ಶೆಲ್ಲಿ ದೆಹಲಿಯ ನೂತನ ಮೇಯರ್ ; ಆಲೆ ಮೊಹಮ್ಮದ್ ಉಪ ಮೇಯರ್
ನಾವು ದೆಹಲಿಯನ್ನು ಸ್ಮಾರ್ಟ್ ಸಿಟಿ ಮಾಡುತ್ತೇವೆ...
Team Udayavani, Dec 23, 2022, 8:56 PM IST
ನವದೆಹಲಿ: ದೆಹಲಿ ಮೇಯರ್ ಹುದ್ದೆಗೆ ಶೆಲ್ಲಿ ಒಬೆರಾಯ್ ಅವರ ಹೆಸರನ್ನು ಆಮ್ ಆದ್ಮಿ ಪಕ್ಷ ಘೋಷಿಸಿದೆ. ಅದೇ ರೀತಿ ಉಪ ಮೇಯರ್ ಹುದ್ದೆಗೆ ಆಲೆ ಮೊಹಮ್ಮದ್ ಇಕ್ಬಾಲ್ ಅವರ ಹೆಸರನ್ನು ನಾಮಾಂಕಿತಗೊಳಿಸಿದೆ.
ಈ ಮೊದಲು ದೆಹಲಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದ ಶೆಲ್ಲಿ ಒಬೆರಾಯ್, ಮೊದಲ ಬಾರಿಗೆ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಅಧಿಕಾರಕ್ಕೆ ಬಂದರೆ ಮಹಿಳೆಯನ್ನು ಮೇಯರ್ ಮಾಡುವುದಾಗಿ ಚುನಾವಣೆ ಸಮಯದಲ್ಲಿ ಆಪ್ ಘೋಷಿಸಿತ್ತು.
“ದೆಹಲಿಯನ್ನು ಸ್ವಚ್ಛಗೊಳಿಸುವುದು, ಅದು ಕಂಗೊಳಿಸುವಂತೆ ಮಾಡುವುದು ನನ್ನ ಆದ್ಯತೆಯಾಗಿದೆ. ನಾವು ದೆಹಲಿಯನ್ನು ಸ್ಮಾರ್ಟ್ ಸಿಟಿ ಮಾಡುತ್ತೇವೆ,’ ಎಂದು ಶೆಲ್ಲಿ ಹೇಳಿದ್ದಾರೆ.
250 ವಾರ್ಡ್ ಸದಸ್ಯ ಬಲದ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ 133 ವಾರ್ಡ್ ಗಳಲ್ಲಿ ಅಮೋಘ ಗೆಲುವು ಸಾಧಿಸುವ ಮೂಲಕ ಬಿಜೆಪಿಯಿಂದ ಅಧಿಕಾರ ಕಸಿದಿತ್ತು. ಬಿಜೆಪಿ 105 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಕೇವಲ 8 ವಾರ್ಡ್ ಗಳಲ್ಲಿ ಜಯಗಳಿಸಿ ಮೂರನೇ ಸ್ಥಾನ ಪಡೆದುಕೊಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್