ಖಾಯಂ ಕೋರ್ಟ್‌ ಹಾಜರಾತಿಗೆ ವಿನಾಯಿತಿ ಕೋರಿದ್ದ ಪ್ರಜ್ಞಾ ಅರ್ಜಿ ವಜಾ

Team Udayavani, Jun 20, 2019, 4:24 PM IST

ಮುಂಬಯಿ: ವಾರಕ್ಕೊಮ್ಮೆ ಕೋರ್ಟ್‌ಗೆ ಹಾಜರಾಗುವುದಿರಿಂದ ವಿನಾಯಿತಿ ಕೋರಿ ಭೋಪಾಲ್‌ನ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕೂರ್‌ ಅವರು ಸಲ್ಲಿಸಿದ್ದ ಅರ್ಜಿಯನ್ನುಗುರುವಾರ ಎನ್‌ಐಎ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ.

ನಾನು ಸಂಸತ್‌ಗೆ ಹಾಜರಾಗಬೇಕು ಹೀಗಾಗಿ ಖಾಯಂ ಹಾಜರಾತಿಯಿಂದ ವಿನಾಯಿತಿ ನೀಡಬೇಕು ಎಂದು ಮನವಿ ಮಾಡಿದ್ದರು.

2008 ರ ಮಾಲೆಗಾಂವ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಕೋರ್ಟ್‌ಗೆ ಹಾಜರಾಗುವುದಕ್ಕೆ ಇಂದು ಗುರುವಾರ ಮಾತ್ರ ಎನ್‌ಐಎ ವಿಶೇಷ ನ್ಯಾಯಾಲಯ ವಿನಾಯಿತಿ ನೀಡಿದೆ.

ನನಗೆ ಮುಂಬಯಿ ಮತ್ತು ಹತ್ತಿರದಲ್ಲಿ ನಿವಾಸವಿಲ್ಲ, ಭದ್ರತೆಯೊಂದಿಗೆ ತಿರುಗಾಡುವುದಕ್ಕೆ ಕಷ್ಟವಾಗುತ್ತದೆ ಎಂದು ಮನವಿ ಮಾಡಿದ್ದರು.

ಮಾಲೆಗಾಂವ್‌ ಸ್ಫೋಟಕ್ಕೆ ಸಂಬಂಧಿಸಿ ಸಾಧ್ವಿ ಪ್ರಜ್ಞಾ ಸಿಂಗ್‌ಸೇರಿದಂತೆ ಪ್ರಮುಖ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ