Udayavni Special

ಉಗ್ರ ಬೆಂಬಲ ಕೂಡಲೇ ನಿಲ್ಲಿಸಿ,ಇಲ್ಲವೇ ಪರಿಣಾಮ ಎದುರಿಸಿ: ಪಾಕಿಗೆ ಭಾರತ


Team Udayavani, Feb 15, 2019, 6:43 AM IST

wagha-border-retrat-700.jpg

ಹೊಸದಿಲ್ಲಿ : ಪಾಕಿಸ್ಥಾನ ತನ್ನ ನೆಲದಲ್ಲಿ ಭಾರತದ ವಿರುದ್ಧ ಕಾರ್ಯಾಚರಿಸುತ್ತಿರುವ ಉಗ್ರರನ್ನು ಮತ್ತು ಉಗ್ರ ಸಮೂಹಗಳನ್ನು ಬೆಂಬಲಿಸುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಭಾರತ, ಪಾಕಿಗೆ ಅತ್ಯಂತ ನಿಷ್ಠುರ ಮತ್ತು ಕಠಿನ ಎಚ್ಚರಿಕೆಯನ್ನು ನೀಡಿದೆ. 

ಜಮ್ಮು ಕಾಶ್ಮೀರದ ಪುಲ್ವಾಮಾದ ಆವಂತಿಪೋರಾದಲ್ಲಿ ಜೈಶ್‌ ಎ ಮೊಹಮ್ಮದ ಸಂಘಟನೆಯ ಉಗ್ರ ಆತ್ಮಾಹುತಿ ದಾಳಿ ನಡೆಸಿ 44 ಯೋಧರನ್ನು ಬಲಿ ಪಡೆದುದನ್ನು ಅನುಸರಿಸಿ ಭಾರತ, ಪಾಕಿಸ್ಥಾನಕ್ಕೆ ಈ ಕಟುವಾದ ಎಚ್ಚರಿಕೆಯನ್ನು ನೀಡಿದೆ. 

ಆವಂತಿಪೋರಾ ಉಗ್ರ ದಾಳಿಯ ಸ್ಪಷ್ಟ ಚಿತ್ರಣ ಗುರುವಾರ ಸಂಜೆಯ ವೇಳೆಗೆ ದೊರಕಿದ ತತ್‌ಕ್ಷಣ ಕೇಂದ್ರ ಗೃಹ ಸಚಿವಾಲಯ ಅಧಿಕೃತ ಪ್ರಕಟನೆ ಹೊರಡಿಸಿ ಪಾಕಿಸ್ಥಾನಕ್ಕೆ ಈ ಕಟು ಎಚ್ಚರಿಕೆಯನ್ನು ನೀಡಿತಲ್ಲದೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 1267 ನಿಷೇಧಗಳ ಸಮಿತಿಯ ಪ್ರಕಾರ ಘೋಷಿತ ಉಗ್ರ ಎನಿಸಿಕೊಂಡಿರುವ ಜೆಇಎಂ ಮುಖ್ಯಸ್ಥ  ಮಸೂದ್‌ ಅಜರ್‌ ನನ್ನು ನಿಷೇಧಿತ ಉಗ್ರನೆಂದು ಸಾರಿತು. 

ಜಮ್ಮು ಶ್ರೀನಗರ ಹೆದ್ದಾರಿಯಲ್ಲಿ ನಡೆದಿದ್ದ ಜೈಶ್‌ ಉಗ್ರನ ಆತ್ಮಾಹುತಿ ದಾಳಿಯಲ್ಲಿ 44 ಸಿಆರ್‌ಪಿಎಫ್ ಯೋಧರು ಮೃತಪಟ್ಟಿರುವುದು ಮತ್ತು ಅವರ ದೇಹಗಳು ನುಚ್ಚುನೂರಾಗಿ ಚೆಲ್ಲಾಪಿಲ್ಲಿಯಾಗಿ ರಸ್ತೆ ತುಂಬ ಹರಡಿಕೊಂಡು ಬಿದ್ದಿರುವ ದೃಶ್ಯವನ್ನು ಕಂಡು ಇಡಿಯ ದೇಶದ ಜನರು ಸಹಜವಾಗಿಯೇ ಆಕ್ರೋಶಿತರಾಗಿದ್ದಾರೆ. 

ಭಾರತದ ವಿರುದ್ಧ ದಾಳಿ ಎಸಗುವ ಉದ್ದೇಶದಲ್ಲಿ ಅಸಂಖ್ಯ  ಉಗ್ರರನ್ನು ಮತ್ತು ಹಲವಾರು ಉಗ್ರ ಸಂಘಟನೆಗಳನ್ನು ತನ್ನ ನೆಲದಲ್ಲಿ ಪೋಷಿಸಿ ಬೆಳೆಸಿ ಬೆಂಬಲಿಸುತ್ತಿರುವ ಪಾಕಿಗೆ ಎಂದೂ ಮರೆಯದ ಘೋರ ಪಾಠವನ್ನು ನಾವು ಕಲಿಸುವೆವು ಎಂದು ಪ್ರಧಾನಿ ಮೋದಿ ಘೋಷಿಸಿದ್ದಾರೆ.

ಟಾಪ್ ನ್ಯೂಸ್

aaryan

ಡ್ರಗ್ಸ್ ಪ್ರಕರಣದಲ್ಲಿ ಜಾಮೀನಿಲ್ಲ: ಆರ್ಯನ್ ಖಾನ್ ಗೆ ಜೈಲೇ ಗತಿ

ತಾಲಿಬಾನ್ ಉಗ್ರರ ರಣಕೇಕೆ; ವಾಲಿಬಾಲ್ ತಂಡದ ಸ್ಟಾರ್ ಆಟಗಾರ್ತಿಯ ಶಿರಚ್ಛೇದನ

ತಾಲಿಬಾನ್ ಉಗ್ರರ ರಣಕೇಕೆ; ವಾಲಿಬಾಲ್ ತಂಡದ ಸ್ಟಾರ್ ಆಟಗಾರ್ತಿಯ ಶಿರಚ್ಛೇದನ

1-bc

ಕರ್ನಾಟಕದ 12 ದ್ವೀಪಗಳಿಗಾಗಿ ಗೋವಾ ಸರಕಾರದಿಂದ ಕೇಂದ್ರಕ್ಕೆ ಮನವಿ

1-bb

ಬಜರಂಗದಳದಿಂದ ಐವನ್ ಡಿಸೋಜ ಮನೆಗೆ ಮುತ್ತಿಗೆ ಯತ್ನ

Untitled-1

ಆರ್ ಎಸ್ಎಸ್ ಬಗ್ಗೆ ಮಾತನಾಡುವ ಕುಮಾರಸ್ವಾಮಿ ಒಬ್ಬ ಬುದ್ಧಿಮಾಂದ್ಯ: ಸೋಮಶೇಖರ ರೆಡ್ಡಿ

ಮೋದಿ, ಬೊಮ್ಮಾಯಿ, ಬೆಲೆಯೇರಿಕೆ ಈ ಮೂರೂ ದೇಶಕ್ಕೆ ಅಪಾಯಕಾರಿ: ರಣದೀಪ್ ಸಿಂಗ್ ಸುರ್ಜೇವಾಲಾ

ಮೋದಿ, ಬೊಮ್ಮಾಯಿ, ಬೆಲೆಯೇರಿಕೆ ಈ ಮೂರೂ ದೇಶಕ್ಕೆ ಅಪಾಯಕಾರಿ: ರಣದೀಪ್ ಸಿಂಗ್ ಸುರ್ಜೇವಾಲಾ

kadala teerada barghavaru

ಕಡಲ ತೀರದಲ್ಲಿ ಹೊಸಬರ ಕನಸು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

aaryan

ಡ್ರಗ್ಸ್ ಪ್ರಕರಣದಲ್ಲಿ ಜಾಮೀನಿಲ್ಲ: ಆರ್ಯನ್ ಖಾನ್ ಗೆ ಜೈಲೇ ಗತಿ

sene

ಶೋಪಿಯಾನ್ ನಲ್ಲಿ ಸೇನಾಕಾರ್ಯಾಚರಣೆ : ಇಬ್ಬರು ಉಗ್ರರ ಹತ್ಯೆ

ಉತ್ತರಾಖಂಡ್: ವರುಣಾರ್ಭಟ, ಪ್ರವಾಹ, ಭೂಕುಸಿತ: ಸಾವಿನ ಸಂಖ್ಯೆ 46ಕ್ಕೆ ಏರಿಕೆ

ಉತ್ತರಾಖಂಡ್: ವರುಣಾರ್ಭಟ, ಪ್ರವಾಹ, ಭೂಕುಸಿತ: ಸಾವಿನ ಸಂಖ್ಯೆ 46ಕ್ಕೆ ಏರಿಕೆ

ಬುದ್ಧನ ನಿರ್ವಾಣ ಸ್ಥಳ;ಕುಶಿನಗರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ಮೋದಿ

ಬುದ್ಧನ ನಿರ್ವಾಣ ಸ್ಥಳ;ಕುಶಿನಗರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ಮೋದಿ

ಕಾಶ್ಮೀರದಲ್ಲಿ ಯೋಧರ ಹತ್ಯೆ;ಪಾಕ್ ಜತೆ ಟಿ-20 ಕ್ರಿಕೆಟ್ ಪಂದ್ಯವಾಡ್ತೀರಾ? ಕೇಂದ್ರಕ್ಕೆ ಒವೈಸಿ

ಕಾಶ್ಮೀರದಲ್ಲಿ ಯೋಧರ ಹತ್ಯೆ;ಪಾಕ್ ಜತೆ ಟಿ-20 ಕ್ರಿಕೆಟ್ ಪಂದ್ಯವಾಡ್ತೀರಾ? ಕೇಂದ್ರಕ್ಕೆ ಒವೈಸಿ

MUST WATCH

udayavani youtube

ಮಲೆನಾಡಿನಾದ್ಯಂತ ಭೂಮಿ ಹುಣ್ಣಿಮೆಯ ಸಂಭ್ರಮ

udayavani youtube

ನಮ್ಮ ಸೇನೆಗೊಂದು ಸಲಾಂ

udayavani youtube

ಮೋದಿ ಹೆಬ್ಬೆಟ್ಟ್ ಗಿರಾಕಿ ಟ್ವಿಟ್‍ಗೆ ಶಿವಕುಮಾರ್ ವಿಷಾದ

udayavani youtube

ಗೋವಿನಲ್ಲಿ ಶ್ರೇಷ್ಠ ‘ಕಪಿಲಾ’ ಗೋವಿನ ವಿಶೇಷತೆಗಳೇನು ?

udayavani youtube

‘ಡೀಮ್ಡ್ ಫಾರೆಸ್ಟ್’ ಎಂದು ಈ ಕಾರಣಗಳಿಗೆ ಘೋಷಣೆಯಾಗುತ್ತೆ

ಹೊಸ ಸೇರ್ಪಡೆ

rayachuru news

ಮಳಿಗೆ ದುರಸ್ತಿ, ಮರು ಹರಾಜಿನತ್ತ ನಗರಸಭೆ ಚಿತ್ತ

rayachuru news

ಸಿಂಧನೂರು ಕ್ಷೇತ್ರದಲ್ಲಿ “ಎನ್‌ಸಿಪಿ’ ಕಸರತ್ತು ಶುರು

ರಸ್ತೆ ಗುಂಡಿ ಮುಚ್ಚಲು ಆರಕ್ಷಕರು ಬದ್ಧ

ರಸ್ತೆ ಗುಂಡಿ ಮುಚ್ಚಲು ಆರಕ್ಷಕರು ಬದ್ಧ

vijayapura news

ಗುಡಿಹಾಳದಲ್ಲೊಂದು ಮಾದರಿ ಗ್ರಂಥಾಲಯ

The price of vegetables

“ಶತಕ’ ದಾಟಿದ ತರಕಾರಿಗಳ ಬೆಲೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.