ಪ್ರಧಾನಿ ಮೋದಿ ಜತೆ ವಿಶೇಷ ಅತಿಥಿ
Team Udayavani, Jul 4, 2019, 5:16 AM IST
ನವದೆಹಲಿ: ಪ್ರತಿ ದಿನವೂ ರಾಷ್ಟ್ರೀಯ, ಅಂತಾರಾಷ್ಟ್ರೀಯ ಗಣ್ಯರನ್ನು ಭೇಟಿಯಾಗುವ ಪ್ರಧಾನಿ ಮೋದಿ ಬುಧವಾರ ವಿಶೇಷ ವ್ಯಕ್ತಿಯನ್ನು ಭೇಟಿಯಾದರು. ಅವರೇ ಗುಜರಾತ್ನ ಕಿಮ್ಚಂದ್ ಚಂದ್ರಾನಿ. ಚುನಾವಣೆಯಲ್ಲಿ ಬಿಜೆಪಿಗೆ 300 ಸ್ಥಾನಗಳು ಬಂದಿರುವುದನ್ನು ವಿಶೇಷ ರೀತಿಯಲ್ಲಿ ಸಂಭ್ರಮಿಸಲು ಗುಜರಾತ್ನ ಅಮ್ರೇಲಿಯ ಕಿಮ್ಚಂದ್ ಚಂದ್ರಾನಿ ಮುಂದಾದರು. ಅದಕ್ಕಾಗಿ ಅವರು, ಅಮ್ರೇಲಿಯಿಂದ ನವದೆಹಲಿಗೆ 17 ದಿನಗಳಲ್ಲಿ 1,170 ಕಿಮೀ ದೂರವನ್ನು ಸೈಕಲ್ ಮೂಲಕ ಕ್ರಮಿಸಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಜತೆಗಿನ ಭೇಟಿಯ ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ. ಜತೆಗೆ ಚಂದ್ರಾನಿ ಸಾಧನೆಯನ್ನು ಕೊಂಡಾಡಿದ್ದಾರೆ. ಹಣೆಯಲ್ಲಿ ತಿಲಕ ಧರಿಸಿ ಅವರು ಪ್ರಯಾಣ ಶುರು ಮಾಡಿದ್ದರು. ಚುನಾವಣೆಯಲ್ಲಿ 300 ಸ್ಥಾನಗಳು ಬಂದರೆ ಸೈಕಲ್ ಮೂಲಕ ನವದೆಹಲಿಗೆ ತೆರಳಿ ಪ್ರಧಾನಿ ಭೇಟಿಯಾಗುವ ಪ್ರತಿಜ್ಞೆ ಮಾಡಿದ್ದಾಗಿ ಚಂದ್ರಾನಿ ಹೇಳಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್