ಪ್ರಧಾನಿಗೆ ಭದ್ರತಾ ಬೆದರಿಕೆ ಇದೆ ಎನ್ನುವುದು ಕೇವಲ ಬೊಗಳೆ: ಶಿವಸೇನೆ
Team Udayavani, Sep 3, 2018, 7:15 PM IST
ಮುಂಬಯಿ : ”ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭದ್ರತಾ ಬೆದರಿಕೆ ಇದೆ ಎಂಬುದು ಕೇವಲ ಒಂದು ಸಂಚಿನ ವ್ಯಾಖ್ಯಾನವಾಗಿದೆ. ಮಾನವ ಹಕ್ಕು ಮತ್ತು ಸಮಾಜ ಕಾರ್ಯಕರ್ತರ ಬಂಧನದ ಬಗ್ಗೆ ಮಹಾರಾಷ್ಟ್ರ ಪೊಲೀಸರು ಹೇಳಿಕೊಂಡಿರುವುದೆಲ್ಲ ಬೊಗಳೆ ” ಎಂದು ಶಿವಸೇನೆ ಹೇಳಿದೆ.
”ಪ್ರಜಾಸತ್ತೆಯಲ್ಲಿ ಯಾವುದೇ ಒಂದು ಸರಕಾರವನ್ನು ಬೀಳಿಸುವುದು ಜನರೇ ಹೊರತು ಮಾವೋವಾದಿಗಳು ಅಥವಾ ನಕ್ಸಲರು ಅಲ್ಲ” ಎಂದು ಶಿವಸೇನೆ, ಬಿಜೆಪಿ ನೇತೃತ್ವದ ಕೇಂದ್ರದ ಎನ್‌ಡಿಎ ಸರಕಾರಕ್ಕೆ ಟಾಂಗ್ ನೀಡಿದೆ.
ತನ್ನ ಸಾಮನಾ ಮುಖವಾಣಿಯಲ್ಲಿ ಶಿವಸೇನೆ, “ತಥಾಕಥಿತ ಮಾವೋವಾದಿಗಳು ಕೇಂದ್ರದಲ್ಲಿನ ಹಾಲಿ ಸರಕಾರವನ್ನು ಬೀಳಿಸಲು ಮುಂದಾಗಿದ್ದಾರೆ’ ಎಂದು ಹೇಳುವುದನ್ನು BJP ನಿಲ್ಲಿಸಬೇಕು; ಏಕೆಂದರೆ ಇದೊಂದು ಮೂರ್ಖ ಹೇಳಿಕೆಯಾಗಿದೆ; ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರದವನ್ನು ಬೀಳಿಸಿದ್ದು ಜನರೇ ಹೊರತು ಮಾವೋವಾದಿಗಳು ಅಥವಾ ನಕ್ಸಲೈಟ್‌ಗಳು ಅಲ್ಲ; ದೇಶದಲ್ಲಿ ಜನರು ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳಿಂದಲೇ ಸರಕಾರವನ್ನು ಬದಲಾಯಿಸುತ್ತಾ ಬಂದಿದ್ದಾರೆ ಹೊರತು ಅನ್ಯರಲ್ಲ ಎಂದು ಶಿವಸೇನೆ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನ್ಯೂಯಾರ್ಕ್ ನಲ್ಲಿ ಭಾರತೀಯ ರೆಸ್ಟೋರೆಂಟ್ ತೆರೆದ ಪ್ರಿಯಾಂಕಾ ಚೋಪ್ರಾ
ಪ್ರಧಾನಿಗೆ ರ್ಯಾಲಿ ಮಾಡಲು ಸಮಯವಿದೆ ರೈತರನ್ನು ಭೇಟಿ ಮಾಡಲು ಸಮಯವಿಲ್ಲ : ಶರದ್ ಪವಾರ್ ಟೀಕೆ
100 ತಿಂಗಳಾದ್ರೂ ಹೋರಾಟ ನಿಲ್ಲಬಾರದು : ರೈತ ಪ್ರತಿಭಟನೆಯಲ್ಲಿ ಪ್ರಿಯಾಂಕಾ ಕರೆ
ದೀದಿ, ಇದನ್ನು ಕೇಳಿ.. ಟಿ ಎಮ್ ಸಿ ಪ್ರಚಾರ ಗೀತೆಗೆ ಪ್ರಧಾನಿ ಅವರ ಪ್ರತಿಕ್ರಿಯೆ..!
BJP ಹಣ ಕೊಟ್ರೆ ತೆಗೆದುಕೊಂಡು TMCಗೆ ಮತ ಹಾಕಿ : ದೀದಿ ಕಿಡಿ