ಈ ಬಾರಿಯ ಮುಂಗಾರು ಮಳೆ ವಾಡಿಕೆಗಿಂತ ಕಡಿಮೆ, ಎಲ್‌ ನಿನೋ ಕಾರಣ: Skymet

Team Udayavani, Apr 3, 2019, 4:00 PM IST

ಹೊಸದಿಲ್ಲಿ : ಈ ಬಾರಿಯ ಮುಂಗಾರು ಮಳೆ ವಾಡಿಕೆಗಿಂತ ಕಡಿಮೆ ಇರಲಿದೆ ಎಂದು ಖಾಸಗಿ ಹವಾಮಾನ ಅಂದಾಜು ಸಂಸ್ಥೆ  ಸ್ಕೈಮೆಟ್‌  ಇಂದು ಬುಧವಾರ ತಿಳಿಸಿದೆ.

ಈ ಬಾರಿಯ ಮುಂಗಾರು ಮಳೆಯ ದೀರ್ಘಾವಧಿ ಸರಾಸರಿ (ಎಲ್‌ಪಿಎ) ಶೇ. 93ರಷ್ಟು ಇರುವ ಸಂಭವವಿದೆ ಎಂದು ಅದು ತಿಳಿಸಿದೆ.

ಶೇ.90ರಿಂದ ಶೇ.95ರ ನಡುವಿನ ಎಲ್‌ಪಿಎ (ದೀರ್ಘಾವಧಿ ಸರಾಸರಿ) ಮಳೆ ಪ್ರಮಾಣವನ್ನು ವಾಡಿಕೆಗಿಂತ ಕಡಿಮೆ ಎಂದು ಪರಿಗಣಿಸಲಾಗುತ್ತದೆ.

ದೀರ್ಘಾವಧಿ ಸರಾಸರಿ ಮಳೆ ಪ್ರಮಾಣವು 1951 ಮತ್ತು 2000 ಇಸವಿಯ ನಡುವಿನ ಅವಧಿಯಲ್ಲಾಗಿರುವ 89 ಸೆ.ಮೀ. ಸರಾಸರಿ ಮಳೆ ಎನ್ನುವುದು ಗಮನಾರ್ಹ.

ಈ ಬಾರಿಯ ಮುಂಗಾರು ಮಳೆ ವಾಡಿಕೆಗಿಂತ ಕಡಿಮೆ ಆಗುವುದಕ್ಕೆ ಎಲ್‌ ನಿನೋ ವಿದ್ಯಮಾನವೇ ಸಂಭವನೀಯ ಕಾರಣ ಎಂದು ಸ್ಕೈಮೆಟ್‌ ಸಿಇಓ ಜತಿನ್‌ ಸಿಂಗ್‌ ಹೇಳಿದ್ದಾರೆ.

ಸ್ಕೈಮೆಟ್‌ ನುಡಿದಿರುವ ಭವಿಷ್ಯದ ಪ್ರಕಾರ ಈ ಬಾರಿಯ ಮುಂಗಾರು ಮಳೆ ವಾಡಿಕೆಗಿಂತ ಕಡಿಮೆಯಾಗುವ ಸಾಧ್ಯತೆಯು ಶೇ.55ರಷ್ಟು ಇದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಬೆಂಗಳೂರು: ರಾಜ್ಯದಲ್ಲಿ ಐದು ತಿಂಗಳ ಹಿಂದೆ ನಡೆದ ರಾಜಕೀಯ ಪ್ರಹಸನದ ಅನಂತರ ರಚನೆಯಾದ ಬಿಜೆಪಿ ಸರಕಾರದ ಅಳಿವು-ಉಳಿವು ಹಾಗೂ ಅನರ್ಹಗೊಂಡ 17 ಶಾಸಕರ ಪೈಕಿ ಉಪಚುನಾವಣೆಗೆ...

  • ಹೊಸದಿಲ್ಲಿ: ಸೋಮವಾರದಿಂದ ರಣಜಿ ಪಂದ್ಯಾವಳಿ ಆರಂಭವಾಗಲಿದೆ. ಆದರೆ ಬಿಸಿಸಿಐ ಇನ್ನೂ ಅಂಕಣ ಹೇಗಿರಬೇಕೆಂಬ ಮಾರ್ಗದರ್ಶಿ ಸೂತ್ರಗಳನ್ನು ತಿಳಿಸಿಲ್ಲ ಎಂದು ಕ್ಯುರೇಟರ್‌ಗಳು...

  • ಹೊಸದಿಲ್ಲಿ: ಎಲ್ಲ ವಾಹನ ಮಾಲಕರೂ ತಮ್ಮ ವಾಹನಗಳ ಸಂಖ್ಯೆಗೆ ತಮ್ಮ ಮೊಬೈಲ್‌ ಸಂಖ್ಯೆಗಳನ್ನು ಜೋಡಿಸುವ ನಿಯಮ ಎ. 1ರಿಂದ ದೇಶವ್ಯಾಪಿ ಕಡ್ಡಾಯವಾಗಲಿದೆ. ಕೇಂದ್ರ ಸಾರಿಗೆ...

  • ಕೋಟಿ ರೂ. ಎನ್ನುವುದು ನಮಗೆ ಇಂದಿಗೂ ಕನಸು. ಅಷ್ಟು ಹಣ ಸಂಪಾದಿಸಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಆದರೆ, ಬ್ಯಾಂಕಿನಲ್ಲಿ ತಿಂಗಳಿಗೆ ಕೇವಲ 5,000ರೂ. ಕೂಡಿಡುವುದರ...

  • ಮೇಲುನೋಟಕ್ಕೆ ಸಹಕಾರಿ ಮತ್ತು ವಾಣಿಜ್ಯ ಬ್ಯಾಂಕುಗಳ ನಡುವೆ ಜನರಿಗೆ ವ್ಯತ್ಯಾಸವೇನೂ ಕಾಣುವುದಿಲ್ಲ. ಅವೆರಡೂ ಒಂದೇ ರೀತಿ ಕಾರ್ಯ ನಿರ್ವಹಿಸುತ್ತಿರುವಂತೆ ಕಾಣುತ್ತದೆ....