ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯಲ್ಲಿ ಜವಾನರ ಆತ್ಮಹತ್ಯೆ ಪ್ರಮಾಣ ಇಳಿಕೆ
Team Udayavani, Feb 13, 2019, 1:34 PM IST
ಹೊಸದಿಲ್ಲಿ : 2018ರಲ್ಲಿ ವಿವಿಧ ಕಾರಣಗಳಿಗಾಗಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ 96 ಜವಾನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ವಿಷಯ ಗೃಹ ಸಚಿವಾಲಯದ (ಎಂಎಚ್ಎ) ವರದಿಯಲ್ಲಿ ಬಹಿರಂಗವಾಗಿದೆ.
ಕಳೆದ ಮೂರು ವರ್ಷಗಳಲ್ಲಿ, 2016ರಲ್ಲಿ 90 ಮತ್ತು 2017ರಲ್ಲಿ 121 ಆತ್ಮಹತ್ಯೆಗಳು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯಲ್ಲಿ ಸಂಭವಿಸಿತ್ತು. ಆತ್ಮಹತ್ಯೆ ಪ್ರಮಾಣವನ್ನು ಕಡಿಮೆ ಮಾಡಲು ಸರಕಾರ ವಿವಿಧ ಕ್ರಮಗಳ ಮೂಲಕ ನಿರಂತರವಾಗಿ ಯತ್ನಿಸಿದೆ ಎಂದು ವರದಿ ಹೇಳಿದೆ.