ಸುರಕ್ಷಾ ವರದಿ ಸಲ್ಲಿಕೆ
Team Udayavani, Apr 1, 2019, 6:00 AM IST
ಹೊಸದಿಲ್ಲಿ: 2016ರಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ನಡೆದಿದ್ದ ಸರ್ಜಿಕಲ್ ಸ್ಟ್ರೈಕ್‌ನ ರೂವಾರಿಯಾಗಿದ್ದ ನಿವೃತ್ತ ಲೆಫ್ಟಿನಂಟ್ ಕರ್ನಲ್ ಡಿ.ಎಸ್. ಹೂಡಾ, ಸದ್ಯದ ರಾಷ್ಟ್ರೀಯ ಸುರಕ್ಷತೆಯ ಬಗ್ಗೆ ತಾವು ತಯಾರಿಸಲಾದ ವರದಿಯನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಸಲ್ಲಿಸಿದ್ದಾರೆ.
ಫೆಬ್ರವರಿಯಲ್ಲಿ ರಾಹುಲ್, ಹೂಡಾರನ್ನು “ರಾಷ್ಟ್ರೀಯ ಸುರಕ್ಷೆ ವಿಷಯದ ಟಾಸ್ಕ್ ಫೋರ್ಸ್’ (ಕಾಂಗ್ರೆಸ್‌ನ ಸಮಿತಿ) ಮುಖ್ಯಸ್ಥರನ್ನಾಗಿ ನೇಮಿಸಿ, ರಾಷ್ಟ್ರೀಯ ಸುರಕ್ಷತೆಯ ಬಗ್ಗೆ ವರದಿ ನೀಡುವಂತೆ ಸೂಚಿಸಿದ್ದರು. ಈ ಜವಾಬ್ದಾರಿ ಹೊತ್ತ ತಿಂಗಳೊಳಗೆ ವರದಿಯನ್ನು ಹೂಡಾ ಸಲ್ಲಿಸಿದ್ದಾರೆ.