ನಿರ್ಭಯ್‌ ಯಶಸ್ವಿ ಪರೀಕ್ಷೆ

Team Udayavani, Apr 16, 2019, 6:00 AM IST

ಬಾಲಸೋರ್‌: ಭಾರತದಲ್ಲೇ ತಯಾರಿಸಿದ ದೂರಗಾಮಿ ಸಬ್‌ ಸೋನಿಕ್‌ ಕ್ರೂಸ್‌ ಕ್ಷಿಪಣಿ ನಿರ್ಭಯ್‌ ಅನ್ನು ಒಡಿಶಾದ ಬಾಲಸೋರ್‌ನಲ್ಲಿ ಸೋಮವಾರ ಯಶಸ್ವಿಯಾಗಿ ಪ್ರಯೋಗಿಸಲಾಗಿದೆ. ಈ ಕ್ಷಿಪಣಿಯನ್ನು ಹಲವು ಫ್ಲಾಟ್‌ಫಾರಂಗಳಲ್ಲಿ ಅಳವಡಿಸಿ ಉಡಾವಣೆ ಮಾಡಬಹುದಾಗಿದ್ದು, ಮಧ್ಯಾಹ್ನ 11.44ಕ್ಕೆ ಉಡಾವಣೆ ಮಾಡಲಾಯಿತು. ಇದು 1000 ಕಿ.ಮೀ ದೂರದ ವರೆಗೆ ಸಾಗುವ ಸಾಮರ್ಥ್ಯ ಹೊಂದಿದೆ ಮತ್ತು 300 ಕಿಲೋ ತೂಕದ ಶಸ್ತ್ರವನ್ನು ಹೊತ್ತೂಯ್ಯುವ ಶಕ್ತಿಯನ್ನೂ ಒಳಗೊಂಡಿದೆ.

4ನೇ ಹಂತದ ಜಿಎಸ್‌ಎಲ್‌ವಿ ಅಭಿವೃದ್ಧಿಗೆ ಸಮ್ಮತಿ: ನಾಲ್ಕನೇ ಹಂತದ ಜಿಎಸ್‌ಎಲ್‌ವಿ ಅಭಿವೃದ್ಧಿಗೊಳಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. 2021-24ರ ಅವಧಿಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗುತ್ತದೆ. ಜಿಯೋ ಇಮೇಜಿಂಗ್‌, ನ್ಯಾವಿಗೇಶನ್‌, ಡೇಟಾ ಸಂವಹನ ಮತ್ತು ಬಾಹ್ಯಾಕಾಶ ವಿಜ್ಞಾನದ ಉದ್ದೇಶಕ್ಕೆ ಎರಡು ಟನ್‌ ಸಾಮರ್ಥ್ಯದ ಉಪಗ್ರಹಗಳನ್ನು ಈ ಜಿಎಸ್‌ಎಲ್‌ವಿ ಬಳಸಿ ಉಡಾವಣೆ ಮಾಡಲಾಗುತ್ತದೆ. ಇದಕ್ಕಾಗಿ ಸರ್ಕಾರ 2729 ಕೋಟಿ ರೂ. ಮೀಸಲಿಟ್ಟಿದೆ. ಈ ಐದು ಹಂತದ ರಾಕೆಟ್‌ ಒಳಗೊಂಡಿರುವ ಜಿಎಸ್‌ಎಲ್‌ವಿ ಇಂದ ಮುಂದಿನ ಮಂಗಳಯಾನಕ್ಕೆ ಅಗತ್ಯ ಪೂರ್ವ ಸಿದ್ಧತೆಗೂ ಸಹಾಯವಾಗಲಿದೆ. ಸದ್ಯ ಜಿಎಸ್‌ಎಲ್‌ವಿ ಅಭಿವೃದ್ಧಿ ಯೋಜನೆಗಳ ಪೈಕಿ ಎರಡು ಹಂತ ಮುಗಿದಿದ್ದು, ಮೂರನೇ ಹಂತ ಚಾಲ್ತಿಯಲ್ಲಿದ್ದು, 2021 ರ ವೇಳೆಗೆ ಮುಗಿಯಲಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ