ಇಂದು ಮೊಬೈಲ್ ಕಂಪೆನಿಗಳಿಂದ ಹೆಚ್ಚುವರಿ ಆದಾಯ ಪಾವತಿ?
Team Udayavani, Feb 17, 2020, 7:30 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ಸುಪ್ರೀಂಕೋರ್ಟ್ ಹೊಂದಾಣಿಕೆ ಮಾಡಲಾಗಿರುವ ಹೆಚ್ಚುವರಿ ಆದಾಯ (ಎಜಿಆರ್) ಪಾವತಿಗೆ ಖಡಕ್ ತಾಕೀತು ಮಾಡಿರುವ ಹಿನ್ನೆಲೆಯಲ್ಲಿ ಏರ್‌ಟೆಲ್, ವೊಡಾ ಐಡಿಯಾ, ಟಾಟಾ ಟೆಲೆ ಸರ್ವಿಸಸ್ ಸೇರಿಕೊಂಡು ಸೋಮವಾರ 1 ಲಕ್ಷ ಕೋಟಿ ರೂ. ಪಾವತಿ ಮಾಡುವ ಸಾಧ್ಯತೆ ಇದೆ.
ಈ ಬಗ್ಗೆ ಮೂರು ಕಂಪೆನಿಗಳ ಪ್ರತಿನಿಧಿಗಳು ದೂರಸಂಪರ್ಕ ಇಲಾಖೆಗೆ ಮಾಹಿತಿ ನೀಡಿವೆ. ಮೊದಲ ಕಂತಿನಲ್ಲಿ ಏರ್‌ಟೆಲ್ 10 ಸಾವಿರ ಕೋಟಿ ರೂ. ನೀಡುವುದಾಗಿ ಶುಕ್ರವಾರ ಹೇಳಿಕೊಂಡಿತ್ತು. ಒಟ್ಟು 1.47 ಲಕ್ಷ ಕೋಟಿ ರೂ. ಬಾಕಿ ಪೈಕಿ 1.13 ಲಕ್ಷ ಕೋಟಿ ರೂ.ಸಂಗ್ರಹಿಸುವ ಸಾಧ್ಯತೆ ಇದೆ.