ಬಾಹ್ಯಾಕಾಶ ಸಹಭಾಗಿತ್ವ ಚೀನ ಜತೆ ಒಪ್ಪಂದ ರದ್ದು
Team Udayavani, Mar 12, 2019, 12:30 AM IST
ಹೊಸದಿಲ್ಲಿ: ನಾವು ನೋಡದ ಚಂದ್ರನ ಭಾಗದಲ್ಲಿ ಗಗನ ನೌಕೆಯನ್ನು ಕಳುಹಿಸಿ, ಅಧ್ಯಯನ ನಡೆಸುವ ಚೀನದ ಚೇಂಜ್ 4 ಯೋಜನೆಯಲ್ಲಿ ಭಾರತ ಸಹಭಾಗಿತ್ವ ನೀಡಿತ್ತಾದರೂ, ಭಾರತದ ಉಪಗ್ರಹವನ್ನು ಹೊತ್ತೂಯ್ಯಲು ಚೀನ ಬಾಹ್ಯಾಕಾಶ ಸಂಸ್ಥೆ ನಿರಾಕರಿಸಿದ್ದರಿಂದಾಗಿ ಈ ಸಹಭಾಗಿತ್ವ ಮುರಿದು ಬಿದ್ದಿದೆ. ಕಳೆದ ಜನವರಿಯಲ್ಲೇ ಈ ಗಗನ ನೌಕೆಯನ್ನು ಚೀನ ಚಂದ್ರನಲ್ಲಿಗೆ ಕಳುಹಿಸಿದೆ. ಅಂದಿನಿಂದಲೂ ಚೇಂಜ್ 4 ನೌಕೆ ಹಲವು ಉನ್ನತ ಗುಣಮಟ್ಟದ ಫೋಟೋಗಳನ್ನು ಕಳುಹಿಸಿದೆ. ಭಾರತ ಸೇರಿ ಹಲವು ದೇಶಗಳು ಈ ಯೋಜನೆಯ ಭಾಗವಾಗಿದ್ದವು. 2015ರಲ್ಲಿ ಯೋಜನೆಗೆ ಚೀನ ಬಾಹ್ಯಾಕಾಶ ಸಂಸ್ಥೆಯೊಂದಿಗೆ ಇಸ್ರೋ ಸಹಭಾಗಿತ್ವ ಸಾಧಿಸಿತ್ತು. ಜರ್ಮನಿ, ಸ್ವೀಡನ್, ನೆದರ್ಲೆಂಡ್ಸ್ ಹಾಗೂ ರಷ್ಯಾ ಕೂಡ ಕೈಜೋಡಿಸಿತ್ತು. ಈ ಯೋಜ ನೆಯ ಅಡಿ 7 ವರ್ಷಗಳಲ್ಲಿ 19 ಯೋಜನೆಗಳನ್ನು ಜಾರಿಗೊಳಿಸುವ ಉದ್ದೇಶವಿತ್ತು. ರಿಮೋಟ್ ಸೆನ್ಸಿಂಗ್ ಉಪಗ್ರಗಳು, ಬಾಹ್ಯಾಕಾಶ ಆಧಾರಿತ ಹವಾಮಾನ ಮುನ್ಸೂಚನೆ ವ್ಯವಸ್ಥೆ, ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಭಾಗಿತ್ವ ಸಾಧಿಸುವ ಉದ್ದೇಶವಿತ್ತು.