ಉದ್ಧವ್‌ ಠಾಕ್ರೆ,18 ಶಿವಸೇನೆ ಸಂಸದರಿಂದ ಅಯೋಧ್ಯೆಯಲ್ಲಿ ವಿಶೇಷ ಪೂಜೆ

Team Udayavani, Jun 16, 2019, 12:03 PM IST

ಅಯೋಧ್ಯೆ: ಶಿವಸೇನಾ ವರಿಷ್ಠ ಉದ್ಧವ್‌ ಠಾಕ್ರೆ ,ಶಿವಸೇನೆಯ 18 ಲೋಕಸಭಾ ಸದಸ್ಯರು ಸೇರಿದಂತೆ ಪ್ರಮುಖ ನಾಯಕರು ಭಾನುವಾರ ಅಯೋಧ್ಯೆಗೆ ಭೇಟಿ ನೀಡಿ ರಾಮಲಲ್ಲಾನಿಗೆ ವಿಶೇಷ ಪೂಜೆ ಸಲ್ಲಿಸಿದರು.

ಉದ್ಧವ್‌ ಅವರೊಂದಿಗೆ ಪುತ್ರ ಆದಿತ್ಯ ಠಾಕ್ರೆ ಅವರು ಆಗಮಿಸಿದ್ದರು.

ಮುಂಬಯಿಯಿಂದ ವಿಶೇಷ ವಿಮಾನದಲ್ಲಿ ಆಗಮಿಸಿದ ಉದ್ಧವ್‌ ಠಾಕ್ರೆ ಅವರನ್ನು ಕೇಂದ್ರ ಸಚಿವ ಅರವಿಂದ್‌ ಸಾವಂತ್‌ ಮತ್ತು ಶಿವಸೇನಾ ವಕ್ತಾರ ಸಂಜಯ್‌ ರಾವುತ್‌ ಅವರು ಸ್ವಾಗತಿತಿಸಿದರು.

ರಾಮ ಮಂದಿರನಿರ್ಮಾಣಕ್ಕೆ ನಿರಂತರವಾಗಿ ಒತ್ತಾಯಿಸುತ್ತಲೆ ಬಂದಿರುವ ಶಿವಸೇನೆ ಕೇಂದ್ರ ಸರ್ಕಾರಕ್ಕೆ ಶೀಘ್ರ ಮಂದಿರ ನಿರ್ಮಾಣದ ಕುರಿತು ಘೋಷಿಸಲು ಒತ್ತಾಯಿಸುವ ಸಾಧ್ಯತೆಗಳಿವೆ.

ಪ್ರಸಕ್ತವರ್ಷ ಮಹಾರಾಷ್ಟ್ರದಲ್ಲಿವಿಧಾನಸಭೆ ಚುನಾವಣೆ ನಡೆಯಲಿದ್ದು ರಾಮ ಮಂದಿರದ ವಿಚಾರವೂ ಪ್ರಮುಖವಾಗುವ ಸಾಧ್ಯತೆಗಳಿವೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ