“ಶಹೀನ್‌ಬಾಗ್‌ ಮುಕ್ತ ದೆಹಲಿಗಾಗಿ ಬಿಜೆಪಿಗೆ ಮತ ಹಾಕಿ’

Team Udayavani, Jan 26, 2020, 10:51 PM IST

ನವದೆಹಲಿ: “ನಿಮಗೆ ಶಹೀನ್‌ಬಾಗ್‌ ಮುಕ್ತ ದೆಹಲಿ ಬೇಕಿದ್ದರೆ ಕಮಲ ಪಕ್ಷಕ್ಕೆ ಮತ ಚಲಾಯಿಸಿ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ದೆಹಲಿಯ ಮತದಾರರಿಗೆ ಕರೆ ನೀಡಿದ್ದಾರೆ.

ಪೌರತ್ವ ಕಾಯ್ದೆಯನ್ನು ವಿರೋಧಿಸಿ ಶಹೀನ್‌ಬಾಗ್‌ ನಲ್ಲಿ ಮಹಿಳೆಯರು ನಿರಂತರ ಪ್ರತಿಭಟನೆ ನಡೆಸುತ್ತಿದ್ದು, ದೆಹಲಿಯಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗಿ, ಜನಸಾಮಾನ್ಯರು ತೊಂದರೆಗೆ ಸಿಲುಕಿರುವ ವರದಿಗಳ ಹಿನ್ನೆಲೆಯಲ್ಲಿ ಅಮಿತ್‌ ಶಾ ಈ ಮಾತುಗಳನ್ನಾಡಿದ್ದಾರೆ.

ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಶಾ, “ಫೆ.8ರಂದು ಶಹೀನ್‌ಬಾಗ್‌ ಮುಕ್ತ ದೆಹಲಿಗಾಗಿ ನೀವು ಬಿಜೆಪಿಗೆ ಮತ ಹಾಕಿ, ಗೆಲ್ಲಿಸಿ. ಆಗ ಫೆ.11ರ ಫ‌ಲಿತಾಂಶದ ದಿನ ಸಂಜೆ ಹೊತ್ತಿಗೆ ಅಲ್ಲಿರುವ ಎಲ್ಲ ಮಹಿಳಾ ಪ್ರತಿಭಟನಾಕಾರರನ್ನು ಜಾಗ ಖಾಲಿ ಮಾಡಿಸುತ್ತೇನೆ’ ಎಂದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಆಮ್‌ ಆದ್ಮಿ ಪಕ್ಷದ ನಾಯಕ, ಡಿಸಿಎಂ ಮನೀಶ್‌ ಸಿಸೋಡಿಯಾ, “ಅಮಿತ್‌ ಶಾ ಅವರೇ, ದೆಹಲಿಯ ಕಾನೂನು ಸುವ್ಯವಸ್ಥೆ ನಿಮ್ಮ ವ್ಯಾಪ್ತಿಗೆ ಬರುತ್ತದೆ. ನೀವು ಸಿಸಿಟಿವಿ, ವೈಫೈಗಾಗಿ ಹುಡುಕುವ ಬದಲು, ಶಹೀನ್‌ಬಾಗ್‌ ಗೆ ತೆರಳಿ ಅಲ್ಲಿನ ಜನರ ಬೇಡಿಕೆಗಳೇನೆಂದು ಕೇಳಿ’ ಎಂದಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ