ರಿಜಿಸ್ಟರ್ ಮದುವೆ ವೇಳೆ ಯುವತಿಗೆ ಕೋವಿಡ್ ಇದೆ ಎಂದು ಚೀರಿಕೊಂಡ ಪೋಷಕರು: ನಂತರ ಆದದ್ದೇನು ?
Team Udayavani, Jul 27, 2020, 8:05 AM IST
ಮಧ್ಯಪ್ರದೇಶ: ಪ್ರೀತಿಸಿದ ಜೋಡಿಯೊಂದು ತಮ್ಮ ಮದುವೆಯನ್ನು ಧೃಢಿಕರಿಸಲು (ವಿವಾಹ ನೋಂದಣಿ) ಬಂದ ವೇಳೆ ಹುಡುಗಿಗೆ ಕೋವಿಡ್ ವೈರಸ್ ಇದೆ ಎಂದು ಕುಟುಂಬಸ್ಥರು ಚೀರಿಕೊಂಡ ಘಟನೆ ಖಾಂಡ್ವಾ ಗ್ರಾಮದಲ್ಲಿ ನಡೆದಿದೆ.
22 ವರ್ಷದ ಯುವತಿಯೊಬ್ಬಳು ತನ್ನದೇ ಜಾತಿಯ ಹುಡುಗನನ್ನು ಪ್ರೀತಿಸಿದ್ದಳು. ಮಾತ್ರವಲ್ಲದೆ ರಿಜಿಸ್ಟರ್ ಮದುವೆಯಾಗಲು ಸಬ್ ರಿಜಿಸ್ಟರ್ ಆಪೀಸ್ ಗೆ ತೆರಳಿದ್ದ ವೇಳೆ ಹುಡುಗಿಯ ಪೋಷಕರು ತಮ್ಮ ಮಗಳಿಗೆ ಕೋವಿಡ್ ವೈರಸ್ ಇದೆ ಎಂದು ಕೂಗಿಕೊಂಡಿದ್ದಾರೆ. ಇದರಿಂದ ಬೆದರಿದ ಟೈಪಿಸ್ಟ್ ಸೇರಿದಂತೆ ಇತರರು ಮದುವೆಯನ್ನು ಧೃಢಿಕರಿಸಲು ನಿರಾಕರಿಸಿದ್ದಾರೆ.
ಅಲ್ಲಿದ್ದ ವಕೀಲರು ಕೂಡ ಯಾವುದೇ ಧೃಡೀಕರಣ ಪ್ರಕ್ರಿಯೆ ನಡೆಸುವ ಮೊದಲು ಕೋವಿಡ್ ಪರೀಕ್ಷೆಗೆ ಒಳಗಾಗುವಂತೆ ಯುವತಿಗೆ ಸೂಚನೆ ನೀಡಿದ್ದಾರೆ. ಈ ಸಮಯದಲ್ಲಿ ಹುಡುಗನ ಪೋಷಕರು ಆತನನ್ನು ಕರೆದುಕೊಂಡು ಹೋಗಿ ಕ್ವಾರಂಟೈನ್ ಆಗಿದ್ದಾರೆ.
ಅದಾಗ್ಯೂ ಜಿಲ್ಲಾ ಆರೋಗ್ಯ ಅಧಿಕಾರಿಗಳ ಆ ಪ್ರದೇಶದಲ್ಲಿ ಯಾವುದೇ ಕೋವಿಡ್ ಪ್ರಕರಣಗಳು ವರದಿಯಾಗಿಲ್ಲ ಎಂದು ತಿಳಿಸಿದ್ದಾರೆ.
ನಂತರದಲ್ಲಿ ಹುಡುಗನ ಕುಟುಂಬಸ್ಥರು ಹುಡುಗಿಯನ್ನು ಇಷ್ಟಪಟ್ಟರೂ ಕೂಡ ಹುಡುಗಿಯ ಕುಟುಂಬಸ್ಥರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಈ ಕಾರಣದಿಂದಲೇ ಕೋವಿಡ್ ನೆಪವೊಡ್ಡಿ ವಿವಾಹ ನೋಂದಣಿಗೆ ಅಡ್ಡಿಪಡಿಸಲಾಗಿದೆ ಎಂದು ವರದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ