ಪಶುವೈದ್ಯೆ ಅತ್ಯಾಚಾರಿ ಆರೋಪಿಗಳಿಗೆ ತೆಲಂಗಾಣ ಜೈಲಿನಲ್ಲಿ ಮಟನ್ ಕರ್ರಿ…. ಭೂರಿ ಭೋಜನ!

Team Udayavani, Dec 3, 2019, 6:13 PM IST

ಹೈದರಾಬಾದ್: ಹೈದರಾಬಾದ್ ನಲ್ಲಿ ನಡೆದ ಪಶುವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಮತ್ತೊಂದೆಡೆ ಪೈಶಾಚಿಕ ಕೃತ್ಯ ಎಸಗಿ ತೆಲಂಗಾಣದ ಚೆರ್ಲಾಪಲ್ಲಿಯ ಬಿಗಿ ಭದ್ರತೆಯ ಜೈಲಿನಲ್ಲಿರುವ ನಾಲ್ವರು ಆರೋಪಿಗಳಿಗೆ ರಾಜಾಥಿತ್ಯ ದೊರೆತಿರುವುದಾಗಿ ವರದಿ ತಿಳಿಸಿದೆ.

ಪಶುವೈದ್ಯೆಯ ಹತ್ಯೆಯಲ್ಲಿ ಜೈಲುಪಾಲಾಗಿರುವ ನಾಲ್ವರು ಆರೋಪಿಗಳಿಗೆ ದಾಲ್, ರೈಸ್ ಮತ್ತು ಮಟನ್ ಕರ್ರಿ ಊಟ ನೀಡಲಾಗಿದೆ ಎಂದು ವರದಿ ವಿವರಿಸಿದೆ.

ಆರೋಪಿಗಳ ಮೇಲೆ ನಿರಂತರವಾಗಿ ನಿಗಾ ಇಡಲಾಗಿದೆ. ಪ್ರಥಮ ದಿನ ಜೈಲಿನಲ್ಲಿ ನಾಲ್ವರು ಆರೋಪಿಗಳು ನಿದ್ರೆ ಇಲ್ಲದೆ ಕಳೆದಿದ್ದಾರೆ. ಅಲ್ಲದೇ ಜೈಲಿನ ಕೈಪಿಡಿ ಪ್ರಕಾರ ಆರೋಪಿಗಳಿಗೆ ದಾಲ್ ರೈಸ್ ಮತ್ತು ಮಟನ್ ಕರ್ರಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿರುವುದಾಗಿ ಆಂಗ್ಲದೈನಿಕ ವರದಿ ಮಾಡಿದೆ.

ತೆಲಂಗಾಣದ ಪಶುವೈದ್ಯೆಯ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಶುಕ್ರವಾರ ಆರೋಪಿಗಳನ್ನು ಪೊಲೀಸರು ಮನೆಯಲ್ಲಿಯಿಂದಲೇ ಬಂಧಿಸಿ ಕರೆದೊಯ್ದಿದ್ದರು. ಪ್ರಕರಣದ ಪ್ರಮುಖ ಆರೋಪಿ, ಲಾರಿ ಚಾಲಕ ಮೊಹಮ್ಮದ್ ಆರೀಫ್, ಜೋಲ್ಲು ಶಿವ, ಜೋಲ್ಲು ನವೀನ್ ಮತ್ತು ಚಿಂಟಾಕುಂಟಾ ಚೆನ್ನಕೇಶವಲು ಈಗ ಜೈಲುಕಂಬಿ ಎಣಿಸುತ್ತಿದ್ದಾರೆ. ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಬೇಕೆಂದು ದೇಶಾದ್ಯಂತ ಆಗ್ರಹಿಸುತ್ತಿದ್ದಾರೆ.

ಬುಧವಾರ ರಾತ್ರಿ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಂಶಾಬಾದ್ ನಲ್ಲಿ 26ವರ್ಷದ ಪಶುವೈದ್ಯೆಯ ಮೇಲೆ ನಾಲ್ವರು ಅತ್ಯಾಚಾರ ಎಸಗಿ ನಂತರ ಪೆಟ್ರೋಲ್ ಸುರಿದು ಬೆಂಕಿಹಚ್ಚಿ ಸುಟ್ಟುಬಿಟ್ಟಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ