ಪಿಎಂ ಮೋದಿ ಬಯೋಪಿಕ್ ಚಿತ್ರಕ್ಕೆ ತಡೆ ಕೋರಿಕೆ : ಎ.8ರಂದು ಸುಪ್ರೀಂ ವಿಚಾರಣೆ
Team Udayavani, Apr 4, 2019, 11:34 AM IST
ಹೊಸದಿಲ್ಲಿ : ಪ್ರಧಾನಿ ಮೋದಿ ಬಯೋಪಿಕ್ ಚಿತ್ರ ಬಿಡುಗಡೆಗೆ ತಡೆ ನೀಡಬೇಕೆಂಬ ಕಾಂಗ್ರೆಸ್ ನಾಯಕರೋರ್ವರ ಮನವಿಯನ್ನು ಎ.8ರಂದು ವಿಚಾರಣೆಗೆ ಎತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಇಂದು ಗುರುವಾರ ಒಪ್ಪಿದೆ.
ಜಸ್ಟಿಸ್ ಎಸ್ ಎ ಬೋಬಡೆ ನೇತೃತ್ವದ ಸುಪ್ರೀಂ ಪೀಠ ಮುಂದಿನ ಸೋಮವಾರ ಎ.8ರಂದು ಪ್ರಕರಣದ ವಿಚಾರಣೆ ನಡೆಸಲಿದೆ.
ಕಾಂಗ್ರೆಸ್ ವಕ್ತಾರ ಹಾಗೂ ವಕೀಲ, ಅರ್ಜಿದಾರ ಅಮನ್ ಪನ್ವಾರ್ ಅವರ ಪರವಾಗಿ ಸುಪ್ರೀಂ ಕೋರ್ಟಿನಲ್ಲಿ ವಾದಿಸಲಿರುವ ಹಿರಿಯ ನ್ಯಾಯವಾದಿ ಎ ಎಂ ಸಿಂಗ್ವಿ ಅವರು “ವಿವೇಕ್ ಒಬೆರಾಯ್ ನಟನೆಯ ಪಿಎಂ ನರೇಂದ್ರ ಮೋದಿ ಬಯೋಪಿಕ್ ಚಿತ್ರದ ತಡೆಗೆ ಎರಡು ಹೈಕೋರ್ಟ್ಗಳು ನಿರಾಕರಿಸಿವೆ” ಎಂದು ಹೇಳಿದರು.
‘ಮೋದಿ ಬಯೋಪಿಕ್ ಚಿತ್ರ ಬಿಡುಗಡಯಾದಲ್ಲಿ ಸಂವಿಧಾನದ ಆಶಯದ ಪ್ರಕಾರ ಮುಕ್ತ ಮತ್ತು ಔಚಿತ್ಯಪೂರ್ಣ ರೀತಿಯಲ್ಲಿ ಚುನಾವಣೆ ನಡೆಯುವುದಕ್ಕೆ ಬಾಧೆ ಉಂಟಾಗುತ್ತದೆ’ ಎಂದು ಮನವಿಯಲ್ಲಿ ಹೇಳಲಾಗಿದೆ.
ಮೋದಿ ಬಯೋಪಿಕ್ ಚಿತ್ರ ಎ.5ರಂದು ತೆರೆ ಕಾಣುವುದೆಂದು ಈ ಮೊದಲು ಹೇಳಲಾಗಿತ್ತು. ಆದರೆ ಇಂದು ಗುರುವಾರದ ವರದಿಗಳ ಪ್ರಕಾರ ಚಿತ್ರದ ಬಿಡುಗಡೆಯನ್ನು ಇನ್ನೂ ಕೆಲ ದಿನಗಳ ಮಟ್ಟಿಗೆ ವಿಳಂಬಿಸಲಾಗುವುದು ಎಂದು ತಿಳಿದು ಬಂದಿದೆ ಎಂದು ಸಿಂಗ್ವಿ ಹೇಳಿದರು.
ಮಧ್ಯ ಪ್ರದೇಶ ಹೈಕೋರ್ಟಿನ ಇಂದೋರ್ ಪೀಠ ಮತ್ತು ಬಾಂಬೆ ಹೈಕೋರ್ಟ್ ಮೋದಿ ಬಯೋಪಿಕ್ ತಡೆ ವಿಚಾರದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ