ಕ್ಯಾನ್ಸರ್ ಚಿಕಿತ್ಸೆ ಪಡೆದು ಮುಂಬಯಿಗೆ ಮರಳಿದ ಸೋನಾಲಿ ಬೇಂದ್ರೆ
Team Udayavani, Dec 3, 2018, 11:07 AM IST
ಹೊಸದಿಲ್ಲಿ : ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ನ್ಯೂಯಾರ್ಕ್ ನಲ್ಲಿ ಕ್ಯಾನ್ಸರ್ ಚಿಕಿತ್ಸೆ ಪಡೆದು ಇದೀಗ ಮುಂಬಯಿಗೆ ಮರಳಿದ್ದಾರೆ. ಸೊನಾಲಿ ಬೇಂದ್ರೆ ಜತೆ ಪತಿ ಗೋಲ್ಡಿ ಬೆಹಲ್ ಇರುವುದನ್ನು ಮಾಧ್ಯಮದವರು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದರು.
ಉನ್ನತ ಹಂತ ತಲುಪಿದ ಕ್ಯಾನ್ಸರ್ ಗೆ ಕೆಮೋಥೆರಪಿ ಮತ್ತಿತರ ಬಗೆಯ ಅತ್ಯಾಧುನಿಕ ಚಿಕಿತ್ಸೆಯನ್ನು ಪಡೆಯುವಲ್ಲಿ ತಲೆಬೋಳಾಗುವುದು ಸಹಜವೇ ಆಗಿದ್ದು ಸೊನಾಲಿ ಬೇಂದ್ರೆ ವಾಸ್ತವತೆಯನ್ನು ಮರೆ ಮಾಚದೆ ಧೈರ್ಯ ಮತ್ತು ನಗುಮೊಗದಿಂದ ಕ್ಯಾಮೆರಾ ಎದುರಿಸಿರುವುದು ಕ್ಯಾನ್ಸರ್ ಗೆಲ್ಲುವ ಆಕೆಯ ಸಂಕಲ್ಪ ಶಕ್ತಿಗೆ ಸಾಕ್ಷಿಯಾಯಿತು.
ಅಂದ ಹಾಗೆ ಸೋನಾಲಿ ಬೇಂದ್ರೆ ಸಾಮಾಜಿಕ ಜಾಲ ತಾಣದಲ್ಲಿ ಸ್ಫೂರ್ತಿದಾಯಕ ಪೋಸ್ಟ್ಗಳನ್ನು ಹಾಕಿದ್ದು ಕ್ಯಾನ್ಸರ್ ವಿರುದ್ಧದ ತನ್ನ ಹೋರಾಟದ ಕುರಿತು ಬರೆದಿದ್ದಾರೆ.
ನ್ಯೂಯಾರ್ಕ್ನಲ್ಲಿ ಚಿಕಿತ್ಸೆ ಪಡೆದ ಸಂದರ್ಭದಲ್ಲಿ ಸೋನಾಲಿ ಅವರನ್ನು ಬಾಲಿವುಡ್ ಮಿತ್ರರಾದ ಪ್ರಿಯಾಂಕಾ ಚೋಪ್ರಾ, ಸುಸಾನ್ ಖಾನ್, ಹೃತಿಕ್ ರೋಶನ್, ಅಕ್ಷಯ್ ಕುಮಾರ್, ನೀತು ಕಪೂರ್ ಮೊದಲಾಗಿ ಅನೇಕ ತಾರೆಯರು ಭೇಟಿ ಮಾಡಿ ಧೈರ್ಯ ಉತ್ಸಾಹ ತುಂಬಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ
ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ
ತಂಗಿ ಮದುವೆಗೆ ಟಿವಿ ಗಿಫ್ಟ್ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ