ಒಡಿಶಾದಲ್ಲಿ ಬೈಕಿಗೆ ಕಾರು ಢಿಕ್ಕಿ: 3 ಮಹಿಳೆಯರ ಸಹಿತ 6 ಮಂದಿ ಸಾವು
Team Udayavani, Oct 20, 2018, 11:42 AM IST
ಪುರಿ : ಕಾರೊಂದು ಬೈಕಿಗೆ ಢಿಕ್ಕಿ ಹೊಡೆದು ಕೊಳವೊಂದಕ್ಕೆ ಉರುಳಿ ಬಿದ್ದ ಭೀಕರ ದುರಂತದಲ್ಲಿ ಆರು ಮಂದಿ ದಾರುಣವಾಗಿ ಮೃತಪಟ್ಟ ಘಟನೆ ಒಡಿಶಾ ದ ಪುರಿ ಜಿಲ್ಲೆಯ ಪಿಪ್ಲೀ ಎಂಬಲ್ಲ ನಡೆದಿದೆ. ಮೃತರಲ್ಲಿ ಮೂವರು ಮಹಿಳೆಯರು ಮತ್ತು ಓರ್ವ ಬಾಲಕಿ ಸೇರಿದ್ದಾರೆ.
ಪುರಿ-ಭುವನೆಶ್ವರ ಹೆದ್ದಾರಿಯಲ್ಲಿ ಶುಕ್ರವಾರ ನಡು ರಾತ್ರಿ ಈ ದುರ್ಘಟನೆ ನಡೆದಿದೆ. ಮೋಟಾರ್ ಬೈಕಿನಲ್ಲಿದ್ದ ದಂಪತಿ ಸ್ಥಳದಲ್ಲೇ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.
ಬೈಕಿಗೆ ಢಿಕ್ಕಿ ಹೊಡೆದ ಬಳಿಕ ಕೊಳಕ್ಕೆ ಉರುಳಿ ಬಿದ್ದ ಕಾರನ್ನು ಸ್ಥಳೀಯರು ಮೇಲಕ್ಕೆತ್ತಿದರು. ಆದರೆ ಅದರೊಳಗಿದ್ದ ನಾಲ್ವರು ಅದಾಗಲೇ ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.