22ರಂದು ಬ್ಯಾಂಕ್ ನೌಕರರ ರಾಷ್ಟ್ರವ್ಯಾಪಿ ಮುಷ್ಕರ
Team Udayavani, Aug 8, 2017, 7:50 AM IST
ಚೆನ್ನೈ: ಬ್ಯಾಂಕಿಂಗ್ ವಲಯದಲ್ಲಿನ ಸುಧಾರಣೆ ಮತ್ತು ಇತರ ವಿಚಾರಗಳ ನ್ನೆತ್ತಿ ಇದೇ ತಿಂಗಳ 22ರಂದು ದೇಶಾದ್ಯಂತ ಮುಷ್ಕರ ನಡೆಸಲು ಬ್ಯಾಂಕ್ ನೌಕರರು ನಿರ್ಧರಿಸಿದ್ದಾರೆ.
ರಾಷ್ಟ್ರವ್ಯಾಪಿ ಬ್ಯಾಂಕಿಂಗ್ ವಲಯವು ಆ ದಿನ ಮುಷ್ಕರದಲ್ಲಿ ಪಾಲ್ಗೊಳ್ಳಲಿದೆ ಎಂದು ಬ್ಯಾಂಕ್ ಒಕ್ಕೂಟಗಳ ಸಂಯುಕ್ತ ವೇದಿಕೆ ಹೇಳಿದೆ. ಇದೇ ವೇಳೆ, ನೌಕರರ ವೇತನ ಪರಿಷ್ಕರಣೆಯ ಬೇಡಿಕೆ ಯನ್ನೂ ಮುಂದಿಡಲಾಗುವುದು ಎಂದು ಅಖೀಲ ಭಾರತ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಚ್. ವೆಂಕಟಾಚಲಂ ಹೇಳಿದ್ದಾರೆ.