- Friday 13 Dec 2019
ಸಮುದ್ರದಲ್ಲಿ ತೇಲಿ ಬಂದ ಆ ಸೂಟ್ ಕೇಸ್ ನಲ್ಲಿತ್ತು ವ್ಯಕ್ತಿಯ ಕೈ, ಕಾಲು ಮತ್ತು ಮರ್ಮಾಂಗ!
Team Udayavani, Dec 3, 2019, 8:46 PM IST
ಮುಂಬಯಿ: ಇಲ್ಲಿನ ಮಾಹಿಮ್ ಸಮುದ್ರ ತೀರ ಪ್ರದೇಶದಲ್ಲಿ ಮಕ್ದೂಮ್ ಶಾ ಬಾಬಾ ಮಂದಿರದ ಸಮೀಪ ಕಡಲಲ್ಲಿ ತೇಲಿ ಬಂದ ಕಪ್ಪು ಬಣ್ಣದ ಪುಟ್ಟ ಸೂಟ್ ಕೇಸೊಂದನ್ನು ತೆರೆದ ಪೊಲೀಸರು ಅರೆ ಕ್ಷಣ ಬೆಚ್ಚಿಬಿದ್ದಿದ್ದರು. ಕಿನಾರೆಯಲ್ಲಿ ಸಾಗುತ್ತಿದ್ದವರು ಸುಮುದ್ರದಲ್ಲಿ ತೇಲಿ ಬರುತ್ತಿದ್ದ ಕಪ್ಪು ಬಣ್ಣದ ಸೂಟ್ ಕೇಸೊಂದನ್ನು ನೋಡಿ ಗಾಬರಿಗೊಂಡು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದರು.
ಆ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆ ಸೂಟ್ ಕೇಸನ್ನು ದಡಕ್ಕೆ ತಂದು ಅದನ್ನು ತೆರೆದು ಪರಿಶೀಲಿಸತೊಡಗಿದರು. ಆ ಸಂದರ್ಭದಲ್ಲಿ ಅವರಿಗೆ ಸೂಟ್ ಕೇಸ್ ಒಳಗಡೆ ಭುಜದಿಂದ ಬೇರ್ಪಡಿಸಲ್ಪಟ್ಟ ಒಂದು ಕೈ ಮತ್ತು ಕಾಲಿನ ಒಂದು ಭಾಗ ಹಾಗೂ ಗಂಡಸಿನ ಮರ್ಮಾಂಗದ ಭಾಗಗಳನ್ನು ಕಂಡು ಬೆಚ್ಚಿಬಿದ್ದರು. ತಕ್ಷಣವೇ ಸಾವರಿಸಿಕೊಂಡು ಈ ಎಲ್ಲಾ ದೇಹ ಭಾಗಗಳನ್ನು ಪೊಲೀಸರು ಸಮೀಪದ ಸಿಯಾನ್ ಆಸ್ಪತ್ರಗೆ ಪರಿಶೀಲನೆಗೆಂದು ಕಳುಹಿಸಿಕೊಟ್ಟಿದ್ದಾರೆ.
ಸ್ಥಳೀಯ ಮೀನುಗಾರರು ಮತ್ತು ಕರಾವಳಿ ತೀರ ಪಡೆಗಳನ್ನೊಳಗೊಂಡ ತಂಡವನ್ನು ರಚಿಸಿ ಕೊಲೆಯಾಗಿರಬಹುದಾದ ವ್ಯಕ್ತಿಯ ದೇಹವನ್ನು ಸುಮದ್ರದಲ್ಲಿ ಮತ್ತು ತೀರ ಪ್ರದೇಶದಲ್ಲಿ ಹುಡುಕುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಾತ್ರವಲ್ಲದೇ ಈ ಭಾಗದ ಸುತ್ತಮುತ್ತಲಿನ ಸಿಸಿಟಿವಿ ಫೂಟೇಜ್ ಗಳ ತಪಾಸಣೆಯನ್ನೂ ಸಹ ಪೊಲೀಸರು ನಡೆಸುತ್ತಿದ್ದಾರೆ.
ಕೊಲೆಯಾಗಿರಬಹುದಾದ ವ್ಯಕ್ತಿಯ ಗುರುತನ್ನು ಪತ್ತೆಹಚ್ಚುವ ಕಾರ್ಯವೂ ನಡೆಯುತ್ತಿದೆ. ಇದಕ್ಕಾಗಿ ನಗರ ಠಾಣೆಗಳಲ್ಲಿ ಮತ್ತು ನಗರದ ಹೊರಭಾಗದಲ್ಲಿ ನಾಪತ್ತೆಯಾಗಿರುವ ವ್ಯಕ್ತಿಗಳ ಕುರಿತಾಗಿಯೂ ಪೊಲೀಸರು ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಐಪಿಸಿ 302 (ಕೊಲೆ) ಮತ್ತು 201 (ಅಪರಾಧ ಸಂಬಂಧಿ ಪುರಾವೆ ನಾಶ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಈ ವಿಭಾಗದಿಂದ ಇನ್ನಷ್ಟು
-
ಹೊಸದಿಲ್ಲಿ: ಅಮೆರಿಕ ಮತ್ತು ಭಾರತದ ವಿದೇಶಾಂಗ ಮತ್ತು ರಕ್ಷಣಾ ಸಚಿವರ ನಡುವಿನ ಎರಡನೇ ಆವೃತ್ತಿಯ 2+2 ಮಾತುಕತೆ ಡಿ.18ರಂದು ವಾಷಿಂಗ್ಟನ್ನಲ್ಲಿ ನಡೆಯಲಿದೆ. ವಿದೇಶಾಂಗ...
-
ನವದೆಹಲಿ: ಸುಪ್ರೀಂಕೋರ್ಟ್ನಲ್ಲಿ ಇತ್ಯರ್ಥವಾಗುವ ಪ್ರಕರಣಗಳ ತೀರ್ಪಿನ ಪ್ರತಿಗಳನ್ನು ಕನ್ನಡ ಸೇರಿ ಭಾರತದ ಪ್ರಮುಖ ಒಂಭತ್ತು ಭಾಷೆಗಳಿಗೆ ಭಾಷಾಂತರಗೊಳಿಸಬಲ್ಲ...
-
ಅಹಮದಾಬಾದ್: ಗುಜರಾತ್ನ ನರ್ಮದಾ ಜಿಲ್ಲೆಯಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಏಕತಾ ಪ್ರತಿಮೆ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿರುವುದು...
-
ಹೊಸದಿಲ್ಲಿ: ದೇಶದಲ್ಲಿ ಆರ್ಥಿಕ ಹಿಂಜರಿತ ಕಾಡಿದ್ದರೂ, ವಿಮಾನ ಪ್ರಯಾಣಿಕರ ಸಂಖ್ಯೆ ಏರಿದ್ದು, ಶೇ.3.86ರಷ್ಟು ಏರಿಕೆಯಾಗಿದೆ. ಇದೇ ವೇಳೆ ಒಂದು ತಿಂಗಳಲ್ಲಿ ಶೇ.11.2ರಷ್ಟು...
-
ಗೌಹಾತಿ: ಪೌರತ್ವ (ತಿದ್ದುಪಡಿ) ಕಾಯ್ದೆ ಜಾರಿಯಾಗುವುದನ್ನು ವಿರೋಧಿಸಿ ಅಸ್ಸಾಂ ರಾಜ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆ ಇಂದು ಹಿಂಸಾರೂಪವನ್ನು ತಳೆದಿದೆ. ಪ್ರತಿಭಟನಾಕಾರರ...
ಹೊಸ ಸೇರ್ಪಡೆ
-
ವಾಂಕೂವರ್: ವಿದ್ಯುಚ್ಛಕ್ತಿ ಬಳಸಿ ಹಾರಾಟ ನಡೆಸುವ ವಿಶ್ವದ ಮೊದಲ ವಾಣಿಜ್ಯಿಕ ವಿಮಾನದ ಹಾರಾಟ ಯಶಸ್ವಿಯಾಗಿ ನಡೆದಿದೆ. ಕೆನಡಾದ ವಾಂಕೂವರ್ನಲ್ಲಿ ಹದಿನೈದು ನಿಮಿಷಗಳ...
-
ಹೊಸದಿಲ್ಲಿ: ಇಬ್ಬರು ಭಾರತೀಯ ಮಹಿಳೆಯರು ಏಷ್ಯಾದ ಮಾದಕ ಮಹಿಳೆಯರ ಪಟ್ಟಿಯಲ್ಲಿ ಅತ್ಯುನ್ನತ ಸ್ಥಾನ ಸಂಪಾದಿಸಿದ್ದಾರೆ. ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು...
-
ಲಾಹೋರ್: ಜಮಾತ್ ಉದ್ ದಾವಾ (ಜೆಯುಡಿ) ಉಗ್ರ ಹಫೀಜ್ ಸಯೀದ್ ಮತ್ತು ಇತರರು ತಮ್ಮ ಮೇಲಿರುವ 23 ಎಫ್ಐಆರ್ಗಳನ್ನು ವಜಾ ಮಾಡಬೇಕು ಎಂದು ಸಲ್ಲಿಸಿದ್ದ ಅರ್ಜಿಯನ್ನು...
-
ಹೊಸದಿಲ್ಲಿ: ಅಮೆರಿಕ ಮತ್ತು ಭಾರತದ ವಿದೇಶಾಂಗ ಮತ್ತು ರಕ್ಷಣಾ ಸಚಿವರ ನಡುವಿನ ಎರಡನೇ ಆವೃತ್ತಿಯ 2+2 ಮಾತುಕತೆ ಡಿ.18ರಂದು ವಾಷಿಂಗ್ಟನ್ನಲ್ಲಿ ನಡೆಯಲಿದೆ. ವಿದೇಶಾಂಗ...
-
ಲಂಡನ್: ಬ್ರಿಟನ್ನ ಚುನಾವಣೆ ನಡುವೆಯೇ ಪ್ರಧಾನಿ ಬೋರಿಸ್ ಜಾನ್ಸನ್ ಫ್ರಿಡ್ಜ್ನಲ್ಲಿ ಅಡಗಿ ಕುಳಿತ ಸುದ್ದಿಯೊಂದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಪ್ರಧಾನಿ...