾಜಿಕಲ್‌ ಇ ಮತ್ತು ಡಾ| ರೆಡ್ಡೀಸ್‌ ಸಂಸ್ಥೆಗಳ ತಂಡಗಳು ಪ್ರಧಾನಿ ಅವರೊಂದಿಗೆ ಸಂವಹನ ನಡೆಸಲಿವೆ’ ಎಂದು ಪಿಎಂಒ ಟ್ವೀಟ್‌ನಲ್ಲಿ ತಿಳಿಸಿದೆ. ಲಸಿಕೆ ಸಂಶೋಧನೆ ಪ್ರಗತಿ, ಕಾರ್ಯವಿಧಾನ ಮತ್ತು ಹಂಚಿಕೆ ಕುರಿತು ಪ್ರಧಾನಿ ಚರ್ಚೆ ನಡೆಸಲಿದ್ದಾರೆ.

ಪ್ರತಿಕಾಯ ಇರುವ ಮಗು ಜನನ! :  ಕೋವಿಡ್ ಸೋಂಕಿಗೆ ಪ್ರತಿಕಾಯ ಹೊಂದಿರುವ ಮಗುವೊಂದು ಸಿಂಗಾಪುರದಲ್ಲಿ ಜನಿಸಿದೆ. ಕಳೆದ ಮಾರ್ಚ್‌ನಲ್ಲಿ ತಾಯಿಗೆ ಸೋಂಕು ದೃಢಪಟ್ಟಿತ್ತು. ಈಗ ಆಕೆ ಮಗುವಿಗೆ ಜನ್ಮ ನೀಡಿದ್ದು, ಅದರ ದೇಹದಲ್ಲಿ ಪ್ರತಿಕಾಯ ಪತ್ತೆಯಾಗಿದೆ. ಇದು ತಾಯಿಯಿಂದ ಮಗುವಿಗೆ ಸೋಂಕು ಹರಡುತ್ತದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಈ ಹಿಂದೆ ಗರ್ಭದ ಹೊರಗಿನ ದ್ರವ ಹಾಗೂ ಮೊಲೆಹಾಲಿನ ಮಾದರಿ ಸಂಗ್ರಹಿಸಿ ನಡೆಸಲಾದ ಅಧ್ಯಯನದಲ್ಲಿ, ತಾಯಿಯಿಂದ ಮಗುವಿಗೆ ಸೋಂಕು ಹರಡಲ್ಲ ಎಂದು ಸಾಬೀತಾಗಿತ್ತು. ಆದರೆ, ಈಗ ಶಿಶುವಿನಲ್ಲಿ ಪ್ರತಿಕಾಯ ಸೃಷ್ಟಿಯಾಗಿರುವುದು ಹೊಸ ಅಧ್ಯಯನಕ್ಕೆ ನಾಂದಿ ಹಾಡಿದೆ.

2000 ಥಿಯೇಟರ್‌ ಸ್ಕ್ರೀನ್‌ ಬಂದ್‌? : ಕೋವಿಡ್ ಲಾಕ್‌ಡೌನ್‌ ಪರಿಣಾಮ ಎಂಬಂತೆ, ಕೆಲವೇ ವಾರಗಳಲ್ಲಿ ದೇಶಾದ್ಯಂತ ಸುಮಾರು 1500ರಿಂದ 2000 ಥಿಯೇಟರ್‌ ಸ್ಕ್ರೀನ್‌ಗಳು ಬಾಗಿಲು ಮುಚ್ಚುವ ಸಾಧ್ಯತೆ ದಟ್ಟವಾಗಿದೆ. ಜನರ ಸ್ಪಂದನೆ ಬಗ್ಗೆ ಅನುಮಾನವಿರುವ ಕಾರಣ ಬಾಲಿವುಡ್‌ನ‌ ಯಾವ ಸಿನೆಮಾಗಳೂ ತೆರೆ ಕಾಣುತ್ತಿಲ್ಲ. ಪ್ರಮುಖ ನಟರು, ನಿರ್ದೇಶಕರು, ನಿರ್ಮಾಪಕರು ಕೂಡ ನೇರವಾಗಿ ಒಟಿಟಿ ಪ್ಲಾಟ್‌ಫಾರಂ ಮೂಲಕವೇ ಸಿನೆಮಾ ಬಿಡುಗಡೆ ಮಾಡುತ್ತಿರುವ ಕಾರಣ, ಥಿಯೇಟರ್‌ಗಳು ಬಾಗಿಲು ಮುಚ್ಚುವ ಪರಿಸ್ಥಿತಿ ಎದುರಾಗಿದೆ ಎಂದು ಬ್ಯುಸಿನೆಸ್‌ ಟುಡೇ ವರದಿ ಮಾಡಿದೆ.

ಟಾಪ್ ನ್ಯೂಸ್

owaisi

ಪಿಎಫ್ ಐ ಕಾರ್ಯ ವಿಧಾನವನ್ನು ಯಾವಾಗಲೂ ವಿರೋಧಿಸುತ್ತಿದ್ದೆ: ಓವೈಸಿ

“ತೋತಾಪುರಿ” ಮೇಲೆ ಸುಮನ ಗಮನ!

“ತೋತಾಪುರಿ” ಮೇಲೆ ಸುಮನ ಗಮನ!

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆ ಶೇ.4ರಷ್ಟು ಏರಿಕೆ; ಕೇಂದ್ರ

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆ ಶೇ.4ರಷ್ಟು ಏರಿಕೆ; ಕೇಂದ್ರ

ಸಂಚಾರ ಪೊಲೀಸರಿಗೆ ಪ್ರತಿದಿನ 40 ಪ್ರಕರಣ ದಾಖಲು ಟಾರ್ಗೆಟ್‌?

ಸಂಚಾರ ಪೊಲೀಸರಿಗೆ ಪ್ರತಿದಿನ 40 ಪ್ರಕರಣ ದಾಖಲು ಟಾರ್ಗೆಟ್‌?

firee

ಚೀನದ ರೆಸ್ಟೋರೆಂಟ್‌ನಲ್ಲಿ ಬೆಂಕಿ ಅವಘಡ: ಕನಿಷ್ಠ 17 ಜನ ಸಾವು

ಮಾಲ್‌ ನಲ್ಲಿ ಸಿನಿಮಾ ಪ್ರಚಾರ: ಜನಸಂದಣಿಯಲ್ಲಿ ಖ್ಯಾತ ನಟಿಯರಿಗೆ ದೈಹಿಕ ಕಿರುಕುಳ

ಮಾಲ್‌ ನಲ್ಲಿ ಸಿನಿಮಾ ಪ್ರಚಾರ: ಜನಸಂದಣಿಯಲ್ಲಿ ಖ್ಯಾತ ನಟಿಯರಿಗೆ ದೈಹಿಕ ಕಿರುಕುಳ

1-dsfsdf

ಹಿಮಾಚಲದಲ್ಲಿ ಕಾಂಗ್ರೆಸ್ ಗೆ ಭಾರಿ ಶಾಕ್: ಕಾರ್ಯಾಧ್ಯಕ್ಷ ಮಹಾಜನ್ ಬಿಜೆಪಿಗೆ ಸೇರ್ಪಡೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

owaisi

ಪಿಎಫ್ ಐ ಕಾರ್ಯ ವಿಧಾನವನ್ನು ಯಾವಾಗಲೂ ವಿರೋಧಿಸುತ್ತಿದ್ದೆ: ಓವೈಸಿ

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆ ಶೇ.4ರಷ್ಟು ಏರಿಕೆ; ಕೇಂದ್ರ

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆ ಶೇ.4ರಷ್ಟು ಏರಿಕೆ; ಕೇಂದ್ರ

ಮಾಲ್‌ ನಲ್ಲಿ ಸಿನಿಮಾ ಪ್ರಚಾರ: ಜನಸಂದಣಿಯಲ್ಲಿ ಖ್ಯಾತ ನಟಿಯರಿಗೆ ದೈಹಿಕ ಕಿರುಕುಳ

ಮಾಲ್‌ ನಲ್ಲಿ ಸಿನಿಮಾ ಪ್ರಚಾರ: ಜನಸಂದಣಿಯಲ್ಲಿ ಖ್ಯಾತ ನಟಿಯರಿಗೆ ದೈಹಿಕ ಕಿರುಕುಳ

1-dsfsdf

ಹಿಮಾಚಲದಲ್ಲಿ ಕಾಂಗ್ರೆಸ್ ಗೆ ಭಾರಿ ಶಾಕ್: ಕಾರ್ಯಾಧ್ಯಕ್ಷ ಮಹಾಜನ್ ಬಿಜೆಪಿಗೆ ಸೇರ್ಪಡೆ

ಪಿಎಫ್ ಐ ನಿಷೇಧ: ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಜಾರಿಯಾಗಿದೆ: ಎಸ್ ಡಿಪಿಐ

ಪಿಎಫ್ ಐ ನಿಷೇಧ: ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಜಾರಿಯಾಗಿದೆ: ಎಸ್ ಡಿಪಿಐ

MUST WATCH

udayavani youtube

ಬಿಜೆಪಿ ಸರಕಾರ ಇರೋವರೆಗೆ ದೇಶ ದ್ರೋಹಿಗಳಿಗೆ ವಿಜೃಂಭಿಸಲು ಅವಕಾಶವಿಲ್ಲ

udayavani youtube

ಉಚ್ಚಿಲ ದಸರಾ ವೈಭವಕ್ಕೆ ಅದ್ದೂರಿಯ ಚಾಲನೆ

udayavani youtube

ಓದಿನ ಜೊತೆ ಕೃಷಿ : ಮಕ್ಕಳೇ ನಿರ್ಮಿಸಿದ ‘ಆರೋಗ್ಯವನ’ !

udayavani youtube

ಕ್ರಿಯೇಟಿವ್ ಪಿಯು ಕಾಲೇಜು ಮೂಡಬಿದ್ರಿ

udayavani youtube

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕಾಂಗ್ರೆಸ್ ನ ಟಾಪ್ ಲೀಡರ್ ಗಳೇ ಬೇಲ್ ನಲ್ಲಿ‌ ಇದ್ದಾರೆ

ಹೊಸ ಸೇರ್ಪಡೆ

20 ವರ್ಷದಿಂದ ನೀರಿನ ಸಂಪರ್ಕ ಕಾಣದ ಓವರ್‌ ಹೆಡ್‌ ಟ್ಯಾಂಕ್‌

20 ವರ್ಷದಿಂದ ನೀರಿನ ಸಂಪರ್ಕ ಕಾಣದ ಓವರ್‌ ಹೆಡ್‌ ಟ್ಯಾಂಕ್‌

13

ಕುರುಗೋಡು: ಪ್ರತಿಯೊಬ್ಬರೂ ಸಂವಿಧಾನತ್ಮಕ ಹಕ್ಕು ಪಡೆಯಲು ಮುಂದಾಗಿ: ನಾಗಪ್ಪ

“ದಿ ಚೆಕ್‌ ಮೇಟ್‌” ಇದು ಮೊದಲನೇ ಸುತ್ತಿನ ಆಟ

“ದಿ ಚೆಕ್‌ ಮೇಟ್‌” ಇದು ಮೊದಲನೇ ಸುತ್ತಿನ ಆಟ

vidhana-soudha

ವಿಳಂಬ ನೀತಿ ಖಂಡಿಸಿ ಸಚಿವಾಲಯದ ನೌಕರರ ಸಂಘದಿಂದ ಮತ್ತೆ ಧರಣಿ

owaisi

ಪಿಎಫ್ ಐ ಕಾರ್ಯ ವಿಧಾನವನ್ನು ಯಾವಾಗಲೂ ವಿರೋಧಿಸುತ್ತಿದ್ದೆ: ಓವೈಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.