ರೆಸ್ಟಾರೆಂಟ್‌ಗಳಲ್ಲಿ ಗ್ರಾಹಕರಿಗೆ ಸರ್ವಿಸ್ ಚಾರ್ಜ್: ಒಕ್ಕೂಟ ಆಕ್ಷೇಪ
Team Udayavani, Jul 7, 2022, 6:35 AM IST
ನವದೆಹಲಿ: ರೆಸ್ಟಾರೆಂಟ್‌ಗಳಲ್ಲಿ ಗ್ರಾಹಕರಿಗೆ ಸರ್ವಿಸ್ ಚಾರ್ಜ್ ವಿಧಿಸಬಾರದು ಎಂದು ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಹೊರಡಿಸಿದ ಆದೇಶ ಕಾನೂನಿನ ಅನ್ವಯ ಮಾನ್ಯತೆ ಪಡೆದಿಲ್ಲ.
ಇದರಿಂದಾಗಿ ಗ್ರಾಹಕರಿಗೆ ಗೊಂದಲ ಉಂಟಾಗಿದೆ ಎಂದು ನ್ಯಾಷನಲ್ ರೆಸ್ಟಾರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ (ಎನ್‌ಆರ್‌ಎಐ) ಬುಧವಾರ ಸ್ಪಷ್ಟಪಡಿಸಿದೆ.
ಇಷ್ಟು ಮಾತ್ರವಲ್ಲದೆ, ರೆಸ್ಟಾರೆಂಟ್‌ಗಳ ಸುಗಮ ವಹಿವಾಟಿನ ಮೇಲೆ ಕೂಡ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ ಎಂದು ಎನ್‌ಆರ್‌ಎಐ ಪ್ರಕಟಣೆಯಲ್ಲಿ ತಿಳಿಸಿದೆ.
ರೆಸ್ಟಾರೆಂಟ್ ಉದ್ದಿಮೆ ವಿರುದ್ಧ ಪ್ರಚಾರ ನಡೆಸುವ ಪ್ರಯತ್ನವೂ ನಡೆದಿದೆ ಎಂದು ಹೇಳಿಕೆಯಲ್ಲಿ ಆರೋಪಿಸಲಾಗಿದೆ.
ಸರ್ವಿಸ್ ಚಾರ್ಜ್ ಎನ್ನುವುದು ಮಾಲೀಕನ ನಿರ್ಧಾರಕ್ಕೆ ಬಿಟ್ಟ ವಿಚಾರವಾಗಿದೆ ಎಂದೂ ಒಕ್ಕೂಟ ಹೇಳಿದೆ.