ಶೋಪಿಯಾನ್‌: ಹಿಜ್ಬುಲ್‌ ಟಾಪ್‌ ಕಮಾಂಡರ್‌ ಸೇರಿ 3 ಉಗ್ರರು ಫಿನಿಶ್‌

Team Udayavani, May 3, 2019, 8:23 AM IST

ಶ್ರೀನಗರ: ದಕ್ಷಿಣ ಕಾಶ್ಮೀರದ ಶೋಪಿಯಾನ್‌ನಲ್ಲಿ ಶುಕ್ರವಾರ ಬೆಳಗ್ಗೆಸೇನಾಪಡೆಗಳು ನಡೆಸಿದ ಭಾರೀ ಕಾರ್ಯಾಚರಣೆಯಲ್ಲಿ ಹಿಜ್ಬುಲ್‌ ಮುಜಾಹಿದ್ದೀನ್‌ ಕಮಾಂಡರ್‌ ತಾರೀಖ್‌ ಮೌಲ್ವಿ ಸೇರಿ ಮೂವರು ಉಗ್ರರನ್ನು ಹತ್ಯೆಗೈಯಲಾಗಿದೆ.

ಶೋಪಿಯಾನ್‌ನ ಅಧಾರಾ ಪ್ರದೇಶದ ಇಮಾಮ್‌ ಸಾಹೀಬ್‌ ಪ್ರದೇಶದಲ್ಲಿ ಮನೆಯೊಂದರಲ್ಲಿ ಮೂವರು ಉಗ್ರರು ಅಡಗಿರುವುದು ಖಚಿತವಾದ ಬಳಿಕ ಸೇನಾಪಡೆಗಳು ಮನೆಯನ್ನು ಸುತ್ತುವರಿದು ಕಾರ್ಯಾಚರಣೆ ಆರಂಭಿಸಿದ್ದಾರೆ.

ಶೋಪಿಯಾನ್‌ನಲ್ಲಿ 2016 ರಲ್ಲಿ ಹಿಜ್‌ಬುಲ್‌ ಉಗ್ರ ಬುಹ್ರಾನ್‌ ವಾನಿಯನ್ನು ಸೇನಾಪಡೆಗಳು ಹತ್ಯೆಗೈದ ಬಳಿ ಭಾರೀ ಹಿಂಸಾಚಾರ ಸಂಭವಿಸಿತ್ತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ