
ಫೈಟರ್ ಜೆಟ್ ಅವಘಡದಲ್ಲಿ ಓರ್ವ ಫೈಲಟ್ ಸಾವು; ನೂರು ಕಿ.ಮೀ ದೂರ ಬಿತ್ತು ಅವಶೇಷ
Team Udayavani, Jan 28, 2023, 2:47 PM IST

ಭೋಪಾಲ್: ಮಧ್ಯಪ್ರದೇಶದ ಮೊರೆನಾದಲ್ಲಿ ನಡೆದ ಫೈಟರ್ ಜೆಟ್ ಅವಘಡ ಘಟನೆಯಲ್ಲಿ ಓರ್ವ ಪೈಲಟ್ ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ.
ಮೊರೆನಾದಲ್ಲಿ ಶನಿವಾರ ಬೆಳಗ್ಗೆ ಭಾರತೀಯ ವಾಯುಪಡೆಯ ಎರಡು ಯುದ್ಧ ವಿಮಾನಗಳು ಪತನಗೊಂಡ ಘಟನೆ ನಡೆದಿದೆ.
ಸುಖೋಯ್ ಸು-30ಎಂಕೆಐ ಮತ್ತು ಮಿರಾಜ್ 2000 ಯುದ್ಧವಿಮಾನಗಳು ಈ ಪ್ರದೇಶದಲ್ಲಿ ಅಭ್ಯಾಸ ಮಾಡುತ್ತಿದ್ದವು ಎಂದು ವರದಿಯಾಗಿದೆ. ಎರಡೂ ವಿಮಾನಗಳು ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿರುವ ವಾಯುನೆಲೆಯಿಂದ ಟೇಕಾಫ್ ಆಗಿತ್ತು
‘ಮಿರಾಜ್ ಮತ್ತು ಸುಖೋಯ್ ಬೆಳಿಗ್ಗೆ ಗ್ವಾಲಿಯರ್‌ನಿಂದ ಹೊರಟವು. ವಾಯುಸೇನೆ ಪ್ರಕಾರ ಒಂದು ವಿಮಾನದಲ್ಲಿ ಇಬ್ಬರು ಪೈಲಟ್‌ಗಳಿದ್ದರೆ, ಇನ್ನೊಂದು ವಿಮಾನದಲ್ಲಿ ಒಬ್ಬರು ಪೈಲಟ್ ಇದ್ದರು. ಘಟನೆಯ ಬಳಿಕ ಇಬ್ಬರನ್ನು ರಕ್ಷಿಸಲಾಗಿದೆ, ಮೂರನೇ ವ್ಯಕ್ತಿಯ ದೇಹದ ಭಾಗಗಳು ಸಿಕ್ಕಿವೆ. ಜೆಟ್ ನ ಕೆಲವು ಭಾಗಗಳು ಭರತ್ ಪುರದಲ್ಲಿ (ರಾಜಸ್ಥಾನ) ಕಂಡುಬಂದಿದ್ದು, ವಿವರಗಳನ್ನು ಸಂಗ್ರಹಿಸಲಾಗುತ್ತಿದೆ” ಎಂದು ಮೊರೆನಾ ಎಸ್‌ಪಿ ಹೇಳಿದ್ದಾರೆ.
ಇದನ್ನೂ ಓದಿ:ರಾಷ್ಟ್ರೀಯತೆಯ ಮೇಲೆ ಕೆಲಸ ಮಾಡಿದ್ದಕ್ಕೆ ದೇಶ ವಿರೋಧಿ ಶಕ್ತಿಗಳಿಂದ ಸಿಗುವ ಪ್ರತಿಫಲವಿದು: ಡಾ. ಭರತ್ ಶೆಟ್ಟಿ
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಿಡಿಎಸ್ ಜನರಲ್ ಅನಿಲ್ ಚೌಹಾಣ್ ಮತ್ತು ಐಎಎಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ. ಅವರು ಅಪಘಾತದ ಕುರಿತು ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

ಮುಂಬೈ-ಚೆನ್ನೈ ಅಲ್ಲ, ಐಪಿಎಲ್ ವಿಜೇತರ ಬಗ್ಗೆ ಭವಿಷ್ಯ ನುಡಿದ ಮೈಕಲ್ ವಾನ್

ಹುಣಸೂರು: ಮೊದಲ ವರ್ಷಧಾರೆಗೆ ನೂರಾರು ಎಕರೆ ಬಾಳೆ ಬೆಳೆ ನಾಶ, ಲಕ್ಷಾಂತರ ರೂ. ನಷ್ಟ

ಗುಜರಾತ್ ನಲ್ಲಿ ಪ್ರಧಾನಿ ಮೋದಿ ವಿರುದ್ಧ ಪೋಸ್ಟರ್ ಅಭಿಯಾನ; 8 ಮಂದಿ ಬಂಧನ: ವರದಿ

ಹುಣಸೂರು: ಇಂದಿನಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆ

ಕಾಡಾನೆಯ ಹನಿಟ್ರ್ಯಾಪ್: ತೀರ್ಥಹಳ್ಳಿ ಪಟ್ಟಣಕ್ಕೆ ನುಗ್ಗಿದ್ದ ಕಾಡಾನೆಯ ಸೆರೆಯಾಗಿಸಿದ ಭಾನುಮತಿ