ಹಕ್ಕು ಚಲಾಯಿಸಿದ ಶ್ಯಾಮ್ ನೇಗಿ
Team Udayavani, Jan 18, 2021, 2:02 AM IST
ಶಿಮ್ಲಾ: ದೇಶದ ಮೊತ್ತ ಮೊದಲ ಮತದಾರ ಶ್ಯಾಮ್ ಚರಣ್ ನೇಗಿ (103) ರವಿವಾರ ನಡೆದ ಪಂಚಾಯತ್ ಚುನಾವಣೆಯಲ್ಲಿ ಹಕ್ಕು ಚಲಾವಣೆ ಮಾಡಿದ್ದಾರೆ. ಕಿನೌ°ರ್ ಜಿಲ್ಲೆಯ ಕಲ್ಪಾ ಎಂಬ ಮತಗಟ್ಟೆಯಲ್ಲಿ ಅವರು ಹಕ್ಕು ಚಲಾಯಿಸಿದ್ದಾರೆ. ದೃಷ್ಟಿ ಮಂಜಾಗಿದ್ದರೂ ಕುಟುಂಬ ಸದಸ್ಯರ ಸಹಾಯದಿಂದ ಅವರು ಮತಗಟ್ಟೆಗೆ ಆಗಮಿಸಿದ್ದಾರೆ. ಕಿನೌ°ರ್ ಜಿಲ್ಲಾಧಿಕಾರಿ ಹೇಮರಾಜ್ ಬೈರ್ವಾ ಅವರು ನೇಗಿ ಅವರಿಗೆ ಸಾಂಪ್ರದಾಯಿಕ ಟೋಪಿ ಮತ್ತು ಶಾಲು ಹೊದೆಸಿ ಸಮ್ಮಾನ ಮಾಡಿದ್ದಾರೆ. ಜನರೆಲ್ಲರೂ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಉತ್ಸಾಹ ದಿಂದ ಭಾಗವಹಿಸಬೇಕು ಎಂದು ಇದೇ ಸಂದರ್ಭದಲ್ಲಿ ಸಂದೇಶವನ್ನೂ ನೀಡಿದ್ದಾರೆ. ಹಿಮಾಚಲ ಪ್ರದೇಶದಲ್ಲಿ 3 ಹಂತದ ಚುನಾವಣೆ ಜ.17ರಿಂದ ಶುರುವಾಗಿದೆ.