ನೀರಲ್ಲೇ ನಿಂತು ಅಹವಾಲು ಆಲಿಕೆ: ಅಸ್ಸಾಂ ಸಿಲ್ಚಾರ್‌ನಲ್ಲಿ ಸಿಎಂ ಹಿಮಾಂತ ಪರಿಶೀಲನೆ
Team Udayavani, Jun 27, 2022, 7:10 AM IST
ಗುವಾಹಟಿ: ಅಸ್ಸಾಂನಲ್ಲಿ ಒಂದು ವಾರದಿಂದ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, 27 ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ ಇನ್ನೂ ತಗ್ಗಿಲ್ಲ. ಇದರಿಂದಾಗಿ ಬರೋಬ್ಬರಿ 25 ಲಕ್ಷ ಜನರ ಜೀವನ ಸಂಕಷ್ಟದಲ್ಲಿದೆ ಎಂದು ರಾಜ್ಯ ಸರ್ಕಾರ ಭಾನುವಾರ ತಿಳಿಸಿದೆ.
ನೆರೆಯಿಂದಾಗಿ ಮುಳುಗಿರುವ ಚಚಾರ್ ಜಿಲ್ಲೆಯ ಸಿಲ್ಚಾರ್ ನಗರಕ್ಕೆ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಭಾನುವಾರ ಭೇಟಿ ಕೊಟ್ಟು, ಪರಿಶೀಲನೆ ನಡೆಸಿದ್ದಾರೆ. ಕಳೆದ ಒಂದು ವಾರದಲ್ಲಿ ಈ ನಗರಕ್ಕೆ ಸಿಎಂ ಅವರ 2ನೇ ಭೇಟಿ ಇದಾಗಿದೆ. ಹರಿಯುತ್ತಿರುವ ಪ್ರವಾಹದ ನೀರಿನ ನಡುವೆಯೇ ನಡೆದು, ಸ್ಥಳೀಯರ ಅಳಲು ಆಲಿಸಿದರು.
ರಾಜ್ಯ ಸರ್ಕಾರ ಸಮರೋಪಾದಿಯಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯ ನಡೆಸುತ್ತಿದೆ ಎಂದು ತಿಳಿಸಿ 27 ಜಿಲ್ಲೆಗಳ 79 ನಗರಗಳು ಮತ್ತು 2,894 ಗ್ರಾಮಗಳು ಪ್ರವಾಹ ಎದುರಿಸುತ್ತಿವೆ. 637 ಗಂಜಿ ಕೇಂದ್ರಗಳಲ್ಲಿ 2.33 ಲಕ್ಷ ಜನರಿಗೆ ವಸತಿ ಕಲ್ಪಿಸಲಾಗಿದೆ ಎಂದು ರಾಜ್ಯದ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. ರಾಜ್ಯದಲ್ಲಿ ಈಗಾಗಲೇ 121 ಮಂದಿ ಪ್ರವಾಹಕ್ಕೆ ಬಲಿಯಾಗಿದ್ದಾರೆ.
ಶಾಲು ಕೊಡಲು ಬಂದ:
ಮುಖ್ಯಮಂತ್ರಿ ಪರಿಶೀಲನೆ ನಡೆಸುತ್ತಿದ್ದಾಗ ಮನೆಯೊಂದರ ಗೇಟಿನ ಮೇಲೆ ನಿಂತ ವ್ಯಕ್ತಿ ಶಾಲನ್ನು ಸಿಎಂ ಕೊಡಲು ಮುಂದಾಗಿದ್ದಾನೆ. ಆಯ ತಪ್ಪಿ ನೀರಿನೊಳಗೆ ಬಿದ್ದಿದ್ದಾನೆ. ನಂತರ ರಕ್ಷಣಾ ಸಿಬ್ಬಂದಿ ಆತನನ್ನು ಸಿಎಂ ಬಳಿ ಕರೆತಂದಿದ್ದಾರೆ. ಆತ ಸಿಎಂಗೆ ಶಾಲು ಕೊಟ್ಟು ನಮಸ್ಕರಿಸಿದ್ದಾನೆ. ಮುಂದಿನ ಬಾರಿ ನಗರಕ್ಕೆ ಬಂದಾಗ ಮನೆಗೆ ಬಂದು ಚಹಾ ನಿಮ್ಮೊಂದಿಗೆ ಚಹಾ ಕುಡಿಯುತ್ತೇನೆಂದು ಸಿಎಂ ಹಿಮಾಂತ ವಾಗ್ಧಾನ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೀರಿನ ಬಾಟಲ್ ಖರೀದಿ ವಿಚಾರಕ್ಕೆ ಜಗಳವಾಡಿದ್ದಕ್ಕೆ ರೈಲಿಂದಲೇ ಹೊರಕ್ಕೆಸೆದರು
ಜೆಇಇ ಮೈನ್ಸ್ ಪರೀಕ್ಷಾ ಫಲಿತಾಂಶ ಪ್ರಕಟ; ಹೊಸ ದಾಖಲೆ
ಸುಗ್ರೀವಾಜ್ಞೆಗಳನ್ನು ಪರಿಶೀಲಿಸದೇ ಸಹಿ ಹಾಕಲಾರೆ: ಕೇರಳ ರಾಜ್ಯಪಾಲ
ಫೋರ್ಡ್ ಇಂಡಿಯಾ ಕಂಪನಿಯ ಸನಂದ್ ಸ್ಥಾವರ ಈಗ ಟಾಟಾ ತೆಕ್ಕೆಗೆ
ಹಿಮಾಚಲ ಪ್ರದೇಶ ಚುನಾವಣೆ: ಪ್ರತಿ ಮನೆಗೆ 300 ಯೂನಿಟ್ ಉಚಿತ ವಿದ್ಯುತ್; ಕಾಂಗ್ರೆಸ್ ಭರವಸೆ