ನಟಿ ಅಪಹರಣಕ್ಕೆ 3 ಕೋಟಿ ಕೊಟ್ಟಿದ್ದ ನಟ ದಿಲೀಪ್
Team Udayavani, Sep 28, 2017, 7:55 AM IST
ಕೊಚ್ಚಿ: ಬಹು ಭಾಷಾ ನಟಿಯನ್ನು ಅಪಹರಿಸಿ, ಲೈಂಗಿಕ ಕಿರುಕುಳ ನೀಡಲು ನಟ ದಿಲೀಪ್ ಅಪಹರಣಕಾರರಿಗೆ 3 ಕೋಟಿ ರೂ. ನೀಡುವುದಾಗಿ ಹೇಳಿದ್ದ. ಈ ಪೈಕಿ 1.5 ಕೋಟಿ ರೂ. ಮೊತ್ತವನ್ನು ಮುಖ್ಯ ಸೂತ್ರಧಾರ ಪಲ್ಸರ್ ಸುನಿಗೆ ನೀಡುವುದಾಗಿ ದಿಲೀಪ್ ಹೇಳಿದ್ದ ಎಂದು ನಟಿಯ ಪರ ವಕೀಲರು ಕೇರಳ ಹೈಕೋರ್ಟ್‌ಗೆ ತಿಳಿಸಿದ್ದಾರೆ. ಒಂದು ವೇಳೆ ಆತನೇನಾದರೂ ಪೊಲಿಸರಿಗೆ ಸೆರೆಸಿಕ್ಕರೆ ಈ ಮೊತ್ತದ ದುಪ್ಪಟ್ಟು ನೀಡುವುದಾಗಿ ಹೇಳಿದ್ದ ಎಂದು ಪ್ರಾಸಿಕ್ಯೂಟರ್ ಕೋರ್ಟ್‌ಗೆ ಹೇಳಿದರು.
ಕಾಯ್ದಿರಿಸಿದ ತೀರ್ಪು: ಇದೇ ವೇಳೆ ಪ್ರಕರಣದಲ್ಲಿ ಬಂಧಿತರಾಗಿರುವ ದಿಲೀಪ್ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ. ಅಂದ ಹಾಗೆ ಇದು ಅವರು ಸಲ್ಲಿಸಿರುವ ಮೂರನೇ ಜಾಮೀನು ಅರ್ಜಿ. ಈ ಹಿಂದೆ ನಾಲ್ಕು ಬಾರಿ ಸ್ಥಳೀಯ ಕೋರ್ಟ್ ಮತ್ತು ಹೈಕೋರ್ಟ್‌ಗೆ ಸಲ್ಲಿಕೆಯಾಗಿದ್ದ ಅರ್ಜಿ ತಿರಸ್ಕೃತಗೊಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಮರನಾಥ ಯಾತ್ರೆ : ಬೆಳಗ್ಗೆ 7 ರಿಂದ ಸಂಜೆ 6 ರ ನಡುವೆ ಮಾತ್ರ ಪ್ರಯಾಣ
ಸಿಎಂ ಮಮತಾ ಬ್ಯಾನರ್ಜಿ ಮನೆಯಲ್ಲಿ ಭಾರಿ ಭದ್ರತಾ ಲೋಪ ; ತನಿಖೆ
ಉದಯಪುರ-ಅಮರಾವತಿ ಹತ್ಯೆಗಳನ್ನು ಖಂಡಿಸಿದ ದೆಹಲಿ ಸಿಎಂ ಕೇಜ್ರಿವಾಲ್
ಡಬಲ್ ಇಂಜಿನ್ ಸರ್ಕಾರ ರಚಿಸಿ ತೆಲಂಗಾಣದ ಅಭಿವೃದ್ಧಿಯ ವೇಗ ಹೆಚ್ಚಿಸಿ: ಪ್ರಧಾನಿ ಮೋದಿ
408 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ: ತಮಿಳುನಾಡಿನ ಎರಡು ಸಂಸ್ಥೆಗಳ ವಿರುದ್ಧ ಇ.ಡಿ. ಕ್ರಮ