ಲೋಕಸಮರ-2019; ಬಿಜೆಪಿ ತೊರೆದ ಶತ್ರುಘ್ನಾ ಸಿನ್ನಾ ಕಾಂಗ್ರೆಸ್ ಸೇರ್ಪಡೆ
Team Udayavani, Apr 6, 2019, 1:20 PM IST
ಬಿಹಾರ: ಭಾರತೀಯ ಜನತಾ ಪಕ್ಷದ ಬಂಡಾಯ ಮುಖಂಡ, ಬಾಲಿವುಡ್ ನಟ, ಪಾಟ್ನ ಸಾಹಿಬ್ ಸಂಸದ ಶತ್ರುಘ್ನಾ ಸಿನ್ನಾ ಶನಿವಾರ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಪಕ್ಷದ ಧೋರಣೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ವಿರುದ್ಧ ಸಿನ್ನಾ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಅಲ್ಲದೇ ತಾನು ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗುವುದಾಗಿ ಕಳೆದ ವಾರ ಸಿನ್ನಾ ಘೋಷಿಸಿದ್ದರು.
ಸರಣಿ ಟ್ವೀಟ್ ಮಾಡಿರುವ ಶತ್ರುಘ್ನಾ ಸಿನ್ನಾ, ತುಂಬಾ ಭಾರವಾದ ಹೃದಯದಿಂದ, ನೋವಿನಿಂದ ಕೊನೆಗೂ ನಾನು ನನ್ನ ಹಳೆ (ಬಿಜೆಪಿ) ಪಕ್ಷಕ್ಕೆ ಗುಡ್ ಬೈ ಹೇಳಿದ್ದೇನೆ. ಅದಕ್ಕೆ ಕಾರಣ ಏನೆಂದು ಎಲ್ಲರಿಗೂ ಗೊತ್ತಿದೆ. ಏಪ್ರಿಲ್ 6 ಬಿಜೆಪಿಯ ಸಂಸ್ಥಾಪನಾ ದಿನದಂದು ನಾನು ಕಾಂಗ್ರೆಸ್ ಸೇರ್ಡೆಗೊಂಡಿದ್ದೇನೆ ಎಂದು ಹೇಳಿದ್ದಾರೆ.
ಭಾರತೀಯ ಜನತಾ ಪಕ್ಷದ ಧ್ರುವತಾರೆಯಾಗಿದ್ದ ಭಾರತ್ ರತ್ನ ನಾನಾಜಿ ದಶಮುಖ್, ದಿವಂಗತ ಅಟಲ್ ಬಿಹಾರಿ ವಾಜಪೇಯಿ ಹಾಗೂ ನನ್ನ ಆಪ್ತ ಗೆಳೆಯರು, ಗುರು, ಹಿತೈಷಿಯಾದ ಎಲ್ ಕೆ ಅಡ್ವಾಣಿ ಅವರ ಮಾರ್ಗದರ್ಶನ, ಆಶೀರ್ವಾದದೊಂದಿಗೆ ಬಿಜೆಪಿಯಲ್ಲಿ ಬೆಳೆದಿದ್ದೇನೆ ಎಂದು ಸಿನ್ನಾ ಮತ್ತೊಂದು ಟ್ವೀಟ್ ನಲ್ಲಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ