ಜಾಗತಿಕ ಬೆಳವಣಿಗೆಗೆ ಭಾರತ – ಚೀನ ಪಾಲುದಾರಿಕೆ ಮುಖ್ಯ
Team Udayavani, Apr 29, 2017, 2:04 AM IST
ವಾಷಿಂಗ್ಟನ್: ಜಾಗತಿಕ ಬೆಳವಣಿಗೆಗೆ ಭಾರತ ಮತ್ತು ಚೀನ ನಡುವಿನ ಪಾಲುದಾರಿಕೆ ಒಪ್ಪಂದ ಪರಿಣಾಮಕಾರಿ ಹಾಗೂ ಮಹತ್ವದ್ದಾಗಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಹೇಳಿದೆ. ಜಾಗತಿಕ ಮಟ್ಟದಲ್ಲಿ ಉಭಯ ರಾಷ್ಟ್ರಗಳ ಸಹಕಾರ ಮುಖ್ಯ. ಅಲ್ಲದೆ, ಎರಡು ಬಲಿಷ್ಠ ರಾಷ್ಟ್ರಗಳ ನಡುವಿನ ಪಾಲುದಾರಿಕೆ ಒಪ್ಪಂದ ಕೂಡ ಮಹತ್ವದ್ದಾಗಿದೆ. ಇದರಿಂದ ಇನ್ನಷ್ಟು ಸಾಧನೆ ಸಾಧ್ಯ. ಸಮತೋಲನ ಕಾಪಾಡಿಕೊಳ್ಳಲೂ ಸಾಧ್ಯವಾಗಲಿದೆ ಎಂದು ಐಎಂಎಫ್ನ ಉಪ ವ್ಯವಸ್ಥಾಪಕ ನಿರ್ದೇಶಕ ಟೋ ಝಾಂಗ್ ಹೇಳಿದ್ದಾರೆ. ಜತೆಗೆ, ಜಿಎಸ್ಟಿಯಿಂದಾಗಿ ಭಾರತದ ಮಧ್ಯಮಾವಧಿ ಆರ್ಥಿಕ ಪ್ರಗತಿ ಶೇ.8ಕ್ಕೇರಲಿದೆ ಎಂದೂ ಐಎಂಎಫ್ ಭವಿಷ್ಯ ನುಡಿದಿದೆ.