ಒಂದೇ ದಿನ 65,002 ಹೊಸ ಸೋಂಕಿತರು, 996 ಮಂದಿ ಸಾವು: 25 ಲಕ್ಷ ದಾಟಿದ ದೇಶದ ಸೋಂಕಿತರ ಸಂಖ್ಯೆ
Team Udayavani, Aug 15, 2020, 12:25 PM IST
ಹೊಸದಿಲ್ಲಿ: ದೇಶದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಲೇ ಇದೆ. ಶುಕ್ರವಾರ ದೇಶದಲ್ಲಿ 65,002 ಮಂದಿಗೆ ಕೋವಿಡ್-19 ಸೋಂಕು ದೃಢವಾಗಿದ್ದು, 996 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.
ದೇಶದ ಒಟ್ಟು ಸೋಂಕಿತರ ಸಂಖ್ಯೆ 25 ಲಕ್ಷ ಮೀರಿದೆ. ಶುಕ್ರವಾರದ 65 ಸಾವಿರ ಪ್ರಕರಣಗಳಿಂದ ಸೋಂಕಿತರ ಸಂಖ್ಯೆ 25,26,193ಕ್ಕೆ ಏರಿಕೆ ಕಂಡಿದೆ. ದೇಶದ ಚೇತರಿಕಾ ಗುಣಮಟ್ಟ 71.61 ಇದ್ದು, ಇದುವರೆಗೆ 18, 08,937 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಸದ್ಯ 6,68,220 ಸಕ್ರಿಯ ಪ್ರಕರಣಗಳಿವೆ.
ಕಳೆದ 24 ಗಂಟೆಯಲ್ಲಿ ದೇಶದಲ್ಲಿ 996 ಜನ ಸೋಂಕಿತರು ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ 49,036 ಕ್ಕೆ ಏರಿಕೆಯಾಗಿದೆ.
ಇದುವರೆಗೆ ದೇಶದಲ್ಲಿ 2,85,63,095 ಜನರ ಗಂಟಲು ಮಾದರಿ ಪರೀಕ್ಷೆ ನಡೆಸಲಾಗಿದೆ. ಶುಕ್ರವಾರ ಒಂದೇ ದಿನ 8,69,679 ಕೋವಿಡ್ ಟೆಸ್ಟ್ ಮಾಡಲಾಗಿದ್ದು, 65,002 ಪ್ರಕರಣಗಳು ಪಾಸಿಟಿವ್ ಆಗಿದೆ.